Advertisement

ಪೊಲೀಸರು ಕಾಲು ಮುರೀತಾರೆ

12:10 PM Dec 16, 2018 | Team Udayavani |

ಬೆಂಗಳೂರು: ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾಮಾಜಿಕ ಸಾಸ್ಥ್ಯ ಕದಡುವ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಪೊಲೀಸರು ಕಾಲು ಮುರಿಯುತ್ತಾರೆ ಎಂದು ಗೃಹ ಸಚಿವ ಡಾ. ಪರಮೇಶ್ವರ್‌ ರೌಡಿಗಳಿಗೆ ಎಚ್ಚರಿಕೆ ನೀಡಿದರು.

Advertisement

ದೇವರಜೀವನಹಳ್ಳಿ ( ಡಿ.ಜೆ ಹಳ್ಳಿ) ನೂತನ ಪೊಲೀಸ್‌ ಠಾಣೆಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ಅಪರಾಧ ಕೃತ್ಯಗಳಲ್ಲಿ ನಿರಂತರವಾಗಿ ಭಾಗವಹಿಸುವವರ ಕಾಲಿಗೆ ಗುಂಡು ಹೊಡೆಯುತ್ತಾರೆ. ನಾನಂತೂ ಇದನ್ನು ಬೇಡ ಎನ್ನುವುದಿಲ್ಲ ಎಂದಿದ್ದಾರೆ.

ವರ್ಷದ ಹಿಂದೆ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಡಿ.ಜಿ. ಹಳ್ಳಿ ಪೊಲೀಸ್‌ ಠಾಣೆಯ ಕಟ್ಟಡವನ್ನು ಇಂದು ನಾನೇ ಉದ್ಘಾಟಿಸುತ್ತಿರುವುದು ಸಂತಸ ನೀಡಿದೆ. ಮೂರು ಕೋಟಿ ರು. ನಲ್ಲಿ ಪೊಲೀಸ್‌ ಠಾಣೆ, ಉರ್ದು ಶಾಲೆ ಹಾಗೂ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಈ ಭಾಗದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚು ವಾಸಿಸುತ್ತಿದ್ದು,  ಅಪರಾಧ ಕೃತ್ಯಗಳಲ್ಲಿ ಯಾರೂ ಪಾಲ್ಗೊಳ್ಳಬೇಡಿ ಎಂದು ಕಿಮಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ  ಪೊಲೀಸ್‌ ಇಲಾಖೆಯಲ್ಲಿ ಶಿಸ್ತು ಕಡಿಮೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂದು ಶಿಸ್ತು ಕೇವಲ ಮಿಲಿಟರಿ ಹಾಗೂ ಪೊಲೀಸ್‌ ಇಲಾಖೆಯಲ್ಲಿ ಮಾತ್ರ ಉಳಿದಿದೆ. ಈಗ ಪೊಲೀಸರು ಶಿಸ್ತು ಮರೆತರೆ ಅದನ್ನು ಸಹಿಸಲು ಆಗದು.ಕಿರಿಯ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಶಿಸ್ತು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next