Advertisement

ಏಕ ವ್ಯಕ್ತಿಯ ಸುತ್ತ ದಿ ಪ್ಲೇ ಆಫ್ ಗಾಡ್‌

04:19 PM Mar 09, 2022 | Team Udayavani |

ಈಗಾಗಲೇ “ಎವಿಡೆನ್ಸ್‌’ ಎಂಬ ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಚಿತ್ರವನ್ನು ನಿರ್ದೇಶಿಸಿರುವ ಯುವ ನಿರ್ದೇಶಕ ವನ್ನಾ ಪ್ರವೀಣ್‌ ರಾಮಕೃಷ್ಣ ಈಗ “ದಿ ಪ್ಲೇ ಆಫ್ ಗಾಡ್‌’ ಮತ್ತೂಂದು ಹೊಸಚಿತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

Advertisement

ಈ ಸಿನಿಮಾದ ವಿಶೇಷವೆಂದರೆ, ಇಡೀ ಸಿನಿಮಾ ಒಂದೇ ಪಾತ್ರದ ಸುತ್ತ ಮತ್ತು ಒಂದೇ ಲೊಕೇಶನ್‌ನಲ್ಲಿ ನಡೆಯಲಿದ್ದು, ತೆರೆಮೇಲೆ ಕೂಡ ಒಂದೇ ಪಾತ್ರ ಕಾಣಲಿದೆ. ಸೈಕಲಾಜಿಕಲ್‌ ಕ್ರೈಂ ಥ್ರಿಲ್ಲರ್‌ ಕಥಾ ಹಂದರ ಹೊಂದಿರುವ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ರೋಬೋ ಗಣೇಶನ್‌ ಕಾಣಿಸಿಕೊಳ್ಳುತ್ತಿದ್ದಾರೆ.

“ಶ್ರೀಧೃತಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ದಿ ಪ್ಲೇ ಆಫ್ ಗಾಡ್‌’ ಚಿತ್ರಕ್ಕೆ ಪ್ರವೀಣ್‌ ರಾಮಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

“ಕನ್ನಡದಲ್ಲಿ ಇದೊಂದು ಹೊಸ ಪ್ರಯೋಗದ ಸಿನಿಮಾವಾಗಲಿದ್ದು, ಒಂದೇ ಮನೆಯಲ್ಲಿ ಇಡೀ ಸಿನಿಮಾದ ಶೂಟಿಂಗ್‌ ನಡೆಯಲಿದ್ದು, ಮಧ್ಯ ವಯಸ್ಸಿನ ಏಕವ್ಯಕ್ತಿಯ ಪಾತ್ರವನ್ನ ರೋಬೊ ಗಣೇಶನ್‌ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next