Advertisement

Aeroplane: ಲ್ಯಾಂಡ್‌ ಆದ ಕ್ಷಣವೇ ವಿಮಾನ ಟೇಕಾಫ್

12:31 AM May 25, 2023 | Team Udayavani |

ಗಾಂಧಿನಗರ: ಚಂಡೀಗಢದಿಂದ ಅಹ್ಮದಾ­ಬಾದ್‌ಗೆ ಪ್ರಯಾಣಿಸುತ್ತಿದ್ದ ಇಂಡಿಗೊ ವಿಮಾನವೊಂದು ಭೂ ಸ್ಪರ್ಶ ಮಾಡು­ತ್ತಿದ್ದಂತೆ ಮತ್ತೆ ಇದ್ದಕ್ಕಿದ್ದಂತೆ ಟೇಕಾಫ್ ಆಗಿದ್ದು, ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದ ಘಟನೆ ವರದಿಯಾಗಿದೆ. ಅಹ್ಮದಾಬಾದ್‌ನ ಸರ್ದಾರ್‌ ವಲ್ಲಭ­ಬಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ 8.45ರ ವೇಳೆಗೆ ಇಂಡಿಗೊ ವಿಮಾನ ಭೂಸ್ಪರ್ಶಿಸಿದೆ. ಆದರೆ ಕೆಲವೇ ಸೆಕೆಂಡುಗಳಲ್ಲಿ ಏಕಾಏಕಿ ಮತ್ತೆ ಆಕಾಶಕ್ಕೆ ಹಾರಿದೆ. ಈ ರೀತಿ ವಿಚಿತ್ರ ವಾಗಿ ವಿಮಾನ ಟೇಕಾಫ್ ಆದ ಹಿನ್ನೆಲೆಯಲ್ಲಿ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಬಳಿಕ 9.15ರವರೆಗೆ ಆಕಾಶದಲ್ಲೇ ಇದ್ದ ವಿಮಾನ ಅನಂತರ ಲ್ಯಾಂಡಿಂಗ್‌ ಆಗಿದೆ. ಪ್ರಯಾಣಿ ಕರಲ್ಲಿ ಒಬ್ಬರಾಗಿದ್ದ ಡಾ| ನೀಲ್‌ ಎನ್ನುವವರು ವಿಮಾನದಲ್ಲಾದ ಈ ಘಟನೆ ಕುರಿತು ಸ್ಪಷ್ಟನೆ ಕೋರಿ ಡಿಜಿಸಿಎ ಹಾಗೂ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ. ಬಳಿಕ ವಿಮಾನ ಲ್ಯಾಂಡಿಂಗ್‌ಗೆ ಎಟಿಸಿ ಅನುಮತಿ ನೀಡಿರದ ಕಾರಣ ಆ ರೀತಿ ಇದ್ದಕ್ಕಿದ್ದಂತೆ ಟೇಕಾಫ್ ಆಗಿರುವುದಾಗಿ ಸಂಸ್ಥೆ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next