Advertisement
ಮಣಿಪಾಲ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಎಪ್ರಿಲ್‌ನಲ್ಲಿ ಗರಿಷ್ಠ ಮಟ್ಟದಲ್ಲಿತ್ತು, ಆ ಬಳಿಕ ಕ್ರಮೇಣ ಕಡಿಮೆಯಾಗುತ್ತ ಬಂದಿದೆ. ಜುಲೈಯಲ್ಲಿ ಅದು ಶೇ. 6.7 ಆಗಿತ್ತು. ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಕೊಂಚ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರದ ಬಿಸಿ ಇನ್ನಷ್ಟು ಶಮನಗೊಳ್ಳಲಿದೆ ಎಂದು ದಾಸ್ ಅಭಯ ನೀಡಿದ್ದಾರೆ.
Related Articles
Advertisement
2ಕೊರೊನಾ ಮತ್ತು ರಷ್ಯಾ- ಉಕ್ರೇನ್ ಯುದ್ಧದ ಬಳಿಕ ಏರಿಕೆಯಾಗಿದ್ದ ಉತ್ಪನ್ನಗಳ ಬೆಲೆ ಇಳಿಕೆಯಾಗುತ್ತಿದೆ ಮತ್ತು ಸರಬರಾಜು ವ್ಯವಸ್ಥೆಯ ಮೇಲೆ ಇದ್ದ ಒತ್ತಡ ಕಡಿಮೆ ಯಾಗಿದೆ. 2022ರಲ್ಲಿ ವರ್ಷ ಪೂರ್ತಿ ಕಚ್ಚಾತೈಲದ ಪ್ರತೀ ಬ್ಯಾರಲ್‌ಗೆ 105 ಡಾಲರ್ ಇರಬಹುದು ಎಂದು ಅಂದಾಜಿಸಲಾಗಿದ್ದರೂ ಆಗಸ್ಟ್ ನಲ್ಲಿ ಅದು 97.4 ಡಾಲರ್‌ಗೆ ಇಳಿದಿದೆ. ಹಣದುಬ್ಬರವು ನಮ್ಮ ಆಮದು-ರಫ್ತು ಪಾಲು ದಾರ ಅನೇಕ ದೇಶಗಳಿಗಿಂತ ಕಡಿಮೆಯೇ ಇದೆ.
3. ಗ್ರಾಹಕ ಉತ್ಪನ್ನಗಳ ನಿರೀಕ್ಷಿತ ಬೆಲೆಯಲ್ಲಿಯೂ ಇಳಿಕೆ ಯನ್ನು ಅಂದಾಜಿಸಲಾಗಿದೆ.
4. ಜಾಗತಿಕವಾಗಿ ಆಹಾರ ಧಾನ್ಯ ಗಳ ಕೊರತೆ ಮತ್ತು ಬೆಲೆ ಯೇರಿಕೆ ಕಂಡುಬರುತ್ತಿದ್ದರೂ ಭಾರತದಲ್ಲಿ ಅವುಗಳ ದಾಸ್ತಾನು ಸಾಕಷ್ಟಿದೆ. ಇದರಿಂದ ದೇಶೀಯವಾಗಿ ಆಹಾರ ಧಾನ್ಯಗಳ ಸರಬರಾಜು ಮತ್ತು ಬೆಲೆ ಸ್ಥಿರವಾಗಿರುವುದು ಸಾಧ್ಯ. ಆಹಾರ ಭದ್ರತೆ ಚೆನ್ನಾಗಿರಲಿದೆ.
5. ಆಗಸ್ಟ್ 26ರ ವರೆಗಿನ ಅಂಕಿ ಅಂಶಗಳಂತೆ ಭಾರತ 56,100 ಕೋಟಿ ಡಾಲರ್ ವಿದೇಶೀ ವಿನಿಮಯ ದಾಸ್ತಾನು ಹೊಂದಿದೆ. ಇದು ಬಾಹ್ಯ ಆರ್ಥಿಕ ಆಘಾತಗಳಿಂದ ರಕ್ಷಿಸಲಿದೆ.
6. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಆರೋಗ್ಯಯುತವಾಗಿದೆ. ಬಂಡವಾಳ ಮತ್ತು ಮುನ್ನೇರ್ಪಾಟುಗಳು ಚೆನ್ನಾಗಿವೆ, ಆಸ್ತಿಗಳ ಗುಣಮಟ್ಟ ಉತ್ತಮವಾಗಿದೆ. ಇದು ಆರ್ಥಿಕ ಸ್ಥಿರತೆಗೆ ಆಧಾರ ಸ್ತಂಭವಾಗಿದ್ದು, ಆರ್ಥಿಕ ಮಾರುಕಟ್ಟೆಯ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ.