Advertisement

ಪಿಲಿಚಾಮುಂಡಿ ಕಲ್ಲು ಅಪವಿತ್ರ: ಪ್ರತಿಭಟನೆ, ಕ್ರಮಕ್ಕೆ ಆಗ್ರಹ

11:06 AM Dec 24, 2017 | Team Udayavani |

ಬೆಳ್ತಂಗಡಿ: ಅನಾದಿ ಕಾಲದಿಂದ ನಂಬಿಕೆ, ಆಚರಣೆಯ ಸ್ಥಳ ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿಗೆ ಚಪ್ಪಲಿ ಇತ್ಯಾದಿ ಇಟ್ಟು ಅಪವಿತ್ರಗೊಳಿಸಿದ್ದರ ವಿರುದ್ಧ ವಿಹಿಂಪ, ಬಜರಂಗ ದಳ ಶುಕ್ರವಾರ ಪ್ರತಿಭಟನೆ ನಡೆಸಿತು. ಡಿ. 16ರಂದು ಇಲ್ಲಿ ದೈವದ ನೇಮ ನಡೆದಿತ್ತು. ಅದಾದ ಬಳಿಕ ಕಿಡಿಗೇಡಿಗಳು ಕಲ್ಲನ್ನು ಅಪವಿತ್ರಗೊಳಿಸಿದ್ದರು. ಕಟ್ಟೆಯ ಸುತ್ತ ಇದ್ದ ಬೇಲಿಯನ್ನೂ ಕೀಳಲಾಗಿದೆ. ಇದು ಕೋಮುಗಲಭೆ ಎಬ್ಬಿಸುವ ಹುನ್ನಾರ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಚಾರ. ಇಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

Advertisement

ವಿಹಿಂಪ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ, ಬಜರಂಗ ದಳ ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ತಾಲೂಕು ಸಂಚಾಲಕ ನವೀನ್‌ ನೆರಿಯ, ವೇಣೂರು ಸಂಚಾಲಕ ರಾಮ್‌ಪ್ರಸಾದ್‌ ಅಂಡಿಂಜೆ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್‌ ಜಿ. ಗೌಡ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸಂಪತ್‌ ಬಿ. ಸುವರ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಸೀತಾರಾಮ ಬಿ.ಎಸ್‌., ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾ.ಪಂ. ಸದಸ್ಯ ಶಶಿಧರ ಕಲ್ಮಂಜ, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್‌ ಅಗರ್ತ, ವಸಂತ ಮರಕಡ, ಉದಯ್‌ ಬಿ.ಕೆ., ಧರ್ಮ ಜಾಗರಣದ ದಿನಕರ್‌ ಆದೇಲು, ನಾರಾಯಣ ಆಚಾರ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next