Advertisement

ಹಂದಿಯ ಚಿತ್ರಕ್ಕಿದೆ 45,500 ವರ್ಷಗಳ ಇತಿಹಾಸ!

01:32 AM Jan 15, 2021 | Team Udayavani |

ಜಕಾರ್ತಾ: 2017ರಲ್ಲಿ ಇಂಡೋನೇಷ್ಯಾದ ಗುಹೆಯೊಂದರಲ್ಲಿ ಪತ್ತೆಯಾಗಿದ್ದ ಕಾಡುಹಂದಿಯ ವರ್ಣಚಿತ್ರ45,500 ವರ್ಷಗಳ ಹಿಂದೆ ರಚನೆಯಾಗಿದ್ದು ಎಂದು ಪುರಾತತ್ವಜ್ಞರು ಪತ್ತೆಹಚ್ಚಿದ್ದಾರೆ!

Advertisement

ಈ ಕುರಿತು ಜರ್ನಲ್‌ ಸೈನ್ಸ್‌ ಆಡ್ವಾನ್ಸ್‌ನಲ್ಲಿ ಅಧ್ಯಯನ ತಂಡವು ಬೆಳಕು ಚೆಲ್ಲಿದೆ. ಆಗಿನ ಮನುಷ್ಯ ಗಿಡಗಳ ದ್ರಾವಣ ಹಾಗೂ ಕೆಲವು ಕೆಂಪುಹೂವುಗಳ ಮಿಶ್ರಣ ಮಾಡಿ ಸುಲಾವೇಸಿ ಎಂದು ಕರೆಸಿಕೊಳ್ಳುವ ಕಾಡು ಹಂದಿಯ ಚಿತ್ರವನ್ನು ಬಿಡಿಸಿದ್ದನಂತೆ. ಗಮನಾರ್ಹ ಸಂಗತಿಯೆಂದರೆ, 2017ರ ವರೆಗೂ ಈ ಚಿತ್ರ ಪತ್ತೆಯಾಗಿರಲೇ ಇಲ್ಲ. ಅನಂತರದಿಂದ ಈ ಚಿತ್ರವು ಇಂಡೋನೇಷ್ಯಾದಲ್ಲಿ ಮಾನವಜೀವನಾರಂಭದ ಕುರಿತೂ ಕುತೂಹಲ ಸೃಷ್ಟಿಸಿದೆ. ಸುಲಾವೇಸಿ ಹಂದಿಗಳನ್ನು ಮನುಷ್ಯ ಸಹಸ್ರಾರು ವರ್ಷಗಳಿಂದ ಬೇಟೆಯಾಡುತ್ತಾ ಬಂದಿದ್ದಾನೆ. ವಿಶೇಷವಾಗಿ ಹಿಮಯುಗದ ಸಮಯದಲ್ಲಿ ಆ ಭಾಗದಲ್ಲಿ ಸುಲಾವೇಸಿ ಹಂದಿಯೇ ಮನುಷ್ಯನ ಪ್ರಮುಖ ಆಹಾರವಾಗಿತ್ತು. ಈ ಕಾರಣಕ್ಕಾಗಿಯೇ, ಗುಹೆಯಲ್ಲಿ ಪತ್ತೆಯಾದ ಚಿತ್ರವೂ ಅದರದ್ದೇ ಆಗಿದೆ ಎನ್ನುತ್ತಾರೆ ಪುರಾತತ್ವಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next