Advertisement
ಹಲಸು ಹಲವು ರೋಗಗಳಿಗೆ ರಾಮಬಾಣ: ಡಾ| ಸರಿತಾ ಹೆಗ್ಡೆ
ಸಿ.ಪಿ.ಸಿ.ಆರ್.ಐ. ಕಾಸರಗೋಡಿನ ಡಾ| ಸರಿತಾ ಹೆಗ್ಡೆ ಹಲಸಿನ ಖಾದ್ಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ನೀಡಿ ನಮ್ಮ ಆರೋಗ್ಯಕ್ಕೆ ಪೂರಕ ವಸ್ತುಗಳನ್ನು ಹಲಸಿನಿಂದ ತಯಾರಿಸಿ ದೀರ್ಘಕಾಲ ಕೆಡದಂತೆ ಕಾಪಾಡಬೇಕು. ಹಲಸು ಕ್ಯಾನ್ಸರನ್ನು ಮಾತ್ರವಲ್ಲ ಇತರ ಶರೀರದ ರೋಗಗಳನ್ನೂ ಗುಣಮಾಡಬಲ್ಲದು. ಇದ ರಲ್ಲಡಗಿರುವ ನಾರಿನಂಶ ಜೀರ್ಣಾಂಗ ಗಳನ್ನು ಸ್ವತ್ಛ ಮಾಡುತ್ತದೆ. ನಿಧಾನವಾಗಿ ಸಕ್ಕರೆ ಅಂಶವನ್ನು ಶರೀರಕ್ಕೆ ಬಿಡುಗಡೆ ಗೊಳಿಸುವುದರಿಂದ ಮಧುಮೇಹಿಗಳಿಗೂ ಇದರ ಸೇವನೆ ಫಲಕಾರಿಯಾಗಿದೆ. ಶರೀರದ ವಿಷವಸ್ತುಗಳನ್ನು ಇದು ದೇಹದಿಂದ ಹೊರ ಹಾಕುತ್ತದೆ ಎಂದು ನುಡಿದ ಇವರು ಹಲವಾರು ವಿವಿಧ ತಿಂಡಿಗಳನ್ನು ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸಿ ಕೊಟ್ಟರು.
Related Articles
ಮಧ್ಯಾಹ್ನ ಭೋಜನಕ್ಕೆ ಅನ್ನದ ಹೊರತು ಇತರ ಎಲ್ಲ ಪದಾರ್ಥಗಳೂ ಹಲಸಿನದ್ದೇ ಆಗಿತ್ತು.ಶಿಕ್ಷಕರಾದ ಉಮೇಶ್ ಪೆರ್ಲ ಮತ್ತು ಶಿವರಾಮ ಬೇಂಗಪದವು ಇವರ ನಾಯಕತ್ವ ದಲ್ಲಿ ಜರಗಿದ ಹಲಸು ಮೇಳಕ್ಕೆ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಶ್ರೀ ಶಂಕರ ಸೇವಾ ಸಮಿತಿ ಮತ್ತು ಅಕ್ಷಯ ಕೃಷಿ ಕೂಟ ಪೆರ್ಲ ಸಹಕಾರ ನೀಡಿದ್ದವು.
Advertisement
ಹಲಸಿಗೆ ನಮ್ಮಲ್ಲಿ ಇನ್ನೂ ಸರಿಯಾದ ಮಾನ್ಯತೆ ಸಿಕ್ಕಿಲ್ಲನಮ್ಮಲ್ಲಿ ಹಲಸಿನ ಬಗ್ಗೆ ಮಾತನಾಡಿದರೆ ತಮಾಷೆಯಾಗಿ ಕಾಣುತ್ತಾರೆ. ಶ್ರೀಲಂಕಾದಲ್ಲಿ ಹಲಸಿನ ಕುರಿತು ಮಾಹಿತಿ ನೀಡುವ 14 ಕೇಂದ್ರಗಳಿವೆ. ಶ್ರೀಲಂಕಾದವರಿಗೆ ಹಲಸು ಅನ್ನದ ಮರ, ದೇವ ವೃಕ್ಷ, ಆಹಾರದ ಅದ್ಭುತ ಕಚ್ಚಾವಸ್ತು. ರೆಡಿ ಟು ಕುಕ್ ಬೃಹತ್ ಉದ್ದಿªಮೆಯಾಗಿ ಬೆಳೆದಿದೆ. ವಿಯೆಟ್ನಾಂ, ಮಲೇಶಿಯಾ, ಚೀನ ವೈಜ್ಞಾನಿಕವಾಗಿ ಹಲಸು ತೋಟ ಬೆಳೆಸಿ, ಕೃಷಿ ಮಾಡಿ ಹಲಸನ್ನು ವಿದೇಶಗಳಿಗೆ ರಫ್ತು ಮಾಡುವ ಬೃಹತ್ ಉದ್ಯಮಗಳನ್ನು ಸ್ಥಾಪಿಸಿವೆ. ಆದರೆ ನಮ್ಮಲ್ಲಿ ಪ್ರಾಕೃತಿಕವಾಗಿ ಸಿಗುವ ಹಲಸಿಗೆ ಮಾನ್ಯತೆ ಬಂದಿಲ್ಲ. ಹಲಸಿನ ಉಪಯೋಗದ ಬಗ್ಗೆ ಕೀಳರಿಮೆ ಇದೆ. ನಮಗಿದು ಬಡವರ ಹಣ್ಣು. ಉತ್ತರ ಭಾರತದವರಿಗೆ ಇದು ಶ್ರೀಮಂತರ ಹಣ್ಣು. ಕೇರಳ ಇದನ್ನು ಸಿದ್ಧ ಉತ್ಪನ್ನಗಳ ಮೂಲಕ ಉತ್ತರ ಭಾರತದಲ್ಲಿ ಶ್ರೀಮಂತರ ಮನೆಬಾಗಿಲಿಗೆ ತಲಪಿಸುತ್ತದೆ. ನಮ್ಮ ಹಲಸಿಗೆ ಜಾಗತಿಕವಾಗಿ ಮಾನ ಬಂದಿದೆ. ಆದರೆ ನಮ್ಮ ಹಿತ್ತಿಲಿನ ಹಣ್ಣಿಗೆ ಮನೆಯಲ್ಲಿ ಮಾನ ಸಿಗಬೇಕಷ್ಟೆ ಎಂದು ಶ್ರೀಪಡ್ರೆ ವಿಷಾದಿಸಿದರು. 40ಕ್ಕೂ ಹೆಚ್ಚು ಹಲಸು ಖಾದ್ಯ
40ಕ್ಕೂ ಹೆಚ್ಚು ಹಲಸು ಖಾದ್ಯಗಳು ಸ್ಪರ್ಧೆಗಿಳಿದು ಪ್ರದರ್ಶನ ಕಂಡವು. ಹಲಸಿನ ವಿವಿಧ ತಿಂಡಿಗಳಾದ ಐಸ್ ಕ್ರೀಂ, ಹಲ್ವ, ಕ್ಷೀರ, ಬರ್ಫಿ, ಚಿಪ್ಸ್, ಜ್ಯೂಸ್, ಹಣ್ಣು, ಪಲ್ಪ್ ಮುಂತಾದ ವಸ್ತುಗಳು ಭರ್ಜರಿ ವ್ಯಾಪಾರ ಕಂಡವು. ಹಲಸಿನಡಿಗೆಯ ಪುಸ್ತಕಗಳು, ಹಲಸು ತುಂಡರಿಸುವ ಸಾಧನಗಳು, ಹಲಸಿನ ವಿವಿಧ ತಳಿಗಳ ಕಸಿ ಗಿಡಗಳು ಹಲಸು ಪ್ರಿಯರ ಮನೆ ಸೇರಿದವು. ಮಧ್ಯಾಹ್ನ ಭೋಜನಕ್ಕೆ ಅನ್ನದ ಹೊರತು ಇತರ ಎಲ್ಲ ಪದಾರ್ಥಗಳೂ ಹಲಸಿನದ್ದೇ ಆಗಿದ್ದವು.