Advertisement

ಕಲಾಪ ಭಂಗದಿಂದ ದೇಶಕ್ಕೆ ನಷ್ಟ: ಮೋದಿ

06:00 AM Aug 02, 2018 | |

ಹೊಸದಿಲ್ಲಿ: ಸಂಸತ್‌ ಅಧಿವೇಶನಕ್ಕೆ ಭಂಗ ಉಂಟಾದರೆ ಅದರಿಂದ ದೇಶಕ್ಕೇ ನಷ್ಟ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪಗಳು ಸುಗಮವಾಗಿ ಕಲಾಪಗಳು ನಡೆಯುವಂತೆ ಮಾಡುವುದು ಸಂಸದರ ಕರ್ತವ್ಯ. ಸಾಮಾನ್ಯ ಜನರ ಕಷ್ಟಗಳನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಿ ಅದರ ಬಗ್ಗೆ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಮಾಡಬೇಕಾಗಿರುವುದು ಅವರ ಹೊಣೆ ಎಂದು ಹೇಳಿದ್ದಾರೆ. 

Advertisement

ಸಂಸತ್‌ಭವನದ ಸೆಂಟ್ರಲ್‌ ಹಾಲ್‌ನಲ್ಲಿ 2014ರಿಂದ 2017ರ ವರೆಗಿನ “ಉತ್ತಮ ಸಂಸದೀಯ ಪಟು’ ಗೌರವ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಡವರ ಮತ್ತು ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತುವುದು ಸಂಸದರ ಕರ್ತವ್ಯ. ಸಂಸತ್‌ ಅಧಿವೇಶನ ನಡೆಸಲು ಸಾಧ್ಯವಾಗದೆ ಇದ್ದರೆ, ಅದರಿಂದ ದೇಶಕ್ಕೆ ನಷ್ಟ ಎಂದು ಅವರು ಹೇಳಿದ್ದಾರೆ. ಹಿರಿಯ ಸಂಸದರಾದ ಗುಲಾಂ ನಬಿ ಆಜಾದ್‌, ದಿನೇಶ್‌ ತ್ರಿವೇದಿ, ಹುಕುಂ ದೇವ್‌ ನಾರಾಯಣ ಯಾದವ್‌, ಭತೃಹರಿ ಮಹ್ತಾಬ್‌ಗ ಈ ಗೌರವ ಪ್ರದಾನ ಮಾಡಲಾಗಿದೆ.

ಪರಿಣತಿಯಿಂದ ಪರಿಹಾರ:  ಭಾರತ ಮತ್ತು ಚೀನಾ ನಡುವೆ 2017ರಲ್ಲಿ ಉಂಟಾಗಿದ್ದ ಡೋಕ್ಲಾಂ ವಿವಾದವನ್ನು ಉತ್ತಮ ರಾಜತಾಂತ್ರಿಕ ಪರಿಣತಿ ಮತ್ತು ಪ್ರೌಢಿಮೆಯಿಂದಲೇ ಬಗೆಹರಿಸಲಾಗಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್‌ ಲೋಕಸಭೆಗೆ ಬುಧವಾರ ಮಾಹಿತಿ ನೀಡಿದ್ದಾರೆ.  

ಮೊಬೈಲ್‌ ಸಂಪರ್ಕವಿಲ್ಲ: ದೇಶದ 43 ಸಾವಿರ ಗ್ರಾಮಗಳಿಗೆ ಇನ್ನೂ ಮೊಬೈಲ್‌ ಸಂಪರ್ಕ ಸಿಕ್ಕಿಲ್ಲ ಎಂದು ಕೇಂದ್ರ ದೂರ ಸಂಪರ್ಕ ಖಾತೆ ಸಹಾಯಕ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ. ಒಡಿಶಾ ದಲ್ಲಿ 9,940, ಮಹಾರಾಷ್ಟ್ರದಲ್ಲಿ 6,117, ಮಧ್ಯಪ್ರದೇಶದಲ್ಲಿ 5,558 ಗ್ರಾಮಗಳಿಗೆ ಮೊಬೈಲ್‌ ಸಂಪರ್ಕವಿಲ್ಲ ಎಂದು ಹೇಳಿದ್ದಾರೆ. ಕೇರಳ, ಪುದುಶೆರಿ, ಚಂಡೀಗಡ ದ ಗ್ರಾಮಗಳಿಗೆ ಇನ್ನೂ ಮೊಬೈಲ್‌ ಸಂಪರ್ಕ ಸಿಕ್ಕಿಲ್ಲ ಎಂದು ಸಿನ್ಹಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next