ಬೆಂಗಳೂರು: ವಿವಿಧ ಭದ್ರತಾ ಯೋಜನೆಯಡಿ ನೀಡುತ್ತಿರುವ ಪಿಂಚಣಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಇರುವ ತಾಂತ್ರಿಕ ತೊಂದರೆಯನ್ನು 3 ತಿಂಗಳಲ್ಲಿ ಪೂರ್ಣ ನಿವಾರಿಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸಭೆ ನಡೆಸಿದ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದ್ದಾರೆ. ಜತೆಗೆ ಪ್ರತಿ ವಾರ ಜಿಲ್ಲಾಧಿಕಾರಿಗಳು ಈ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.
ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸುಧಾರಣೆ ಅಗತ್ಯವಿದೆ. ಗ್ರಾಮೀಣ ಮತ್ತು ನಗರ ಅಕ್ರಮ-ಸಕ್ರಮ ಯೋಜನೆಯಾದ 94 ಸಿ ಮತ್ತು 94 ಸಿಸಿ ಪ್ರಕರಣಗಳ ಹಕ್ಕುಪತ್ರಗಳೊಂದಿಗೆಖಾತಾ ವಿತರಣೆ ಕಡ್ಡಾಯ ಎಂದರು.
ಶಿಸ್ತು ಕ್ರಮ: ಸಚಿವ ಕೃಷ್ಣಬೈರೇಗೌಡ ಮಾತನಾಡಿ, ರಾಜ್ಯದಲ್ಲಿ 8 ಸಾವಿರ ಬಿಲ್ ಕಲೆಕ್ಟರ್‌ಗಳಿದ್ದರೂ ಗ್ರಾಪಂಗಳಲ್ಲಿ ಸಾವಿರಾರು ಕೋಟಿ ರೂ. ತೆರಿಗೆ ಸಂಗ್ರಹ ಬಾಕಿ ಇದೆ. ತೆರಿಗೆ ಸಂಗ್ರಹ ಹೊರತಾಗಿ ಅವರಿಗೇ ಬೇರೆ ಕೆಲಸವೇನಿದೆ. ತೆರಿಗೆ ಸಂಗ್ರಹಿಸದ ಬಿಲ್ ಕಲೆಕ್ಟರ್‌ಗಳ ವಿರುದಟಛಿ ನೋಟಿಸ್ ಜಾರಿಗೊಳಿಸಬೇಕು. 3 ನೋಟಿಸ್ ಮೀರಿದರೂ ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಓಗಳಿಗೆ ಸೂಚಿಸಿದರು.
10 ಜಿಲ್ಲೆಗಳು ಇನ್ನೂ ಬಯಲು ಬಹಿರ್ದಸೆ ಮುಕ್ತ ಆಗಬೇಕು. ಅ. 2ರಂದು ಕೇಂದ್ರ ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಅಷ್ಟರೊಳಗೆ ಶೌಚಾಲಯಗಳ ನಿರ್ಮಾಣ ಆಗಬೇಕಿದೆ. ಹೈ.ಕ.ದ ಹಲವು ಗ್ರಾಮಗಳಲ್ಲಿ ಶೌಚಾಲಯಗಳಿಲ್ಲ. ರಾಯಚೂರಿನಲ್ಲಿ 1 ಲಕ್ಷ,ವಿಜಯಪುರದಲ್ಲಿ 88 ಸಾವಿರ, ಬೀದರ್‌ನಲ್ಲಿ 75 ಸಾವಿರ, ಬೆಳಗಾವಿಯಲ್ಲಿ 95 ಸಾವಿರ, ಬಾಗಲಕೋಟೆಯಲ್ಲಿ 26 ಸಾವಿರ, ತುಮಕೂರಿನಲ್ಲಿ 33,500,ಕಲಬುರ್ಗಿಯಲ್ಲಿ 53 ಸಾವಿರ, ಬಳ್ಳಾರಿಯಲ್ಲಿ 11 ಸಾವಿರ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ ಎಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಸಮರ್ಪಕ ಕುಡಿವ ನೀರು ಒದಗಿಸದ ರಾಯಚೂರು ಡಿಸಿಯನ್ನು ಸಚಿವ ದೇಶಪಾಂಡೆ
ತರಾಟೆಗೆ ತೆಗೆದುಕೊಂಡರು.