Advertisement

ಪಿಸಿಪಿಎನ್‌ಡಿಟಿ ಕಾಯ್ದೆ ಕಠಿಣ ಜಾರಿಗೆ ನಿರ್ಧಾರ

01:03 PM May 05, 2019 | pallavi |

ಬೆಳಗಾವಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಸಕ್ಷಮ ಪ್ರಾಧಿಕಾರ, ಪಿಸಿಪಿಎನ್‌ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಯಿತು.

Advertisement

ಗಡಿ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದ ಜಿಲ್ಲಾ ಸಕ್ಷಮ ಪ್ರಾಧಿಕಾರಗಳೊಂದಿಗೆ ಸೇರಿ ಬೆಳಗಾವಿ ನಗರದಲ್ಲಿ ಪಿಸಿಪಿಎಸ್‌ಡಿಟಿ ಕಾಯ್ದೆಯ ಅರಿವು ಮೂಡಿಸಲು ಮತ್ತು ಕಠಿಣವಾಗಿ ಜಾರಿಗೊಳಿಸಲು ಕಾರ್ಯಾಗಾರ ನಡೆಸಲು ನಿರ್ಧರಿಸಲಾಯಿತು.

ಸ್ತ್ರೀಶಕ್ತಿ ಸಂಘ, ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು ಇನ್ನುಳಿದ ಮಹಿಳಾ ಸ್ವಯಂ ಸೇವಾ ಸಂಘಗಳ ಸಹಯೋಗದೊಂದಿಗೆ ಮುಂಬರುವ ದಿನಗಳಲ್ಲಿ ಕಾರ್ಯಗಾರ ಏರ್ಪಡಿಸಲು ತೀರ್ಮಾನಿಸಲಾಯಿತು.

ಜಿಲ್ಲೆಯಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳ ನೋಂದಣಿಗಾಗಿ ಪರವಾನಗಿ ಬಯಸಿ ಬಂದಿರುವ ಅರ್ಜಿಗಳನ್ನು ಮತ್ತು ನವೀಕರಣಕ್ಕಾಗಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿಗಾಗಿ ಸಭೆಯಲ್ಲಿ ಚರ್ಚಿಸಲಾಯಿತು.

ಸಲಹಾ ಸಮಿತಿ ಅಧ್ಯಕ್ಷ ಗೋಕಾಕನ ಡಾ| ಸಂಜಯ ಹೊಸಮಠ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಾದ ವಕೀಲರಾದ ಸುಮಿತಾ ಪಾಟೀಲ, ಸಾಮಾಜಿಕ ಕಾರ್ಯಕರ್ತೆ ಡಾ| ರಹೀಲಾ ಶೇಖ, ಬಿಮ್ಸ್‌ ಆಸ್ಪತ್ರೆ ರೆಡಿಯಾಲಾಜಿಸ್ಟ್‌ ಡಾ| ಈರಣ್ಣಾ ಪಲ್ಲೇದ, ಎನ್‌ಜಿಒ ಚೇರಮನ್‌ ಶ್ರೀಮಂತ ಸದಲಗೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಪ್ಪಾಸಾಹೇಬ ನರಟ್ಟಿ, ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಸ್‌.ವಿ. ಮುನ್ಯಾಳ, ಡಾ| ರಾಹುಲ್ ಬಾಗಚಂದಾನಿ, ಡಾ| ನಾಗರಾಜ್‌.ಪಿ ಹಾಗೂ ಪಿ.ಸಿ.ಪಿ.ಎನ್‌.ಡಿ.ಟಿ ಜಿಲ್ಲಾ ವಿಷಯ ನಿರ್ವಾಹಕ ಕಿರಣ ಶ್ರೀಮಂತ ಸಾವಂತನವರ ಇದ್ದರು. ಡಾ| ಎಸ್‌.ಪಿ. ಬೆಂಡಿಗೇರಿ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next