Advertisement
ಅತ್ಯಂತ ದುರ್ಬಲವಾಗಿರುವ ಎರಡು ಕೋಣೆಯ ಹಂಚು ಹಾಸಿದ ಕಲ್ಲು ಮಣ್ಣಿನ ಗೋಡೆಯಿಂದ ನಿರ್ಮಿಸಿದ ಹರುಕುಮುರುಕು ಮನೆಯೊಳಗೆ ಗಾಳಿ ಮಳೆಗೆ ಯಾವ ಕ್ಷಣದಲ್ಲೂ ಧರಾಶಾಯಿಯಾಗುವ ಭಯ,ಆತಂಕದಲ್ಲಿ ಇವರಿಬ್ಬರು ದಿನ ಕಳೆಯುತ್ತಿರುವರು. ಶೌಚಾಲಯ, ನೀರು ಮತ್ತು ವಿದ್ಯುತ್ತಿನ ಸಂಪರ್ಕವೂ ಇಲ್ಲದ ಈ ಮನೆಯಲ್ಲಿ ಮಾನಸಿಕ ಅಸ್ವಸ್ಥೆ, ಅರ್ಬುದ ರೋಗ ಪೀಡಿತೆ 45ರ ಹರೆಯದ ಪುತ್ರಿಯೊಂದಿಗೆ ದೇವಕಿ ಜೀವನ ಸಾಗಿಸುತ್ತಿದ್ದಾರೆ.
Related Articles
Advertisement
2016ರಲ್ಲಿ ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಯಲ್ಲಿ ಎಲ್ಲ ಮನೆಗೂ ಶೌಚಾಲಯ ನಿರ್ಮಿಸಲು ಅನುದಾನಕ್ಕೆ ಅರ್ಹರಾದ ಫಲಾನುಭವಿ ಪಟ್ಟಿಯಲ್ಲಿ ದೇವಕಿಯಮ್ಮನ ಹೆಸರು ಸೇರ್ಪಡೆಗೊಂಡಿದ್ದರೂ ಈ ವೇಳೆ ತನ್ನ ಅಸೌಖ್ಯ ಪೀಡಿತ ಮಗಳ ಚಿಕಿತ್ಸೆಗಾಗಿ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣಕ್ಕೆ ಅದರಿಂದ ಅವರು ವಂಚಿತರಾಗಿರುವರು.
ಕಳೆದ ವರ್ಷ ವಾರ್ಡು ಸದಸ್ಯೆ ಪುಷ್ಪಲತಾ ಶಾಂತಿಪಳ್ಳ ಇವರ ಮುತುವರ್ಜಿಯಿಂದ ಕೇಂದ್ರ ಸರಕಾರ ಉಜ್ವಲ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಮಂಚವೂ ಲಭಿಸಿರುವುದಾಗಿ ದೇವಕಿ ಅಮ್ಮ ಕೃತಜ್ಞತೆಯಿಂದ ನೆನೆಯುತ್ತಾರೆ.
ಆದರೆ ಎಲ್ಲಕ್ಕಿಂತ ಮುಖ್ಯವಾಗಿ ವಾಸಯೋಗ್ಯವಾಗಿರುವ ಸುಸಜ್ಜಿತ ಮನೆಯೊಂದು ದೇವಕಿ ಮತ್ತು ಅವರ ಪುತ್ರಿಯ ತುರ್ತು ಆವಶ್ಯಕತೆಯಾಗಿದೆ. ಇದಕ್ಕಾಗಿ ದೇವಕಿ ಅಮ್ಮನ ಕುಟುಂಬದ ಹಿತಚಿಂತಕರಾದ ಕೆಲವುಯುವಕರು ಸೇರಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆಯ ನೇತೃತ್ವದಲ್ಲಿ ಸಾರ್ವಜನಿಕ,ಉದಾರ ದಾನಿಗಳ ಆರ್ಥಿಕ ನೆರವಿನಿಂದ ಮೂಲಭೂತ ಸೌಕರ್ಯಗಳೊಂದಿಗೆ ಚಿಕ್ಕ ಚೊಕ್ಕದಾದ ಮನೆಯೊಂದನ್ನು ನಿರ್ಮಿಸಿಕೊಡಲು ಮತ್ತು ಅವರಿಬ್ಬರ ಕಾಯಿಲೆಗೆ ಔಷಧಿ,ಚಿಕಿತ್ಸೆ ಪಡೆಯಲು ಶಾಶ್ವತ ನಿಧಿ ಸಂಗ್ರಹಿಸಲು ಮುಂದಾಗಿರುವರು.
ಇದಕ್ಕೆ ಊರ ಪರವೂರ ಸಹೃದಯಿ ದಾನಿಗಳ, ಸಂಘ, ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಕಾರ ಆಗತ್ಯವಿದ್ದು ಆರ್ಥಿಕ ಸಹಾಯ ನೀಡಲಿಚ್ಚಿಸುವವರು ದೇವಕಿ ಅವರ ಖಾತೆ ಶ್ರೀಮತಿ ದೇವಕಿ ಡಿ/ಟ ತನಿಯನಾಯ್ಕ ಕೇರಳ ಗ್ರಾಮೀಣ ಬ್ಯಾಂಕ್,ಕುಂಬಳೆ ಶಾಖೆ SB A/c No 40517101045019-IFSC KLGB0040517 ಖಾತೆಗೆ ಪಾವತಿಸಬಹುದು.