Advertisement

ಚರ್ಚೆ ಇಲ್ಲದೆ ಮಸೂದೆ ಅಂಗೀಕಾರ ಅಪಾಯಕಾರಿ

06:30 AM Feb 16, 2019 | Team Udayavani |

ಬೆಂಗಳೂರು: ಸಂಸತ್‌ನಲ್ಲಿ ಶೇ.47ರಷ್ಟು ಮಸೂದೆಗಳು ಚರ್ಚೆಯಾಗದೇ ಅಂಗೀಕಾರವಾಗುತ್ತಿದ್ದು, ವಿರೋಧ ಪಕ್ಷಗಳು ಕೂಡ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಭವಿಷ್ಯದ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಹೇಳಿದರು.

Advertisement

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಶುಕ್ರವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2018ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು 30 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಬೆಳಗ್ಗೆ ಮಂಡನೆಯಾದ ಮಸೂದೆ ಮಧ್ಯಾಹ್ನ ರಾಜ್ಯಸಭೆಯಲ್ಲಿ ಅಂಗೀಕಾರವಾಗುತ್ತದೆ. ಮೂರು ದಿನ ಬಿಟ್ಟರೆ ಅದಕ್ಕೆ ರಾಷ್ಟ್ರಪತಿ ಅವರ ಅಂಕಿತ ಬೀಳುತ್ತದೆ. ಸಾರ್ವಜನಿಕವಾಗಿ ಚರ್ಚೆಯಾಗದೆ ಮಸೂದೆ ಅಂಗೀಕಾರವಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ತಿಳಿಸಿದರು.

ಸಂಸತ್‌ ಅಧಿವೇಶನ 120ರಿಂದ 130 ದಿನ ನಡೆಯಬೇಕಾಗಿತ್ತು. ಆದರೆ ಅದನ್ನು 60 ದಿನಕ್ಕೆ ಇಳಿಸಲಾಯಿತು. ಈಗ ಅರವತ್ತು ದಿನ ಸಂಪೂರ್ಣ ಅಧಿವೇಶನ ನಡೆಯುತ್ತಿಲ್ಲ. ವಿಧಾನ ಸಭೆಯಲ್ಲೂ ಹಣಕಾಸು ಮಸೂದೆ ಚರ್ಚೆಯಾಗದೇ ಅಂಗೀಕಾರಗೊಂಡಿತ್ತು. ಹೀಗಾದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಬೆಲೆ ಎಲ್ಲಿ ಎಂದು ಪ್ರಶ್ನಿಸಿದರು.

ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ಬಹಳಷ್ಟು ಜನಪ್ರತಿನಿಧಿಗಳಿಗೆ ಸಂವಿಧಾನ ರಚನೆ ಬಗ್ಗೆ ಅರಿವಿಲ್ಲ. ಆ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ರಚನೆ ಬಗೆಗಿನ ಪುಸ್ತಕಗಳನ್ನು ಉಚಿತವಾಗಿ ನೀಡುವ ಆಲೋಚನೆ ಇದೆ. ಆದರೆ ಪುಸ್ತಕ ಕೊಟ್ಟರೂ ಅವರು ಇದನ್ನು ಓದುತ್ತಾರೆ ಎಂಬುದು ಅನುಮಾನ ಎಂದು ಹೇಳಿದರು.

ಕುವೆಂಪು ಭಾಷಾ ಪ್ರಾಧಿಕಾರ ಕನ್ನಡಕ್ಕೆ ಭಾಷಾಂತರಿಸುವ ಅನ್ಯ ಭಾಷೆ ಕೃತಿಗಳು ಮಾರಾಟವಾಗಿವೆ. ಆದರೆ ಬೇರೆ ಭಾಷೆಗಳಿಗೆ ಭಾಷಾಂತರವಾದ ಕನ್ನಡದ ಹಲವು ಕೃತಿಗಳು ಇನ್ನೂ ಓದುಗರ ಕೈಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಸಾಹಿತಿ ಪ್ರೊ.ಕಾಶಿನಾಥ್‌ ಅಂಬಲಗೆ, ಶಾ.ಮಂ.ಕೃಷ್ಣರಾಯ ಸೇರಿ ಐದು ಮಂದಿಗೆ 2018ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಲಕ್ಷಿ$¾à ಚಂದ್ರಶೇಖರ್‌ ಸೇರಿ ಐದು ಮಂದಿಗೆ ಪುಸ್ತಕ ಬಹುಮಾನ ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next