Advertisement

ಕಾಪು  ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಪೆರೇಡ್‌

01:00 AM Mar 19, 2019 | Team Udayavani |

ಕಾಪು: ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ರೌಡಿ ಶೀಟರ್‌ಗಳನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಕಾಪು ವೃತ್ತ ನಿರೀಕ್ಷಕ ಶಾಂತರಾಮ್‌ ಅವರ ಮಾರ್ಗದರ್ಶನದಂತೆ ರವಿವಾರ ಬೆಳಗ್ಗೆ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ 39 ಮಂದಿ ರೌಡಿ ಶೀಟರ್‌ಗಳನ್ನು ಕಾಪು ಪೊಲೀಸ್‌ ಠಾಣೆಗೆ ಕರೆಯಿಸಿಕೊಂಡ ಪೊಲೀಸರು ಅವರ ಪೆರೇಡ್‌ ನಡೆಸಿ, ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಕಾಪು ಎಸ್ಸೆ ನವೀನ್‌ ಎಸ್‌. ನಾಯಕ್‌, ಕ್ರೈಂ ಎಸ್ಸೆ ಜಾನಕಿ, ಪ್ರೊಬೆಷನರಿ ಎಸ್ಸೆ ಸದಾಶಿವ, ಎಎಸ್‌ಐ ಚಂದ್ರಶೇಖರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next