Advertisement
ನಜೀರ ಮಕಾಂದಾರ ಎಂಬವರು ತಮ್ಮ ಸ್ವಂತ ಹೊಲದಲ್ಲಿ ಗುಂಡಿ ತೆಗೆದುಕೋಳಿಗಳನ್ನು ಹೂತಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಖರೀದಿದಾರರು ಇಲ್ಲದಿರುವುದು ಮತ್ತು ಬೆಳೆದು ನಿಂತ ಕೋಳಿ ಆಹಾರಕ್ಕೆ ವೆಚ್ಚ ಮಾಡಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.ಒಂದು ಕೆಜಿ ಕೋಳಿ ಮಾಂಸದ ದರ 8 ರಿಂದ 10 ರೂಪಾಯಿಗೆ ಇಳಿದಿದೆ. ಇನ್ನೊಂದೆಡೆ ಪ್ರತಿ ಕೆಜಿ ಕೋಳಿ ಆಹಾರದ ಬೆಲೆ 25 ರಿಂದ 30 ರೂ. ಇದೆ. ಒಂದು ಕೆಜಿ ಮಾಂಸ ತಯಾರಾಗಲು ಎರಡು ಕೆಜಿ ಆಹಾರ ನೀಡಬೇಕು.