ಬೆಳಗಾವಿ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಾಗೂ ವಿವಾಹ ವಿಚ್ಛೇದನದಿಂದ ನೊಂದಿದ್ದ ಬೆಳಗಾವಿಯ ಅಮೃತ ಫಾರ್ಮಾಸುÂಟಿಕಲ್ಸ್ ಕಂಪನಿ ಮಾಲೀಕ, ಉದ್ಯಮಿ ಶೈಲೇಶ ಶರದ ಜೋಶಿ (40) ತಮ್ಮ ಸ್ವಂತ ಪಿಸ್ತೂಲಿನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ವಿಜಯನಗರ ಬಳಿಯ ಗಣೇಶಪುರದ ಪೈಪ್‌ಲೈನ್ ರೋಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶೈಲೇಶ ಜೋಶಿ ಸೋಮವಾರ ರಾತ್ರಿ 1:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಮೇ 18ರಂದು ವಿವಾಹ ವಿಚ್ಛೇದನವಾಗಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳು ಪುಣೆಯಲ್ಲಿ ನೆಲೆಸಿದ್ದಾರೆ. ಶೈಲೇಶ ತನ್ನ ತಾಯಿಯೊಂದಿಗೆ ಬೆಳಗಾವಿಯಲ್ಲಿ ನೆಲೆಸಿದ್ದರು.
ಡೆತ್ ನೋಟ್‌ನಲ್ಲೇನಿದೆ?: ಶೈಲೇಶ ಜೋಶಿ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ತನ್ನ ಇಬ್ಬರು ಮಕ್ಕಳಿಗೆ ಕ್ಷಮೆ ಕೇಳಿದ್ದಾರೆ. ನನ್ನ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಬಾರದು. ನನ್ನ ಆಸ್ತಿಯನ್ನು ಮಾರಾಟ ಮಾಡಬಾರದು. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ. ಮನೆಯಲ್ಲಿಯೇಮಧ್ಯರಾತ್ರಿ ಗುಂಡು ಹಾರಿಸಿಕೊಂಡಿದ್ದರಿಂದ ಶಬ್ಧ ಕೇಳಿ ಅಕ್ಕಪಕ್ಕದ ಜನ ಎದ್ದಿದ್ದಾರೆ. ಕೂಡಲೇ ನಗರದ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ಶೈಲೇಶ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಲೈಸೆನ್ಸ್ ಪಿಸ್ತೂಲಿನಿಂದ ಶೂಟ್: ಹಿಂಡಲಗಾದಲ್ಲಿರುವ ಅಮೃತ ಫಾರ್ಮಾಸುÂಟಿಕಲ್ಸ್ ಕಂಪನಿ ನಡೆಸುತ್ತಿದ್ದ ಶೈಲೇಶ ಜೋಶಿ ತಿಂಗಳಿಂದ ಮಾನಸಿಕವಾಗಿ ತೀವ್ರ ನೊಂದಿದ್ದರು. ತಮ್ಮ ಹೆಸರಿನಲ್ಲಿ ಎರಡು ಪಿಸ್ತೂಲುಗಳ ಲೈಸೆನ್ಸ್ ಪಡೆದಿದ್ದರು. ಡಬಲ್ ಬ್ಯಾರೆಲ್ ಪಿಸ್ತೂಲು ಗನ್ ಅಂಗಡಿಯಲ್ಲಿ ಇಟ್ಟಿದ್ದರು. ಇನ್ನೊಂದು ಚಿಕ್ಕದಾದ 0.7 ಎಂಬ ರಿವಾಲ್ವಾರ್ ತಮ್ಮ ಮನೆಯಲ್ಲಿಯೇ ಇತ್ತು. ಇದೇ ಪಿಸ್ತೂಲಿನಿಂದ ಶೈಲೇಶ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಎಸ್.ಜಿ. ಪಾಟೀಲ, ಎಸಿಪಿ ಕಲ್ಯಾಣಶೆಟ್ಟಿ, ಕ್ಯಾಂಪ್ ಇನ್ಸ್‌ಪೆಕ್ಟರ್ ಪ್ರಕಾಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.ಮರಣೋತ್ತರ ಪರೀಕ್ಷೆ ಬಳಿಕ ಸದಾಶಿವ ನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ಯುವ ಉದ್ಯಮಿಯಾಗಿದ್ದ
ಶೈಲೇಶ ಜೋಶಿ
ಕೋಟ್ಯಂತರ ರೂ. ವಹಿವಾಟು ನಡೆಸುತ್ತಿರುವ ಈ ಕಂಪನಿಯಲ್ಲಿ ನೂರಾರು ಜನ ಕೆಲಸ ನಿರ್ವಹಿಸುತ್ತಿದ್ದಾರೆ. 1938ರಲ್ಲಿ ಶೈಲೇಶನ ಅಜ್ಜಿ ಮಾಯಿ ಜೋಶಿ ಅವರು ಅಮೃತ ಫಾರ್ಮಾಸುÂಟಿಕಲ್ಸ್ ಆರಂಭಿಸಿದ್ದರು.ನಂತರ ಇವರ ತಂದೆ ಶರದ್ ಅವರು ಈ ಅಮೃತ ಮಲಾಮು ಬೆಳೆಸಿದರು. ಇದನ್ನು ಮುಂದುವರಿಸಿದ ಶೈಲೇಶ ಜೋಶಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದಲ್ಲಿ ಈ ಕಂಪನಿಯನ್ನು ಬೆಳೆಸಿದರು. ಇದರಿಂದ ಕೋಟ್ಯಂತರ ರೂ. ವಹಿವಾಟು ಇದೆ. ಶೈಲೇಶ ಜೋಶಿಗೆ ಭಾರತೀಯಉದ್ಯೋಗ ರತ್ನ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಅಮೃತ ಮಲಾಮು ಭಾರೀ ಫೇಮಸ್: ಅಮೃತ ಫಾರ್ಮಾಸುÂಟಿ ಕಲ್ಸ್‌ನಲ್ಲಿ ಅಮೃತ ಮಲಾಮು ಭಾರೀ ಫೇಮಸ್ ಆಗಿದೆ. ಅಮೃತ ಹೆಸರಿನಲ್ಲಿ ಅನೇಕ ಉತ್ಪನ್ನಗಳನ್ನು ಹೊರ ತರಲಾಗಿದೆ. 1938ರಲ್ಲಿ
ಆರಂಭಿಸಿರುವ ಕಂಪನಿಯನ್ನು ತಂದೆ ನಂತರ ಮಗ ಶೈಲೇಶ ಮುಂದುವರಿಸಿಕೊಂಡು ಬಂದಿದ್ದರು. ಈ ಮಲಾಮು ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿದೆ.