Advertisement
ಶನಿವಾರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಶ್ರಮಿಕ ರೈಲಿನಲ್ಲಿ ಕಳುಹಿಸುವ ಬಗ್ಗೆ ಹಲವರಿಗೆ ಮೆಸೇಜ್ ಮೂಲಕ ದೃಢಪಡಿಸಲಾಗಿತ್ತು. ಆದರೆ, ನಿಗದಿಗಿಂತ ಹೆಚ್ಚು ಜನ ಸೇರಿದ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಯಿತು. ಅಲ್ಲದೆ, ವಲಸೆ ಕಾರ್ಮಿಕರಲ್ಲಿ ಹಲವರು ಬಾಡಿಗೆಗೆ ಇದ್ದ ಮನೆಗಳನ್ನು ಖಾಲಿ ಮಾಡಿಕೊಂಡು ಬಂದಿದ್ದರು. ಶನಿವಾರ ಊರುಗಳಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆಯೇ ವಲಸೆ ಕಾರ್ಮಿ ಕರು, ಗೇಟ್ ತಳ್ಳಾಡಿ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಸರೆ ಪಡೆದಿರುವ ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳದ 200 ಮಂದಿ ಕೂಲಿ ಮತ್ತು ಕಟ್ಟಡ ಕಾರ್ಮಿಕರು ಅಲ್ಲಿದ್ದು ಅವರೆಲ್ಲ ರಿಗೂ ಒಂದು ಸಲ ಸುಮಾರು 800 ರಿಂದ 1000 ವರೆಗೂ ಚಪಾತಿಗಳನ್ನು ತಯಾರು ಮಾಡಲಾ ಗುತ್ತದೆ ಎಂದು ಸ್ನೇಹ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸಂಚಾಲಕಿ ಭವಾನಿ ಹೇಳಿದ್ದಾರೆ. ತಮ್ಮೂರಿಗೆ ತೆರಳಲು ರೈಲುಗಾಗಿ ಕಾಯುತ್ತಿದ್ದು ಅವರೆಲ್ಲರ ಹಸಿವು ನೀಗಿಸುವ ಕೆಲಸವನ್ನು ಸ್ಥಳೀಯ ಸಿOಉà ಶಕ್ತಿ ಸಂಘಗಳು ಮಾಡುತ್ತಿವೆ.
ಕುಸಿದು ಬಿದ್ದ ವ್ಯಕ್ತಿ: ಸ್ಥಳದಲ್ಲಿ ಊರಿಗೆ ಹಿಂತಿರುಗಲು ಆಗಮಿಸಿದ್ದ ಒಡಿಶಾ ಮೂಲದ ಕಾರ್ಮಿಕನೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿಗೆ ಸಚಿವ ಡಾ. ಕೆ. ಸುಧಾಕರ್ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಒಡಿಶಾ ಮೂಲದ ಎರ್ಸಾದ್ ಎಂಬಾತ ದಿಢೀರ್ ಎಂದು ಕುಸಿದು ಬಿದ್ದು ಒದ್ದಾಡತೊಡಗಿದ್ದನ್ನು ಗಮನಿಸಿದ ಸಚಿವರು ತಕ್ಷಣ ಆತನಲ್ಲಿಗೆ ತೆರಳಿ ಆತನನ್ನು ಪರೀಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಆತನನ್ನು ಪೊಲೀಸ್ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಸಚಿವರು ಸೂಚನೆ ನೀಡಿದರು.