Advertisement

ಸಂಘಟನೆ ಸಾಮಾಜಿಕ ಕೊಂಡಿಯಾಗಲಿ

12:32 PM Mar 22, 2018 | |

ಜೇವರ್ಗಿ: ಸಂಘಟನೆಗಳು ಸಮಾಜಮುಖೀಯಾಗಿ ಕಾರ್ಯ ಮಾಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತೀಕರಣಕ್ಕೆ ಸಂಪರ್ಕದ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.

Advertisement

ತಾಲೂಕಿನ ಇಜೇರಿ ಗ್ರಾಮದಲ್ಲಿ ಬುಧವಾರ ಡಾ|ವಿಷ್ಣು ಸೇನಾ ಸಮಿತಿ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಡಾ| ವಿಷ್ಣುವರ್ಧನ ವೃತ್ತ ಉದ್ಘಾಟನೆ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಡಾ| ರಾಜಕುಮಾರ ಹಾಗೂ ಡಾ| ವಿಷ್ಣುವರ್ಧನ ನಾಡಿನ ಎರಡು ಅಮೂಲ್ಯ ರತ್ನಗಳು. ಕನ್ನಡ ಚಿತ್ರರಂಗಕ್ಕೆ ಇವರಿಬ್ಬರ ಪಾತ್ರ ಹಿರಿದು. ಅವರ ನೆನಪಿನಲ್ಲಿ ಇಂತಹ ಸಾಮಾಜಿಕ ಕಾರ್ಯಕ್ರಮ ಆಯೋಜಿಸಿರುವ ಸಮಿತಿ ಮುಖಂಡರ ಕಾರ್ಯ ಶ್ಲಾಘನೀಯ ಎಂದರು.

ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಡಾ| ಶರಣು ಗದ್ದುಗೆ ಮಾತನಾಡಿ, ಅನ್ಯ ಭಾಷೆಗಳನ್ನು ದ್ವೇಷಿಸದೆ ಕನ್ನಡ ಭಾಷೆ ಪ್ರೀತಿಸಬೇಕು, ಬೆಳೆಸಬೇಕು, ಪೋಷಿಸಬೇಕು ಎಂದರು.

ಇದೆ ವೇಳೆ ಶಿವಶರಣಪ್ಪಗೌಡ ಯಂಕಂಚಿ, ಪತ್ರಕರ್ತ ವಿಜಯಕುಮಾರ ಕಲ್ಲಾ, ನಾಗಪ್ಪಗೌಡ ಕಲ್ಲಹಂಗರಗಾ, ಶಂಕರಲಿಂಗ ಪೂಜಾರಿ, ಯಮನಪ್ಪ ಸಾಥಖೇಡ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಯಲಗೋಡ-ಮೋರಟಗಿ ವಿರಕ್ತ ಮಠದ ಗುರುಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ ವೃತ್ತ ಉದ್ಘಾಟಿಸಿದರು. ಸಮಿತಿ ತಾಲೂಕು ಅಧ್ಯಕ್ಷ ಬಸವರಾಜ ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಶಿವಣಗೌಡ ಹಂಗರಗಿ, ತಾಪಂ ಉಪಾಧ್ಯಕ್ಷ ಗೊಲ್ಲಾಳಪ್ಪ ಕರಕಿಹಳ್ಳಿ, ಗ್ರಾಪಂ ಅಧ್ಯಕ್ಷ ಗುಂಡಪ್ಪ ಗೌಡಗೇರಿ, ರಾಜಶೇಖರ ಸೀರಿ, ಎಸ್‌.ಎಸ್‌.ಸಲಗರ, ಮಹಿಬೂಬ ಇನಾಮದಾರ, ಭಗವಂತ್ರಾಯ ಬೆಣ್ಣೂರ, ಶ್ರೀಶೈಲ ದ್ಯಾಮಗೊಂಡ, ಅಲ್ಲಾ ಪಟೇಲ ಹೂಡಾ, ಸದಾನಂದ ಪಾಟೀಲ, ಸಮಿತಿ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ, ಉಪಅಧ್ಯಕ್ಷ ಕೊಟ್ರೇಶ ಬಾರ್ಕಿ, ಶಿವಶಂಕರ ಜವಳಗಿ ಮುಖ್ಯ ಅತಿಥಿಗಳಾಗಿದ್ದರು.

ಬಸವರಾಜ ಬಾಗೇವಾಡಿ ಸ್ವಾಗತಿಸಿದರು, ಬಿ.ಎಚ್‌.ಮಾಲಿಪಾಟೀಲ ನಿರೂಪಿಸಿ, ವಂದಿಸಿದರು. ವಿಷ್ಣು ಸೇನಾ ಸಮಿತಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next