Advertisement
ಮತದಾನಕ್ಕೆ 24 ಗಂಟೆಗಳು ಬಾಕಿ ಇದ್ದು ಮೂರೂ ಪಕ್ಷಗಳ ಕಾರ್ಯ ತಂತ್ರ, ರಣತಂತ್ರ, ಅಭ್ಯರ್ಥಿ ಗಳ ನಾಮಬಲ, ಪಕ್ಷದ ವರ್ಚಸ್ಸು, ಜಾತಿ-ಸಮುದಾಯಗಳ ಸಮೀ ಕರಣ ಎಲ್ಲದಕ್ಕೂ ಗುರುವಾರ ಮತ ದಾರ ನೀಡುವ ಉತ್ತರವೇ ಅಂತಿಮ ವಾಗಲಿದೆ. ಮಂಗಳವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
Related Articles
Advertisement
ಮತದಾನಕ್ಕೆ ನಾಲ್ಕೈದು ದಿನಗಳು ಇರುವಾಗ ಚರ್ಚೆಗೆ ಬಂದ ಮರು ಮೈತ್ರಿ ಜೋರು ಸದ್ದು ಮಾಡುತ್ತಿದೆ. ಅದಾದ ಬಳಿಕ ರಾಜ್ಯ ರಾಜಕೀಯದಲ್ಲಿ ನಾನಾ ರೀತಿಯ ವಿಶ್ಲೇಷಣೆಗಳೂ ನಡೆಯುತ್ತಿವೆ.
15 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿಗೆ 6 ಸ್ಥಾನಕ್ಕಿಂತ ಕಡಿಮೆ ಬಂದರೆ ಸರಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಮರು ಮೈತ್ರಿ ಮಾಡಿಕೊಳ್ಳಬಹುದು. ಇಲ್ಲವೇ ಬಿಜೆಪಿ ಸರಕಾರ ಉಳಿಸಿಕೊಳ್ಳಲು ಜೆಡಿಎಸ್ ನೆರವು ಬಯಸಬಹುದು ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಜತೆಗೆ ಕಾಂಗ್ರೆಸ್-ಜೆಡಿಎಸ್ ಸರಕಾರ ವಾದರೆ ಯಾರು ಮುಖ್ಯ ಮಂತ್ರಿ, ಬಿಜೆಪಿ-ಜೆಡಿಎಸ್ ಸರಕಾರ ರಚನೆ ಯಾದರೆ ಯಾರು ಮುಖ್ಯ ಮಂತ್ರಿ ಎಂಬ ಹಂತಕ್ಕೂ ಹೋಗಿದೆ.
ಕಾಂಗ್ರೆಸ್, ಜೆಡಿಎಸ್ ನಾಯಕರು ಮೈತ್ರಿ ಪ್ರಸ್ತಾಪ ಇಲ್ಲ ಎಂದು ಹೇಳುತ್ತಾ ಒಳಗೊಳಗೇ ತಮ್ಮದೇ ಆದ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಮುಂದಿನ ರಾಜಕೀಯ ಭವಿಷ್ಯವು ಉಪ ಚುನಾವಣೆ ಮೇಲೆಯೇ ನಿಂತಿದೆ. ಚುನಾವಣೆಯ ಫಲಿತಾಂಶ ಡಿ. 9ರಂದು ಪ್ರಕಟವಾಗಲಿದೆ.
ಬದಲಾಗಿದೆ ಖದರ್ಮಹಾರಾಷ್ಟ್ರದಲ್ಲಿ ಶಿವಸೇನೆ- ಎನ್‌ಸಿಪಿ-ಕಾಂಗ್ರೆಸ್ ಜತೆಗೂಡಿ ಸರಕಾರ ರಚಿಸಿದ್ದು, ಬಿಜೆಪಿ ಸರಕಾರ 80 ಗಂಟೆಗಳಲ್ಲಿ ಪತನಗೊಂಡ ಬೆಳವಣಿಗೆ ಅನಂತರ ರಾಜ್ಯ ರಾಜಕಾರಣ, ಉಪ ಚುನಾವಣೆ “ಖದರ್’ ಬದಲಾಗಿದೆ. ಕಾಂಗ್ರೆಸ್ ಪ್ರಚಾರದಿಂದ ದೂರ ಉಳಿದಿದ್ದ ಹಿರಿಯರೆಲ್ಲ ಪ್ರಚಾರದಲ್ಲಿ ತೊಡಗಿದರು. ಕೆಲವೆಡೆ ಒಳ ಒಪ್ಪಂದದಿಂದ ಕಾಂಗ್ರೆಸ್-ಜೆಡಿಎಸ್ ಹೆಚ್ಚು ಸೀಟು ಗೆಲ್ಲಲಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೂ ತಳಮಳ ಸೃಷ್ಟಿಯಾಗಿ ಕಾರ್ಯತಂತ್ರ ಬದಲಿಸಿಕೊಂಡಿದೆ. ಜೆಡಿಎಸ್‌ನಲ್ಲೂ ಕಿಂಗ್ ಮೇಕರ್ ಆಗುವ ಆಶಾಭಾವ ಮತ್ತೆ ಮೂಡಿದೆ.