Advertisement

ಆಶಾವಾದಿಯ ಕನಸು ಆಕಾಶದೆತ್ತರಕ್ಕೆ…

09:33 PM Jul 01, 2019 | Team Udayavani |

ಕುವೆಂಪು ವಿ.ವಿಯಲ್ಲಿ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ “ಗಳಿಕೆ ಮತ್ತು ಕಲಿಕೆ’ ಎಂಬ ನೀತಿಯನ್ನು ಜಾರಿ ಮಾಡಿತ್ತು. ಅಂದರೆ, ವಿದ್ಯಾರ್ಥಿಗಳು ಕಲಿಯುವುದರೊಂದಿಗೆ, ದಿನದಲ್ಲಿ ಒಂದು ಗಂಟೆ ವಿ.ವಿಯ ಕೆಲ ವಿಭಾಗಗಳಲ್ಲಿ ಕೆಲಸ ನಿರ್ವಹಿಸಬೇಕಿತ್ತು.

Advertisement

ಇದಕ್ಕಾಗಿ ಗಂಟೆಗೆ 20ರೂ ನೀಡಲಾಗುತ್ತಿತ್ತು. ಪ್ರತೀ ವಿಭಾಗದಿಂದ ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಅದೃಷ್ಟವೆಂಬಂತೆ , ನಾನು ಕೂಡ ಆಯ್ಕೆ ಆದೆ. ಹೀಗೆ ಕಾರ್ಯ ನಿರ್ವಹಿಸುವಾಗ ಕ್ಲರ್ಕ್‌ ಒಬ್ಬರು ಪರಿಚಯವಾದರು. ಅವರದು ತುಂಬಾ ಮುಗಟಛಿ ವ್ಯಕ್ತಿತ್ವ, ಸರಳ ಜೀವಿ. ಮಾತನಾಡುವಾಗ, ತಮ್ಮ ಮಗಳ ಬಗ್ಗೆ ಹೇಳಿಕೊಂಡರು. “ನಾನೊಬ್ಬ ಸಾಮಾನ್ಯ ವ್ಯಕ್ತಿ. ನನಗೆ ಇಬ್ಬರು ಹೆಣ್ಣು ಮಕ್ಕಳು. ಅದರಲ್ಲಿ ಮೊದಲನೆ ಮಗಳು ಐದನೇ ತರಗತಿಯಲ್ಲಿದ್ದಾಳೆ. ತುಂಬಾ ಚೆನ್ನಾಗಿ ಓದುತ್ತಿದ್ದಾಳೆ. ನನಗೆ ಗಂಡು ಮಕ್ಕಳು ಇಲ್ಲ ಎಂಬ ಕೊರಗಾಗಲಿ, ಬೇಸರವಾಗಲಿ ಇಲ್ಲ.

ಏಕೆಂದರೆ ನನ್ನ ಮಗಳನ್ನು ಯಾವ ಗಂಡು ಮಗುವಿಗೂ ಕಮ್ಮಿ ಇಲ್ಲ ಎನ್ನುವಂತೆ ಬೆಳೆಸುತ್ತಿದ್ದೇನೆ. ದೇಶದ ಮಹಾನ್‌ ನಾಯಕ ಮತ್ತು ನಾಯಕಿಯರ ಸಾಲಿನಲ್ಲಿ ನನ್ನ ಮಗಳ ಹೆಸರಿರಬೇಕು. ಅಂತಹ ಸಾಧನೆ ಮಾಡಿ ಅಪಾರವಾದ ಜನ ಮನ್ನಣೆ ಗಳಿಸಬೇಕು. ಅದರಿಂದ ಬಂದ ಹಣದಲ್ಲಿ ಬಡತನದಿಂದ ನಲುಗುತ್ತಿರುವ ದೀನ ದಲಿತರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು ಅನ್ನೋದು ನನ್ನ ಗುರಿ’ಎನ್ನುತ್ತಾ
ಭಾವುಕರಾದರು.

ಆ ತಂದೆಗೆ. ತನ್ನ ಮಗಳ ಸಾಧನೆಯ ಕನಸನ್ನು ಕಂಡರೂ, ಕೊನೆಗೆ ಬಯಸಿದ್ದು, ಈ ದೇಶದ ಬಡವರ ಹಿತವನ್ನು. ಏಕೆಂದರೆ, ಒಬ್ಬ ಬಡವನ ಕಷ್ಟ, ಇನ್ನೊಬ್ಬ ಬಡವನಿಗೆ ತಾನೆ ಗೊತ್ತಾಗುವುದು?

– ನೇತ್ರಾವತಿ, ಎಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next