Advertisement

ಸಿಬಿಐಗೆ ಪ್ರತ್ಯೇಕ ಕಾನೂನು ಪ್ರಸ್ತಾವ‌ಕ್ಕೆ ಕೇಂದ್ರ ವಿರೋಧ

03:45 AM Feb 09, 2017 | Harsha Rao |

ಹೊಸದಿಲ್ಲಿ: ಸಿಬಿಐಗೆ ಸ್ವಾತಂತ್ರ್ಯ ಕೊಡಲಾಗುತ್ತದೆಂದು ಕೇಂದ್ರ ಹೇಳಲಾಗುತ್ತಿದೆಯಾದರೂ ಅದಿನ್ನೂ ದಕ್ಕಿಲ್ಲ.  ಕೇಂದ್ರ ತನಿಖಾ ಸಂಸ್ಥೆಗೆ ಈಗಿನ ಅಧಿಕಾರ ಸಾಲದು. ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಕಾನೂನು ಅತ್ಯಗತ್ಯ ಎಂದು ಸಂಸತ್‌ನ ಸ್ಥಾಯೀ ಸಮಿತಿ ಶಿಫಾರಸು ಮಾಡಿದೆ. ಸದ್ಯ ಇರುವ ದಿಲ್ಲಿ ಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಶ್‌ಮೆಂಟ್‌ ಆ್ಯಕ್ಟ್ 1946 ಎಪ್ಪತ್ತು ವರ್ಷ ಹಳೆಯದಾಗಿದೆ. ಹಾಲಿ ದಿನಮಾನಗಳಿಗೆ ಅನುಸಾರವಾಗಿ ಅದನ್ನು ಬದಲು ಮಾಡಬೇಕೆಂದು ಸಿಬಂದಿ, ಸಾರ್ವಜನಿಕ ದೂರು ಮತ್ತು ಕಾನೂನು ಖಾತೆಗಾಗಿನ ಸ್ಥಾಯೀ ಸಮಿತಿ ಅಭಿಪ್ರಾಯಪಟ್ಟಿದೆ.

Advertisement

ಹೀಗಾಗಿ ಅದಕ್ಕಾಗಿಯೇ ಪ್ರತ್ಯೇಕ ಕಾಯ್ದೆ ಇರುವುದು ಒಳಿತು ಎಂದು ಅದು ಪ್ರತಿಪಾದಿಸಿದೆ. ಆದರೆ ಕೇಂದ್ರ 
ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅದಕ್ಕೆ ಪ್ರತ್ಯುತ್ತರ ನೀಡಿ ಇತ್ತೀಚಿನ ದಿನಗಳಲ್ಲಿ ಸಿಬಿಐ ಪ್ರಬಲ ತನಿಖಾ ಸಂಸ್ಥೆಯಾಗಿ ಬೆಳೆದು ಬಂದಿದೆ. ತನಿಖಾ ಸಂಸ್ಥೆಗೆ ಪ್ರತ್ಯೇಕ ಕಾನೂನು ಬೇಕೆಂದಾದರೆ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಸಮಿತಿಗೆ ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next