ಹೆಬ್ರಿ: ಅತ್ಯಾಕರ್ಷಕ ದಾರು ಶಿಲ್ಪ, ಕಲ್ಲಿನ ಕೆತ್ತನೆಯ ಮೂಲಕ ನಿರ್ಮಾಣವಾದ ಹಿರಿಯಡಕ ದೇವಸ್ಥಾನ ಕಣ್ಮನ ಸೂರೆಗೊಳ್ಳುತ್ತಿದೆ. ಇಂತಹ ಕೆತ್ತನೆಗಳು ಬಹಳ ಅಪರೂಪ ವಾಗಿದ್ದು ಶಿಲ್ಪಕಲೆಗಳ ಸಾಮ್ರಾಜ್ಯಕ್ಕೆ ಬಂದಂತೆ ಭಾಸವಾಗುತ್ತಿದೆ. ಸ್ಥಳದ ಸಂಸ್ಕೃತಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಈ ಸಿರಿತನವನ್ನು ಕಾಯ್ದುಕೊಂಡು ನಿರಂತರ ತೊಡಗಿಸಿಕೊಂಡ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರ ಶ್ರಮ ಶ್ಲಾಘನೀಯ ಎಂದು ಖ್ಯಾತ ಬಾಣಸಿಗ, ಮಣಿಪಾಲ ವೆಲ್ಕಮ್ ಗ್ರೂಪ್ ಗ್ರಾಜ್ಯುವೆಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್ನ ಹಳೆ ವಿದ್ಯಾರ್ಥಿ ವಿಕಾಸ್ ಖನ್ನಾ ಹೇಳಿದರು.
ಅವರು ಶುಕ್ರವಾರ 800 ವರ್ಷ ಇತಿಹಾಸವಿರುವ ವಿಶೇಷ ಶಿಲ್ಪಕಲೆ ಗಳೊಂದಿಗೆ ಪುನಃ ನಿರ್ಮಾಣಗೊಂಡ ಹಿರಿಯಡಕದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವೆಲ್ಕಮ್ ಗ್ರೂಪ್ನ ನರೇಶ್ ನಾಯಕ್, ರಾಘವೇಂದ್ರ ಜಿ., ಜೀರ್ಣೋದ್ಧಾರ ಸಮಿತಿಯ ಸಂಘಟನ ಕಾರ್ಯದರ್ಶಿ ನಟರಾಜ್ ಹೆಗ್ಡೆ, ದಿವಾಕರ್ ಹಿರಿಯಡಕ, ಶ್ರೀಕೃಷ್ಣ ಶಿರಾಲಿ ಮೊದ ಲಾದವರು ಉಪಸ್ಥಿತರಿದ್ದರು.