Advertisement

ಹಳೆಯ ಶಾಲೆಗೆ ಬಣ್ಣ ಹಚ್ಚಿ ಖುಷಿ ಪಟ್ಟರು

11:58 AM May 08, 2019 | Team Udayavani |

ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ಸಂಬಂಧ ಬೆಸೆಯುವ ಶಾಸಕ ಅಭಯ ಪಾಟೀಲರ ಕನಸಿನ ಯೋಜನೆ ಶಾಲೆಗಾಗಿ ನಾನು ಎಂಬ ವಿನೂತನ ಕಾರ್ಯಕ್ರಮಕ್ಕೆ ಹಳೆಯ ಸರ್ಕಾರಿ ಶಾಲೆಗೆ ಬಣ್ಣದಿಂದ ಅಲಂಕರಿಸುವ ಮೂಲಕ ಸೋಮವಾರ ಚಾಲನೆ ನೀಡಲಾಯಿತು.

Advertisement

ಹಳೆಯ ವಿದ್ಯಾರ್ಥಿಗಳು ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚಿ ತಾವು ಕಲಿತ ಸರ್ಕಾರಿ ಶಾಲೆಗೆ ತನು, ಮನ, ಧನದ ಸಹಾಯ ಮಾಡುವ ಜೊತೆಗೆ ತಮ್ಮ ಸಮಯವನ್ನು ಶಾಲೆಯ ಅಭಿವೃದ್ಧಿಗಾಗಿ ಮೀಸಲಿಟ್ಟರು. ಸರ್ಕಾರಿ ಮರಾಠಿ ಶಾಲೆ ನಂ. 31 ವಡಗಾವಿ ಮತ್ತು ಜೈಲು ಶಾಲೆ ಎಂದೇ ಪ್ರಸಿದ್ಧಿಯಾದ ಸುಮಾರು ಒಂದು ನೂರು ವರ್ಷಗಳ ಇತಿಹಾಸವಿರುವ ನಂ. 14ರ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಲಾಯಿತು. ಮೊದಲನೇ ಹಂತದಲ್ಲಿ ಬಣ್ಣ ಹಚ್ಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮಾರು 100ಕ್ಕೂ ಹೆಚ್ಚು ಮಾಜಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನನಗೆ 25 ವರ್ಷ ಗಳ ನಂತರ ಮತ್ತೆ ಬಾಲ್ಯದ ಗೆಳೆಯರು ಕೂಡಿ ನಮ್ಮ ತುಂಟತನ, ಹಠ, ಆಟ, ಪಾಠ, ಸ್ಪರ್ಧೆ, ಏಳು -ಬೀಳು ಎಲ್ಲವೂ ಒಂದು ನೆನಪು. ಇಂದು ಮರೆತು ಹೋದ ಅನೇಕ ಸಂಗತಿಗಳ ಮೆಲುಕು ಹಾಕುತ್ತಾ, ಗೆಳೆಯರ ವಾಸ್ತವ ಬದುಕಿನ ಚಿತ್ರಣ ಕಣ್ಣು ಮುಂದೆ ಹಾದು ಹೊಗುತ್ತದೆ. ಆ ದಿನಗಳಲ್ಲಿ ಭಾಷೆ, ಜಾತಿ, ಧರ್ಮ, ಲಿಂಗ ತಾರತಮ್ಯ ಇರಲಿಲ್ಲ. ಬಿಳಿ ಕಾಗದದಂತೆ ಇರುವ ನಮ್ಮ ಮುಗ್ಧ ಮನಸ್ಸು ಇಂದಿಗೂ ಅದೇ ಭಾವನಾತ್ಮಕ ನೆಲೆಯಲ್ಲಿ ಕರೆದುಕೊಂಡು ಹೋಗಿರುವ ಆ ಶಾಲೆಗಳೇ ನಮಗೆ ದೇಗುಲ ಎಂದು ಶಾಸಕ ಅಭಯ ಪಾಟೀಲ ನೆನಪು ಮಾಡಿಕೊಂಡರು.

ದೆಹಲಿಯ ಗುಢಗಾಂವದಲ್ಲಿ ಯೋಧನಾಗಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಮರಾಠಿ ಶಾಲೆ ನಂ. 31ರ ಮಾಜಿ ವಿದ್ಯಾರ್ಥಿ ವಿನಾಯಕ ಸಾತೇರಿ ಮೇಲಗೆ ಅವರು ಶಾಲೆಗೆ ನಾನು ವಿನೂತನ ಕಾರ್ಯಕ್ರಮಕ್ಕಾಗಿಯೇ ರಜೆ ಹಾಕಿ ಬಂದು ತಾವು ಕಲಿತ ಶಾಲೆಯ ಸೇವೆ ಮಾಡುವ ಮೂಲಕ ಹಳೆಯ ನೆನಪುಗಳನ್ನು ಕಳೆದಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next