Advertisement

ಹಳೇ ಹುಡುಗಿ ಹೊಸ ಮಾಫಿಯಾ

03:45 AM Jan 13, 2017 | Team Udayavani |

“ನಾನು ನಮ್ಮುಡ್ಗಿ ಖರ್ಚಿಗೊಂದ್‌ ಮಾಫಿಯಾ’ … ಇಂಥದ್ದೊಂದು ಹೆಸರಿನ ಸಿನಿಮಾದ ಪೋಸ್ಟರ್‌ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಕಾಣಿಸಿಕೊಂಡಾಗ, ಚಿತ್ರದ ಬಗ್ಗೆ ಹಲವರಿಗೆ ಕುತೂಹಲ ಇತ್ತು. ಈ ಚಿತ್ರದ ಕಥೆ ಏನು, ವಿಶೇಷತೆ ಏನು ಎಂಬ ಹಲವು ಪ್ರಶ್ನೆಗಳಿದ್ದವು. ಆದರೆ, ಚಿತ್ರ ಮುಗಿಯೋವರೆಗೂ ಮಾತಾಡುವುದು ಬೇಡ ಎಂದು ಮೊದಲೇ ತೀರ್ಮಾನಿಸಿದ್ದ ಚಿತ್ರತಂಡ, ಈಗ ಕೊನೆಗೂ ಮಾತಾಡುವುದಕ್ಕೆ ನಿರ್ಧರಿಸಿದೆ. ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರದ ಬಗ್ಗೆ ಮಾತಾಡಿದೆ.

Advertisement

ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಆಡಿಯೋ ಬಿಡುಗಡೆ ಸಮಾರಂಭ. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕಿಂತ ಅಲ್ಲೇ ಹಜಾರದಲ್ಲಿ ಚಿತ್ರದ ಬಗ್ಗೆ ಒಂದಿಷ್ಟು ವಿವರ ಕೊಡುವುದಕ್ಕೆ ಚಿತ್ರತಂಡದವರು ಸೇರಿದರು.ಸ
“ನಾನು ನಮ್ಮುಡ್ಗಿ ಖರ್ಚಿಗೊಂದ್‌ ಮಾಫಿಯಾ’ ಎಂಬ ಹೆಸರೇ ಸಾಕು, ಚಿತ್ರದ ಕಥೆಯೇನು ಎಂದು ಹೇಳುವುದಕ್ಕೆ. ಹೆಸರಿಗೆ ತಕ್ಕಂತೆ ಹುಡುಗ, ಹುಡುಗಿ ಮತ್ತು ಸೈಬರ್‌ ಕ್ರೈಮ್‌ನ ಸುತ್ತ ಸುತ್ತುತ್ತದಂತೆ. ಇನ್ನೊಂದಿಷ್ಟು ವಿಷಯ ಬಿಡಿ ಎಂದಿದ್ದಕ್ಕೆ ನಿರ್ದೇಶಕ ಅಮರ್‌, ಎಷ್ಟು ಮಾತಾಡಬೇಕೆಂದು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಲೇ ಮಾತು ಶುರು ಮಾಡಿದವರು. “ಸಾಮಾಜಿಕ ಜವಾಬ್ದಾರಿ ಇಲ್ಲದವರು ಏನು ಎದುರಿಸುತ್ತಾರೆ ಮತ್ತು ಇರುವವರುಅ ಏನು ಎದುರಿಸುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ. ಇಲ್ಲಿ ಎರಡು ಜೋಡಿಗಳಿವೆ. ಒಂದು ಅಪ್ಪರ್‌ ಮಿಡ್ಲ್-ಕ್ಲಾಸ್‌ ಜೋಡಿಯಾದರೆ, ಇನ್ನೊಂದು ಕೆಳ ಮಧ್ಯಮ ವರ್ಗದ ಜೋಡಿ. ಎರಡರೂ ಟ್ರಾಕ್‌ಗಳು ಕೊನೆಯವರೆಗೂ ಸಮಾನಾಂತರವಾಗಿ ಸಾಗುತ್ತಲೇ ಇರುತ್ತೆ. ಎರಡೂ ಜೋಡಿಗಳಿಗೆ ಗೊತ್ತಿಲ್ಲದೆ ಪರಸ್ಪರ ಲಿಂಕ್‌ ಇರುತ್ತದೆ’ ಎನ್ನುತ್ತಾರೆ ಅಮರ್‌. ಅವರು ಈ ಹಿಂದೆ “ದಿಲ್ದಾರ’ ಎಂಬ ಚಿತ್ರ ಮಾಡಿದ್ದರು. ಈಗ ಚಲ ಜೊತೆಗೆ ಸೇರಿಕೊಂಡು, “ನಾನಖಮಾ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅವರೂ ಒಬ್ಬ ಹೀರೋನ ಪಾತ್ರ ಮಾಡುತ್ತಿದ್ದಾರೆ.

ಒಬ್ಬ ಹೀರೋ ಎಂದರೆ, ಇನ್ನೊಬ್ಬರ್ಯಾರು ಎಂಬ ಪ್ರಶ್ನೆ ಬರಬಹುದು. ಮೈಸೂರಿನ ಶ್ಯಾಮ್‌ ಚಿತ್ರದ ಮತ್ತೂಬ್ಬ ಹೀರೋ ಆಗಿ ಅಭಿನಯಿಸಿದ್ದಾರೆ. ಅವರಿಗೆ ಶ್ರದ್ಧಾ ನಾಯಕಿಯಾದರೆ, ಅಮರ್‌ಗೆ ನಾಯಕಿಯಾಗಿ ಅಶ್ವಿ‌ನಿ ಇದ್ದಾರೆ. ಇನ್ನು ಚಿತ್ರವನ್ನು ಡಾ ಮಹದೇವ್‌ ಮತ್ತು ವಿಶಾಲ್‌ ತಿವಾರಿ ಇಬ್ಬರೂ ನಿರ್ಮಿಸುತ್ತಿದ್ದಾರೆ. ಇನ್ನು ಎ.ಆರ್‌. ರೆಹಮಾನ್‌ ಅವರ ಪಾಳಯದಲ್ಲಿ ಕೆಲಸ ಮಾಡಿದ ವಿಕ್ರಮ್‌ ವರ್ಮನ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next