ಪಣಜಿ : ನನಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎರಡು ಬಾರಿ ಆಫರ್ ಬಂದಿತ್ತು. 2004 ರಲ್ಲಿ ಮತ್ತು 2012 ರಲ್ಲಿ ಹೀಗೆ ಎರಡು ಬಾರಿ ಆಫರ್ ಬಂದಿತ್ತು ಎಂದು ಎಂಜಿಪಿ ನಾಯಕ ಸುದೀನ ಧವಳೀಕರ್ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004 ರಲ್ಲಿ ಕಾಂಗ್ರೇಸ್ ಪಕ್ಷದ ಪ್ರತಾಪಸಿಂಹ ರಾಣೆಯವರ ಹೆಸರನ್ನು ನಾನೇ ಸೂಚಿಸಿದ್ದೆ, ಏಕೆಂದರೆ ಬಾವುಸಾಹೇಬ್ ಬಾಂದೋಡಕರ್ ರವರ ಪಕ್ಷ ತೊರೆಯಲು ನನಗೆ ಇಷ್ಟವಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಪಟೇಲನಗರದಲ್ಲಿ ಹದಗೆಟ್ಟ ರಸ್ತೆ:ತುರ್ತು ರೋಗಿಗಳಿಗೆ ಸಂಕಷ್ಟ: ಸ್ಟ್ರಕ್ಚರ್ ಮೂಲಕ ರೋಗಿಯ ರವಾನೆ
2012 ರಲ್ಲಿ ಅಂದಿನ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ರವರು ದೆಹಲಿಗೆ ತೆರಳುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ನೀಡುವುದಾಗಿ ಹೇಳಿದ್ದರು, ಆದರೆ ಬಿಜೆಪಿಗೆ ಸೇರುವಂತೆ ಸೂಚಿಸಿದ್ದರು. ಆದರೆ ನಾನು ಎಂಜಿಪಿ ಪಕ್ಷ ತೊರೆಯಲಿಲ್ಲ. ನಾನು ನನ್ನ ಪಕ್ಷವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ಶಾಸಕನಾದ ಬಳಿಕ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರಿಯಾದರೂ ಮಂತ್ರಿಸ್ಥಾನ ಪಡೆಯಬೇಕು ಎಂದು ಹಲವರಿಗೆ ಅನ್ನಿಸುತ್ತದೆ. ಆದರೆ ನನಗೆ ಹಾಗೆ ಅನ್ನಿಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ನಾನು ಆರ್.ಎಸ್.ಎಸ್ ಸ್ವಯಂ ಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ: ಸಿ.ಟಿ.ರವಿ