Advertisement
ಕಳೆದ 2016ರ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ 2987 ಪುರುಷರು, 911 ಮಹಿಳೆಯರು ಸೇರಿ 3898 ಮತದಾರರಿದ್ದರು. ಪ್ರಸ್ತುತ ಚುನಾವಣೆಯಲ್ಲಿ 2262 ಪುರುಷರು, 1038 ಮಹಿಳೆಯರು ಸೇರಿ 3300 ಮತದಾರರಿದ್ದು, 600 ಮತದಾರರು ಮತಪಟ್ಟಿಯಿಂದ ಹೊರ ಬಿದ್ದಿದ್ದಾರೆ.
Related Articles
Advertisement
2016ರಲ್ಲಿ ಶೇ.69.60 ಮತದಾನ: 2016ರಲ್ಲಿ ನಡೆದ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಗದಗ ಜಿಲ್ಲೆಯಲ್ಲಿ ಕೇವಲ ಶೇ.69.60 ಮತದಾನವಾಗಿತ್ತು. 3898 ಮತದಾರರ ಪೈಕಿ 2713 ಮತದಾರರು ಮಾತ್ರ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪ್ರಸ್ತುತ ಚುನಾವಣೆಯಲ್ಲಿ 3300 ಮತದಾರರಿದ್ದು, ಶೇಕಡಾವಾರು ಮತದಾನ ಹೆಚ್ಚಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.
ಸೇವೆ ಸಲ್ಲಿಸುತ್ತಿರುವ ಹಾಗೂ ವಾಸಿಸುವ ಸ್ಥಳ ಮತ್ತು ಮತದಾರರ ಚೀಟಿಯಲ್ಲಿನ ಸ್ಥಳ ಒಂದೇ ಇರಬೇಕೆನ್ನುವ ನಿಯಮಾವಳಿಗಳ ಹಿನ್ನೆಲೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದ್ದರಿಂದ ಮತದಾರರ ಪಟ್ಟಿಯಲ್ಲಿ ಶಿಕ್ಷಕರ ಹೆಸರು ಸೇರ್ಪಡೆ ಕುಂಠಿತವಾಗಿದೆ. –ಬಸವರಾಜ ಧಾರವಾಡ, ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಗೌರವಾಧ್ಯಕ್ಷ.
ಕಳೆದ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಖೊಟ್ಟಿ ಮತದಾರರ ಸಂಖ್ಯೆ ಹೆಚ್ಚಿತ್ತು. ಈ ಬಾರಿ ಚುನಾವಣಾಧಿಕಾರಿಗಳು ಮತದಾರರ ಪಟ್ಟಿಯಲ್ಲಿದ್ದ ಖೊಟ್ಟಿ ಮತದಾರರನ್ನು ಕೈಬಿಟ್ಟಿದ್ದರಿಂದ ಮತದಾರರ ಸಂಖ್ಯೆ ಕಡಿಮೆಯಾಗಿದೆ. –ವೆಂಕನಗೌಡ ಗೋವಿಂದಗೌಡ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ
-ಅರುಣಕುಮಾರ ಹಿರೇಮಠ