Advertisement
ರವಿವಾರ ಈ ಕುರಿತು ಮಾತನಾಡಿದ ಅವರು, “ಸೋಂಕಿನ ಉತ್ತುಂಗದ ಮಟ್ಟಕ್ಕೆ ನಾವು ಇನ್ನಷ್ಟೇ ತಲುಪ ಬೇಕಿದೆ. ದೇಶದಲ್ಲಿ ಜನಸಂಖ್ಯೆ ಅಧಿಕವಾಗಿರುವ ಕಾರಣ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುವುದರಲ್ಲಿ ಸಂದೇಹವಿಲ್ಲ. ನಾವು ಭಾರತವನ್ನು ಇತರ ಐರೋಪ್ಯ ದೇಶಗಳಿಗೆ ಹೋಲಿಸಲೂ ಆಗುವುದಿಲ್ಲ. ಐರೋಪ್ಯ ಒಕ್ಕೂಟದ ಎರಡರಿಂದ ಮೂರು ದೇಶಗಳನ್ನು ಒಟ್ಟು ಸೇರಿಸಿದರೆ, ಅವುಗಳ ಒಟ್ಟಾರೆ ಜನಸಂಖ್ಯೆಗೆ ಭಾರತದ ಜನಸಂಖ್ಯೆ ಸಮವಾಗುತ್ತದೆ. ಭಾರತದಲ್ಲಿ ಇನ್ನು 2-3 ತಿಂಗಳಲ್ಲಿ ಸೋಂಕು ಉತ್ತುಂಗಕ್ಕೇರಲಿದೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಸೋಂಕು ಉತ್ತುಂಗಕ್ಕೆ ತಲುಪಬಹುದು’ ಎಂದಿದ್ದಾರೆ.
Related Articles
ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ 9,971 ಹೊಸ ಪ್ರಕರಣ ಪತ್ತೆಯಾಗಿದೆ. ಶನಿವಾರ ಬೆಳಗ್ಗೆ 8ರಿಂದ ರವಿವಾರ ಬೆಳಗ್ಗೆ 8 ಗಂಟೆಯವರೆಗೆ ಇಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ. 287 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈವರೆಗೆ 1,19,292 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ 5,220 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಮಾಣ
ಶೇ.48.37ಕ್ಕೇರಿಕೆಯಾಗಿದೆ ಎಂದೂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಒಂದೇ ದಿನ 1.42 ಲಕ್ಷ ಸ್ಯಾಂಪಲ್ ಗಳ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ ಒಟ್ಟಾರೆ 46.66 ಲಕ್ಷ ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ 3 ಸಾವಿರಕ್ಕೂ ಹೊಸ ಪ್ರಕರಣಗಳು ರವಿವಾರ ಪತ್ತೆಯಾಗಿದೆ.
Advertisement
ಇದರಿಂದಾಗಿ ಆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 85ಸಾವಿರ ದಾಟಿದೆ. ಗುಜರಾತ್‌ನಲ್ಲಿ ಹೊಸತಾಗಿ 480 ಪ್ರಕರಣಗಳು ಪತ್ತೆಯಾಗುವ ಮೂಕ ಒಟ್ಟು ಸೋಂಕು 20 ಸಾವಿರ ದಾಟಿದೆ. ಜತೆಗೆ ಸಾವಿನ ಸಂಖ್ಯೆ 1,249ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ರವಿವಾರ ಸೋಂಕಿತರ ಸಂಖ್ಯೆ 31 ಸಾವಿರಕ್ಕಿಂತ ಹೆಚ್ಚಾಗಿದೆ. ಎಂಟು ದಿನಗಳ ಅವಧಿಯಲ್ಲಿ 8 ಸಾವಿರ ಮಂದಿ ಸೋಂಕಿತರು ಸೇರ್ಪಡೆಯಾಗಿದ್ದಾರೆ. ಮರಣ ಪ್ರಮಾಣ ಕಡಿಮೆ
ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಮರಣ ಪ್ರಮಾಣ ಬಹಳಷ್ಟು ಕಡಿಮೆಯಿದೆ. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ನಮ್ಮಲ್ಲಿ 0.49 ಮಂದಿ ಸಾವಿಗೀಡಾದರೆ, ಜಾಗತಿಕ ಸರಾಸರಿ 5.17 ರಷ್ಟಿದೆ. ಜರ್ಮನಿಯಲ್ಲಿ ಇದು 10.35, ಇಟಲಿಯಲ್ಲಿ 55.78, ಯು.ಕೆ.ಯಲ್ಲಿ 59.62 ಮತ್ತು ಸ್ಪೇನ್ ನಲ್ಲಿ 58.06 ರಷ್ಟಿದೆ. ಇನ್ನು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಭಾರತದಲ್ಲಿ ಸೋಂಕಿತರು 17.32 ಆಗಿದ್ದರೆ, ಜಾಗತಿಕ ಸರಾಸರಿ 87.74 ಆಗಿದೆ. ಜರ್ಮನಿಯಲ್ಲಿ ಇದು
219.93, ಇಟಲಿ 387.33, ಯು.ಕೆ. 419.54 ಮತ್ತು ಸ್ಪೇನ್ ನಲ್ಲಿ 515.61 ರಷ್ಟಿದೆ ಎಂದೂ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ವಿಶ್ವಾದ್ಯಂತ 4 ಲಕ್ಷದಾಟಿದ ಸಾವಿನ ಸಂಖ್ಯೆ
ಚೀನದ ವುಹಾನ್‌ನಲ್ಲಿ ಮೊದಲಿಗೆ ಕಂಡುಬಂದ ಕೋವಿಡ್ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿ ಈವರೆಗೆ 4 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. 70
ಲಕ್ಷ ಕ್ಕಿಂತಲೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಜಗತ್ತಿನೆಲ್ಲೆಡೆ ಕಳೆದ ಕೆಲವು ತಿಂಗಳಿಂದ ಮೃತಪಟ್ಟ ಅನೇಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದ ಕಾರಣ, ವಾಸ್ತವದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದೂ ಜಾನ್ಸ್ ಹಾಪ್ ಕಿನ್‌ಸನ್ ವಿವಿ ಹೇಳಿದೆ.