Advertisement
ಪರಿಚಯದ ಒಬ್ಬ ವ್ಯಕ್ತಿ ಅಂದುಕೊಳ್ಳಿ. ಅವನು ಆರು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿರುತ್ತಾನೆ. ಅಷ್ಟು ದಿನದವರೆಗೂ ಸಿಟಿಬಸ್‌ನಲ್ಲಿ ಓಡಾಡುತ್ತಾ ಇದ್ದವನು, ನೌಕರಿ ಸಿಕ್ಕ ಕೆಲವೇ ದಿನಗಳಲ್ಲಿ ಬೈಕ್ ಮಾಲಕ ಆಗುತ್ತಾನೆ. ಹೇಗಿದ್ದರೂ ಕೆಲಸ ಸಿಕ್ಕಿದೆ. ಅವನ ಬಳಿ ಸಾಕಷ್ಟು ಹಣ ಇರಬಹುದು ಎಂದುಕೊಂಡು ಮಾತು ಶುರು ಮಾಡಿ, ಸ್ವಲ್ಪ ಹಣದ ಅಗತ್ಯ ಇತ್ತು ಅಂದರೆ, ಅಯ್ಯೋ , ದುಡ್ಡು ಇಲ್ಲ ಸರ್. ಬೈಕ್ ತಗೊಂಡೆ ಅಲ್ವ? ಅದರದ್ದೇ ಹತ್ತು ವರ್ಷ ಕಂತು ಕಟ್ಟಬೇಕಿದೆ ಅನ್ನುತ್ತಾನೆ. ಅಂದರೆ, ಕೆಲಸ ಸಿಕ್ಕಿದ ತತ್‌ಕ್ಷಣ ಅವನು ಸಂಬಳದಾರ ಮತ್ತು ಸಾಲಗಾರ-ಎರಡೂ ಆದಂತೆ ಆಯಿತು.
Related Articles
ಸಾಲಗಾರ ಆಗುವುದೆಂದರೆ, ಸಮಸ್ಯೆಗೆ ಸಿಕ್ಕಿಕೊಳ್ಳುವುದು ಅಂತಾನೇ ಅರ್ಥ. ಸಾಲ ಮಾಡದೆಯೇ, ಬೈಕ್‌ನ ಮಾಲಕನಾಗುವ ಅವಕಾಶ ಅವನಿಗೆ ಇತ್ತು. ಹೇಗೆ ಅಂದುಕೊಂಡಿರಾ? ಇಷ್ಟು ದಿನ ಆರಾಮವಾಗಿ ಸಿಟಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದವನು, ನೌಕರಿ ಸಿಕ್ಕಿದ ಅನಂತರ ಕೂಡ ಎರಡು ವರ್ಷಗಳ ಕಾಲ ಬಸ್‌ನಲ್ಲಿ ಪ್ರಯಾಣ ಮಾಡಬಹುದಿತ್ತು. ಅವನಿಗೆ ಒಂದು ತಿಂಗಳಿಗೆ 12,000 ಸಂಬಳ ಅಂದುಕೊಳ್ಳಿ, ಅದರಲ್ಲಿ, ತಿಂಗಳಿಗೆ 2,500 ರೂ. ಉಳಿಸಿದರೂ ವರ್ಷದ ಕೊನೆಗೆ ಆ ಮೊತ್ತ 30,000 ರೂ. ಆಗುತ್ತಿತ್ತು. ಎರಡು ವರ್ಷ ತುಂಬಿದರೆ, ಹೀಗೆ ಉಳಿಸಿದ ಮೊತ್ತವೇ 60,000 ರೂ. ಆಗುತ್ತಿತ್ತು. ಅಕಸ್ಮಾತ್ 3ನೇ ವರ್ಷ ಕೂಡ ಬಸ್‌ನಲ್ಲಿ ಓಡಾಡುವ ನಿರ್ಧಾರ ಮಾಡಿ ಉಳಿತಾಯ ಮಾಡಿದ್ದರೆ, ಈ ಹಣವೇ 90,000 ಆಗುತ್ತಿತ್ತು. ಅಷ್ಟೂ ಹಣವನ್ನು ಕೊಟ್ಟು, ನಯಾ ಪೈಸೆ ಸಾಲ ಮಾಡದೆ ಒಂದು ಬೈಕ್ ಖರೀದಿಸಬಹುದಿತ್ತು ಅಲ್ಲವಾ?
Advertisement
- ಸಾಗರ್