Advertisement

ಮಹಮ್ಮದ್‌ ಕುಂಞಿ ಈಜು ತರಬೇತಿಗೆ 30 ವರ್ಷ !

12:09 AM Aug 04, 2019 | Sriram |

ಕುಂಬಳೆ: ನಿರಂತರವಾಗಿ ಮಕ್ಕಳಿಗೆ 29 ವರ್ಷಗಳಿಂದ ಉಚಿತ ಈಜು ತಬೇತಿ ನೀಡುವ ಮೊಗ್ರಾಲಿನ ಎಂ.ಎಸ್‌.ಮಹಮ್ಮದ್‌ ಕುಂಞಿಯವರ ಸಾಹಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ ದೊರೆತಿದೆ.

Advertisement

ಮೊಗ್ರಾಲ್ ಕಡಪ್ಪುರ ನಿವಾಸಿ ಬೆಸ್ತ ಕುಟುಂಬದ ಎಂ.ಎಸ್‌.ಮಹಮ್ಮದ್‌ ಕುಂಞಿ ತನ್ನ 16 ನೇ ವಯಸ್ಸಿನಲ್ಲೇ ಅಪ್ಪನೊಂದಿಗೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳಲು ತೊಡಗಿರುವರು.ಇದರೊಂದಿಗೆ ಈಜನ್ನು ಕರಗತ ಮಾಡಿಕೊಂಡಿದ್ದರು.

ಬಳಿಕ ಮೊಗ್ರಾಲ್ಇಶಾಲ್ ಗ್ರಾಮದ ಮಸೀದಿ ಕೆರೆಯಲ್ಲಿ ಇವರು ಕಳೆದ 1990 ರಿಂದ ಈ ತನಕ ವರ್ಷಂಪ್ರತಿ ಮಳೆಗಾಲದ ಜೂನ್‌ ತಿಂಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಈಜು ಕಲಿಸುತ್ತಿರುವರು.ಈ ತನಕ 3,000ಕ್ಕೂ ಅಧಿಕ ಮಕ್ಕಳಿಗೆ ಈಜು ಕಲಿಸಿರುವರು.ಶಾಲಾ ಮಕ್ಕಳಿಗೆ ಕ್ರೀಡಾಮನೋಭಾವನೆ ಬೆಳೆಯಲು ಮತ್ತು ಮೊಗ್ರಾಲನ್ನು ಸಂಪುರ್ಣ ಈಜು ಕಲಿತ ಗ್ರಾಮವನ್ನಾಗಿ ಮಾರ್ಪಡಿಸುವ ಉದ್ಧೇಶ ಇವರದು.ಮೊಗ್ರಾಲಿನ ವಿದ್ಯಾಲಯದ ಮತ್ತು ಇತರ ಶಾಲೆಗಳ ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಈಜು ಅಭ್ಯಸಿಸಲು ಇಲ್ಲಿಗೆ ಆಗಮಿಸುವರು.

ಯುವಕರು ಮಾತ್ರವಲ್ಲದೆ ಇತ್ತೀಚೆಗೆ ಹೆಣ್ಣು ಮಕ್ಕಳೂ ಈಜು ಕಲಿಯಲು ಬರುತ್ತಿರುವರು.ಇದೊಂದು ತಪಸ್ಸೆಂಬಂತೆ ತನ್ನ 50 ರ ಇಳಿ ವಯಸ್ಸಿನಲ್ಲೂ ಮಕ್ಕಳಿಗೆ ಅಕ್ಕರೆಯ ಗುರುವಾಗಿ ಈಜು ಕಲಿಸುವ ಸಾಹಸವನ್ನು ಮಹಮ್ಮದ್‌ಕುಂಞಿಯವರು ಮುಂದುವರಿಸಿರುವರು. ಈ ಬಾರಿ ಮಳೆ ವಿಳಂಬವಾದ ಕಾರಣ 30 ನೇ ವರ್ಷದ ಈಜು ತರಬೇತಿ ಜು.20 ರಿಂದ ಆರಂಭಗೊಂಡಿದೆ. ಇವರ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂ‌ಸ್ಥೆಗಳು ಸಮ್ಮಾನಿಸಿವೆ.

ಮೀನು ವ್ಯಾಪಾರಿ ಮಹಮ್ಮದ್‌ಕುಂಞಿಯವರು ಬಹುಮುಖ ಪ್ರತಿಭಾವಂತರಾಗಿದ್ದು ಕೋಲ್ಕಳಿ,ದಫ್‌ಮುಟ್ ಮತ್ತು ಬ್ಯಾಂಡ್‌ ಕಲಾವಿದನಾಗಿದ್ದಾರೆ..ಮೊಗ್ರಾಲ್ ದೇಶೀಯವೇದಿ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿರುವರು.ಈಜು ಕಲಿಯಲು ಆಸಕ್ತರಾಗಿರುವ ಮಕ್ಕಳು ಮತ್ತು ಯುವಕರು ಮಹಮ್ಮದ್‌ಕುಂಞಿಯವÃನ್ನು ಸಂಪರ್ಕಿಸಬಹುದು. ಮಕ್ಕಳಿಗೆ ಈಜು ಕಲಿಸಿದ ಧ್ಯನತೆ ಹೊಂದಿರುವೆ.ಆದರೆ ಗ್ರಾಮಪಂಚಾಯತ್‌ನಲ್ಲಿ ಈಜುಕೊಳ ನಿರ್ಮಿಸಿ ಮಕ್ಕಳಿಗೆ ಈಜು ಕಲಿಸುವ ಯೋಜನೆ ಕೈಗೊಳ್ಳಲಾಗಿದೆ.ಆದರೆ ಕುಂಬಳೆ ಗ್ರಾಮ ಪಂಚಾಯತಿನಲ್ಲಿ ಇದಕ್ಕೆ ಮುಂದಾಗದಿರುವುದು ದುರ್ದೈವ.‌ ಈಜು ವಿದ್ಯೆಯನ್ನು ಎಳವೆಯಲ್ಲೇ ಮಕ್ಕಳಿಗೆ ಕಲಿಸಲು ಶಾಲೆಯಲ್ಲಿ ಮತ್ತು ರಕ್ಷಕರು ಮುಂದಾಗಬೇಕಾಗಿದೆ ಎಂದು ಮಹಮ್ಮದ್‌ ಕುಂಞಿ ಹೇಳತ್ತಾರೆ.

Advertisement

ಗಿನ್ನೆಸ್‌ ದಾಖರೆಯಾಗಲಿ
ಮಹಮ್ಮದ್‌ಕುಂಞಿಯವರ ಸೇವೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರಕಾರ ಮತ್ತು ಸ್ಥಳೀಯಾಡಳಿತೆಗಳು ಇವರ ಸೇವೆಗೆ ಈ ತನಕ ಮಾನ್ಯತೆ ದೊರೆಯದಿರುವುದು ವಿಷಾದನೀಯ ವಿಚಾರ.ಇನ್ನಾದರೂ ಇವರನ್ನು ಪರಿಗಣಿಸಿ ಸಾರ್ವಜನಿಕ ಈಜುಕೊಳ ನಿರ್ಮಿಸುವುದಲ್ಲದೆ ಇವರ ಸಾಹಸ ಗಿನ್ನೆಸ್‌ ಪುಸ್ತಕದಲ್ಲಿ ದಾಖಲಾಗಬೇಕಾಗಿದೆ.
 - ಮೂಸಾ ಮೊಗ್ರಾಲ್‌
ಮಾಜಿ ಸದಸ್ಯಕುಂಬಳೆ ಗ್ರಾಮ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next