Advertisement

ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಿಲ್ಲ

09:54 AM Apr 05, 2019 | Team Udayavani |

ಶಾಟ್‌ಗನ್‌ ಎಂದು ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದವರು ಶತ್ರುಘ್ನ ಸಿನ್ಹಾ. ಇತ್ತೀಚೆಗಷ್ಟೇ ಬಿಜೆಪಿಯ ಸಂಗ ತೊರೆದು ಕಾಂಗ್ರೆಸ್‌ನ ಕೈ ಹಿಡಿದಿರುವ ಸಿನ್ಹಾ ಬಿಹಾರದ ಪಟ್ನಾ ಸಾಹಿಬ್‌ ಕ್ಷೇತ್ರದಿಂದ ಲೋಕಸಭೆಗೆ 2 ಬಾರಿ ಆಯ್ಕೆಯಾದವರು. ಬಿಜೆಪಿಯ ಹಾಲಿ ನಾಯಕತ್ವದ ವಿರುದ್ಧ ಸಿಡಿದು ಬಿದ್ದಿರುವ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರೆತಿದ್ದು, ಈ ಚುನಾವಣೆಯಲ್ಲಿ ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ವಿರುದ್ಧ ಸ್ಪರ್ಧೆ ನಡೆಸಲಿದ್ದಾರೆ.

Advertisement

ಬಿಜೆಪಿಯಿಂದ ಹೊರಬಂದಿದ್ದರ ಬಗ್ಗೆ ಹೇಗನಿಸುತ್ತದೆ? ಪಕ್ಷ ನಿಮ್ಮನ್ನು ಬಿಟ್ಟಿತೋ? ನೀವು ಪಕ್ಷವನ್ನು ಬಿಟ್ಟಿರೋ?
– ಬಿಜೆಪಿಯವರು ನನ್ನನ್ನು ಅಸಂತುಷ್ಟ ಎನ್ನುತ್ತಾರೆ. ಆದರೆ ಇದರಿಂದ ನಾನೇನೂ ವಿಚಲಿತನಾಗಿಲ್ಲ. ತತ್ವನಿಷ್ಠನಾಗಿದ್ದ ಕಾರಣಕ್ಕೇ ನನ್ನನ್ನು ದೂರ ತಳ್ಳಲಾಯಿತು. ನನ್ನಲ್ಲಿನ ಇಂಥ ಸ್ವಭಾವವನ್ನು° ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಗೌರವಿಸುತ್ತಾರೆ. ಪಕ್ಷಗಳಲ್ಲಿಯೂ ಇಂಥ ಸ್ವಭಾವವನ್ನು ಗೌರವಿಸುವುದು ಕಡಿಮೆಯೇ. ನೇರ ನಡೆ ನುಡಿಯ ರಾಜಕೀಯ ಈಗ ಅಪರೂಪವಾಗುತ್ತಿದೆ. ಹೀಗಾಗಿ, ಬೇರೊಂದು ದಾರಿಯಿಂದ ಅದನ್ನು ಅನುಸರಿಸಲು ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಮುಚ್ಚುಮರೆಯಿಲ್ಲದ ಸ್ವಭಾವದ ಬಗ್ಗೆ ನನಗೇನೂ ಪಶ್ಚಾತಾಪವಿಲ್ಲ.

ಯಾವ ಕಾರಣಕ್ಕೆ ಬಿಜೆಪಿಯವರು ನಿಮ್ಮನ್ನು ಕಡೆಗಣಿಸಿದರು ಎನಿಸುತ್ತದೆ? ಬಿಜೆಪಿ ನಾಯಕ ಮಂಗಲ್‌ ಪಾಂಡೆಯವರು, ಶತ್ರುಘ್ನ ಸಿನ್ಹಾಗೆ ಪಕ್ಷವೂ ಇಲ್ಲ, ಗೌರವವೂ ಇಲ್ಲ ಮತ್ತು ಭವಿಷ್ಯವೂ ಇಲ್ಲ ಎಂದಿದ್ದಾರಲ್ಲ?
ಬಿಜೆಪಿ ನಾಯಕರ ಪ್ರಕಾರ ನಾನು ಸಿಕ್ಕಾಪಟ್ಟೆ ನೇರವಾಗಿ ಮಾತನಾಡುತ್ತೇನೆ. ನಾನೇಕೆ ಆ ರೀತಿ ಮಾತನಾಡಬಾರದು? ನಾನು ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಅನುಭವಿಸಿದವನು, ಜನರ ಸಮಸ್ಯೆ- ನೋವುಗಳನ್ನು ಕಂಡಿದ್ದೇನೆ, ಇದೇ ವೇಳೆಯಲ್ಲೇ ಉಳ್ಳವರ ಆಡಳಿತ(ಅರಿಸ್ಟ್ರಾಕ್ರಸಿ) ಹೆಚ್ಚುವುದನ್ನು, ಅದು ನಿರಂಕುಶ ಪ್ರಭುತ್ವವಾಗಿ ಬದಲಾಗು ವುದನ್ನು ನೋಡಿದ್ದೇನೆ. ಅಮಿತ್‌ ಶಾರಂಥ ಹಿರಿಯ ನಾಯಕರು ನನ್ನಂಥ ರಾಜಕಾರಣಿ ಗಳೆಡೆಗೆ ಅಹಂಕಾರದಿಂದ ವರ್ತಿಸಿದರು.

ಮುಖ್ಯಮಂತ್ರಿ ಹುದ್ದೆಗೆ ನಿಮ್ಮನ್ನು ನೀವು ಅರ್ಹರೆಂದು ಪರಿಗಣಿಸುತ್ತೀರಾ?
ಹಿಂದಿನ ಹಲವು ಸಂದರ್ಭಗಳಲ್ಲಿ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳೀ ಮನೋಹರ ಜೋಶಿ, ಯಶ್ವಂತ್‌ ಸಿನ್ಹಾ ಮತ್ತು ಇತರರು ನನ್ನನ್ನು ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ಅರ್ಹ ವ್ಯಕ್ತಿ ಎಂದು ಬಿಂಬಿಸಿದ್ದರು. ಆದರೆ ಬಿಹಾರ ಬಿಜೆಪಿಯಲ್ಲಿನ ದುಷ್ಟಕೂಟವೊಂದು ಅದಕ್ಕೆ ಅವಕಾಶ ಕೊಡಲಿಲ್ಲ. ಪಕ್ಷದ ಹಿರಿಯ ನಾಯಕರ ಸಲಹೆಯನ್ನು ಕಡೆಗಣಿ ಸಿದ ಈ ಕೂಟ ನನಗೆ ಅವಮಾನ ಮಾಡಿತು, ಮೂಲೆಗುಂಪು ಮಾಡಿತು. ಕೊನೆಗೆ ಪಕ್ಷದ ಚಟುವಟಿಕೆಗಳಿಂದಲೂ ನನ್ನನ್ನು ದೂರವಿಟ್ಟರು. ಬಿಜೆಪಿಯ ರ್ಯಾಲಿಗಳಿಗೆ ಮತ್ತು ಸಭೆಗಳಿಗೆ ನನ್ನನ್ನು ಅಹ್ವಾನಿಸಲಿಲ್ಲ.

ಹಾಗಿದ್ದರೆ ಬಿಜೆಪಿ ನಾಯಕರು ಹೇಳುವಂತೆ ನಿಮ್ಮ ಕಥೆ ಮುಗಿದಿಲ್ಲ!?
ಅವರ ಮಾತು ನಿಜವಾಗಿದ್ದರೆ, ಅದೇಕೆ ಜೆಡಿಯು, ತೃಣಮೂಲ ಕಾಂಗ್ರೆಸ್‌, ಆರ್‌ಜೆಡಿ ಮತ್ತು ಕಾಂಗ್ರೆಸ್‌ ನಾಯಕರು ನನಗೆ ಗೌರವ ನೀಡುತ್ತಾರೆ ಹೇಳಿ? ಬಿಜೆಪಿ ಜೊತೆ ನಾನು ನಿಷ್ಠೆಯಿಂದ ನಡೆದುಕೊಂಡರೂ ಮೂಲೆಗುಂಪು ಮಾಡಲಾಯಿತು.

Advertisement

ನಿಮಗೆ ಮೊದಲಿನಿಂದಲೂ ಉನ್ನತ ಸ್ಥಳಗಳಲ್ಲಿ ಖಾಸಾ ಸ್ನೇಹಿತರಿದ್ದಾರೆ…
ಇಂದಿರಾ ಗಾಂಧಿಯವರ ಬಗ್ಗೆ ನಾನು ಯಾವ ರೀತಿಯ ಗೌರವ ಹೊಂದಿದ್ದೇನೆ ಎಂಬ ಬಗ್ಗೆ ಆತ್ಮಚರಿತ್ರೆಯಲ್ಲಿ ಉಲ್ಲೇಖೀಸಿದ್ದೇನೆ. ಲಾಲು ಪ್ರಸಾದ್‌ ಯಾದವ್‌ ನನ್ನ ಕುಟುಂಬದ ಸ್ನೇಹಿತ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕೂಡ ನನ್ನ ಅತ್ಯುತ್ತಮ ಸ್ನೇಹಿತ. ನರೇಂದ್ರ ಮೋದಿಯವರೊಂದಿಗೆ ಸೇರಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ.
ಒಬ್ಬ ವ್ಯಕ್ತಿಯಾಗಿ ನರೇಂದ್ರ ಮೋದಿಯವರ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ಅಮಿತ್‌ ಶಾ ಮೇಲೆ ಇಟ್ಟುಕೊಂಡ ನಂಬಿಕೆ ಅವರನ್ನು ಹಾದಿತಪ್ಪಿಸುತ್ತಿದೆ. ಅಮಿತ್‌ ಶಾ ಬಿಜೆಪಿಯನ್ನು ನಿರಂಕುಶಾಧಿಕಾರಿಗಳ ಪಕ್ಷವಾಗಿಸಿದ್ದಾರೆ.

ಭವಿಷ್ಯದ ಬಗ್ಗೆ ನಿಮ್ಮ ಯೋಜನೆಗಳೇನು?
ಮುಂದಿನ ದಿನಗಳಲ್ಲಿ ಬರುವ ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತೇನೆ. ಪಾಟ್ನಾ ಸಾಹಿಬ್‌ ಕ್ಷೇತ್ರಕ್ಕೆ ಗಮನ ಕೇಂದ್ರೀಕರಿಸುತ್ತೇನೆ. ಬಿಜೆಪಿ ವತಿಯಿಂದ ನನ್ನ ವಿರುದ್ಧ ಯಾರನ್ನು ಕಣಕ್ಕಿಳಿಸದರೂ ಅವರು ಸೋಲಲಿದ್ದಾರೆ. ನಾನು ಜನರಿಗಾಗಿ ಮತ್ತು ಜನರೊಂದಿಗೆ ಬದುಕುವವನು. ಹೀಗಾಗಿ ನನ್ನ ಜನಪ್ರಿಯತೆಯನ್ನು ಸರಿಗಟ್ಟಲು ಕೆಲವೇ ಕೆಲವರಿಗೆ ಮಾತ್ರ ಸಾಧ್ಯ.

ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಬಿಜೆಪಿ ವತಿಯಿಂದ ಅಭ್ಯರ್ಥಿಯಾಗಿ ನಿಮ್ಮ ಎದುರು ಸ್ಪರ್ಧಿಸಿದ್ದಾರೆ. ಪಾಟ್ನಾ ಸಾಹಿಬ್‌ ಕ್ಷೇತ್ರದಲ್ಲಿ ಕಾಯಸ್ಥ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರಲ್ಲ?
– ಅವರ ವಿರುದ್ಧ ವೈಯಕ್ತಿಕವಾಗಿ ನನಗೆ ವೈಷಮ್ಯವೇನೂ ಇಲ್ಲ. ಅವರು ಸ್ಪರ್ಧೆ ಮಾಡುವುದನ್ನು ಸ್ವಾಗತಿಸುತ್ತೇನೆ. ಈ ಜನರೇನಿದ್ದಾರಲ್ಲ, ಅವರಿಗೆ ಎಲ್ಲಾ ಗೊತ್ತಿದೆ. ಎಲ್ಲವನ್ನೂ ಅವರೇ ಲೆಕ್ಕಹಾಕಿ ನಿರ್ಧರಿಸಲಿ ದ್ದಾರೆ. ಬಿಜೆಪಿಯಲ್ಲಿನ ಕೆಲವು ಪರಿಸ್ಥಿತಿಗಳಿಂ ದಾಗಿ ನಾನು ಅದರ ವಿರುದ್ಧ ಹೋಗಬೇಕಾ ಯಿತು. ಸತ್ಯ ಹೇಳುವುದನ್ನು ಬಂಡೇಳು ವುದು ಎಂದು ಅವರು ತಿಳಿದುಕೊಂಡರೆ ನಾನೇನೂ ಮಾಡಲಿಕ್ಕಾಗದು, ಅವರು ಹಾಗೆಯೇ ಅಂದುಕೊಳ್ಳಲಿ. ನಂಬಿಕೆ ಇದ್ದರೆ ದೀಪದ ಬೆಳಕು ಬಿರುಗಾಳಿಯನ್ನೂ ತಾಳಿಕೊಳ್ಳಬಲ್ಲದು ಎನ್ನುವುದನ್ನು ತೋರಿಸಿಕೊಡಲಿದ್ದೇನೆ. 2014ರ ಚುನಾವಣೆಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದೇನೆ ಎಂಬ ವಿಶ್ವಾಸ ನನಗಿದೆ.

ನೀವು ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗದೇ ಇದ್ದದ್ದರಿಂದ ಬಿಜೆಪಿಯ ಕಟು ಟೀಕಾಕಾರರಾಗಿ ಬದಲಾದಿರಿ ಎಂಬ ಆರೋಪವಿದೆ.
ನನ್ನಲ್ಲಿ ಯಾವ ಕೊರತೆ ಇದೆ? ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕವರಲ್ಲಿ ಇರುವ ಅದ್ಯಾವ ಅರ್ಹತೆ ನನಗಿಲ್ಲ? ಅನ್ಯರಿಗೆ ಹೋಲಿಸಿದರೆ ನಾನು ಉತ್ತಮ ವಾಕ³ಟುವಲ್ಲವೇ, ಸಾಧಕನಲ್ಲವೇ, ಜನರಿಗೆ ಹತ್ತಿರವಾಗಿ ಇಲ್ಲವೇ, ಬುದ್ಧಿವಂತನಲ್ಲವೇ? ಇಷ್ಟೆಲ್ಲ ಇದ್ದುಕೊಂಡು ನನಗೇನು ಸಿಕ್ಕಿತು? ಬಡ್ತಿಯೂ ಸಿಗಲಿಲ್ಲ, ಭದ್ರತೆಯೂ ಸಿಗಲಿಲ್ಲ, ಪ್ರಚಾರವೂ ಸಿಗಲಿಲ್ಲ, ಮೆಚ್ಚುಗೆಯೂ ಸಿಗಲಿಲ್ಲ. ಪ್ರಧಾನಿ ಮೋದಿಯವರು ಒಂದು ಒಕ್ಕೂಟದ ಬಂದಿಯಾಗಿದ್ದಾರೆ. ಸರ್ಕಾರದ ಹುಸಿ ಭರವಸೆಗಳು ಮತ್ತು ಕೆಲವು ನಡೆಗಳಿಂದಾಗಿ ದೇಶದ ಜನರು ಭ್ರಮನಿರಸನಗೊಂಡಿದ್ದಾರೆ.

(ಸಂದರ್ಶನ ಕೃಪೆ: ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)

Advertisement

Udayavani is now on Telegram. Click here to join our channel and stay updated with the latest news.

Next