Advertisement

ದತ್ತಾಂಶಕ್ಕಾಗಿ ಕೇಂದ್ರದಿಂದ ಪ್ರತ್ಯೇಕ ಪ್ಲಾಟ್‌ಫಾರಂ

07:00 AM Apr 08, 2018 | |

ಹೊಸದಿಲ್ಲಿ: ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ದತ್ತಾಂಶ, ಯೋಜನೆಗಳ ಜಾರಿ ಹಾಗೂ ಇತರ ಎಲ್ಲ ಮಹತ್ವದ ಅಂಶಗಳಿಗೆ ಸಂಬಂಧಿಸಿದಂತೆ ದತ್ತಾಂಶವನ್ನು ಒದಗಿಸಲು ಕೇಂದ್ರ ಸರಕಾರ ಪ್ರತ್ಯೇಕ ಸುಧಾರಿತ ತಂತ್ರಜ್ಞಾನ ವೇದಿಕೆಯೊಂದನ್ನು ನಿರ್ಮಿಸಲು ನಿರ್ಧರಿಸಿದೆ. ಇದರಲ್ಲಿ ನಾಗರಿಕರ ದತ್ತಾಂಶಗಳು, ಸರಕಾರ ಯಾವ ಯೋಜನೆಗಳಿಗೆ ಎಷ್ಟು ವೆಚ್ಚ ಮಾಡಿದೆ ಮತ್ತು ವಿವಿಧ ಸರ್ಕಾರಿ ಯೋಜನೆಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎಂಬ ಮಾಹಿತಿಗಳೂ ದತ್ತಾಂಶ ರೂಪದಲ್ಲಿ ಲಭ್ಯವಿರುತ್ತವೆ. ಆದರೆ ಇದರಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ದತ್ತಾಂಶ ಇರುವುದಿಲ್ಲ. ಸರಕಾರದ ಕಾರ್ಯ ನಿರ್ವಹಣೆಯನ್ನು ಪಾರದರ್ಶಕ ವಾಗಿಸುವುದೇ ಇದರ ಮೂಲ ಉದ್ದೇಶವಾಗಿದೆ.

Advertisement

ಈ ರಾಷ್ಟ್ರೀಯ ದತ್ತಾಂಶ ಮತ್ತು ಅನಾಲಿಟಿಕ್ಸ್‌ ಪ್ಲಾಟ್‌ಫಾರಂ ರೂಪಿಸಲು ನೀತಿ ಆಯೋಗವು ಯೋಜನೆಯನ್ನು ರೂಪಿಸುತ್ತಿದ್ದು, ಖಾಸಗಿ ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದೆ. ದತ್ತಾಂಶದ ವಿಶ್ಲೇಷಣೆಗೆ ಈ ಪ್ಲಾಟ್‌ಫಾರಂನಲ್ಲಿ ಕೃತಕ ಬುದ್ಧಿಮತ್ತೆಯನ್ನೂ ಬಳಸಿಕೊಳ್ಳ ಲಾಗುತ್ತದೆ. ಈ ಪ್ಲಾಟ್‌ಫಾರಂನಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಸಂಶೋಧಕರು ತಮಗೆ ಬೇಕಾದ ದತ್ತಾಂಶವನ್ನು ಪಡೆಯಬಹುದಾಗಿದೆ. ಈಗಾಗಲೇ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜಾÒನ ಸಚಿವಾಲಯವು ಒಂದು ದತ್ತಾಂಶ ಸಂಬಂಧಿ ವೆಬ್‌ಸೈಟ್‌ ನಿರ್ವಹಿಸುತ್ತಿದೆ. ಆದರೆ ಈ ವೆಬ್‌ಸೈಟ್‌ನಲ್ಲಿ ಕೇವಲ ದತ್ತಾಂಶಗಳಿರುತ್ತವೆಯೇ ಹೊರತು, ದತ್ತಾಂಶಗಳನ್ನು ಆಧರಿಸಿ ವಿಶ್ಲೇಷಣೆ ನಡೆಸುವುದಿಲ್ಲ. 50 ರಿಂದ 100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸ ಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next