Advertisement

Davanegere: ಲೋಕ ಅದಾಲತ್‌ ನಲ್ಲಿ ಒಂದಾದ 25 ದಂಪತಿಗಳು

06:11 PM Sep 14, 2024 | Team Udayavani |

ದಾವಣಗೆರೆ: ವಿವಿಧ ಕಾರಣಗಳಿಂದ ವಿಚ್ಛೇದನ ಬಯಸಿದ್ದ ಜಿಲ್ಲೆಯ 25 ದಂಪತಿಗಳು ಶನಿವಾರ (ಸೆ.14) ನಡೆದ ಮೂರನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ (National Lok Adalat) ಒಂದಾದರು.

Advertisement

ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿನ 17 ಜೋಡಿಗಳು ಹಾಗೂ ಜಗಳೂರು ಹಾಗೂ ಚನ್ನಗಿರಿ ನ್ಯಾಯಾಲಯದಲ್ಲಿ ತಲಾ ಎರಡು ಜೋಡಿಗಳು, ಹರಿಹರ ನ್ಯಾಯಾಲಯದಲ್ಲಿ ಮೂರು ಜೋಡಿಗಳು ಮತ್ತು ಹೊನ್ನಾಳಿ ನ್ಯಾಯಾಲಯದಲ್ಲಿ ಒಂದು ಜೋಡಿ ಮತ್ತೆ ಒಂದಾಗಿವೆ.

ನಗರದ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಒಂದಾದ ಜೋಡಿಗಳಿಗೆ ಪರಸ್ಪರ ಹಾರ ಹಾಕಿಸಿ, ಸಿಹಿ ತಿನಿಸಲಾಯಿತು. ನ್ಯಾಯಾಧೀಶರು, ನ್ಯಾಯವಾದಿಗಳು ಒಂದಾದ ಜೋಡಿಗಳಿಗೆ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.