Advertisement

50 ದಿನಗಳ ಸಾಧನೆಯೇ ಮುಂದಿನ ದಿಕ್ಸೂಚಿ

09:24 AM Jul 28, 2019 | mahesh |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 2ನೇ ಅವಧಿಯ 50 ದಿನಗಳಲ್ಲಿ ಜಾರಿ ಮಾಡಲಾಗಿರುವ ಅಭಿವೃದ್ಧಿ ಕಾಮಗಾರಿಗಳು 50 ವರ್ಷಗಳ ಸಾಧನೆಗೆ ಸಮ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

Advertisement

ಪಕ್ಷದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಮಾತ ನಾಡಿದ ಅವರು, ಅಧಿಕಾರದ 100 ದಿನಗಳು ಪೂರ್ತಿ ಯಾದ ಬಳಿಕ ಸುದ್ದಿಗೋಷ್ಠಿ ನಡೆಸುವುದು ಸಾಮಾನ್ಯ. ಆದರೆ ನಾವು 50 ದಿನಗಳಲ್ಲೇ ಅದನ್ನು ಆರಂಭಿಸಿದ್ದೇವೆ ಎಂದಿದ್ದಾರೆ. 2024ರ ಒಳಗಾಗಿ ದೇಶದ ಪ್ರತಿ ಮನೆಗೆ ಟ್ಯಾಪ್‌ ಮೂಲಕ ಕುಡಿಯುವ ನೀರು ಸಹಿತ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದಿದ್ದಾರೆ.

ಉತ್ತಮ ಸಂಕೇತ
ಎರಡನೇ ಅವಧಿಯ ಮೊದಲ ಐವತ್ತು ದಿನ ಗಳಲ್ಲಿ ಕೈಗೊಳ್ಳಲಾಗಿರುವ ನಿರ್ಧಾರಗಳು ದೇಶದ ಮುಂದಿನ ದಿನಗಳಿಗೆ ಉತ್ತಮ ಸಂಕೇತ ನೀಡು ವಂಥದ್ದಾಗಿವೆ. ಅವುಗಳು ದೇಶದ ಅಭಿ ವೃದ್ಧಿಯ ಮೈಲುಗಲ್ಲುಗಳು ಎಂದು ಅವರು ವ್ಯಾಖ್ಯಾ ನಿಸಿದ್ದಾರೆ. ಅಲ್ಲದೆ ಅದಕ್ಕಾಗಿ ರಾಜಕೀಯ ನಿಲುವು ಮತ್ತು ಇಚ್ಛಾಶಕ್ತಿ ಅಗತ್ಯ ಎಂದಿದ್ದಾರೆ ಬಿಜೆಪಿ ಕಾರ್ಯಾಧ್ಯಕ್ಷ.

1.92 ಕೋಟಿ ಮನೆಗಳು
ಎರಡನೇ ಅವಧಿಯಲ್ಲಿ ಮೋದಿ ನೇತೃತ್ವದ ಸರಕಾರ ದೇಶದಲ್ಲಿ 1.92 ಕೋಟಿ ಮನೆಗಳ ನಿರ್ಮಾಣಕ್ಕೆ ಉದ್ದೇಶಿಸಿದೆ ಎಂದಿದ್ದಾರೆ ನಡ್ಡಾ. ಅವುಗಳಿಗೆ ಶುದ್ಧ ಕುಡಿಯುವ ನೀರು, ಅಡುಗೆ ಅನಿಲ, ಶೌಚಾಲಯ ಒಳಗೊಳ್ಳಲಿದೆ. ಅದಕ್ಕಾಗಿ ಕೇಂದ್ರ ಸರಕಾರ ಹೊಸ ಯೋಜನೆ ಹಾಕಿದೆ ಎಂದಿದ್ದಾರೆ.

ಜಲದಿಂದ ಚಂದ್ರನವರೆಗೆ
ಮೋದಿ ನೇತೃತ್ವದ ಸರಕಾರ ಜಲದಿಂದ ಚಂದ್ರನ ವರೆಗಿನ ಹಲವು ಯೋಜನೆಗಳನ್ನು 50 ದಿನ ಗಳ ಅವಧಿ ಯಲ್ಲಿ ಜಾರಿ ಮಾಡಿದೆ. ಗ್ರಾಮೀಣರು, ಬಡವರು, ಕಾರ್ಮಿಕರು, ಸಣ್ಣ ಅಂಗಡಿ ಇಟ್ಟು ಕೊಂಡವರು, ವಂಚಿತ ರೆಲ್ಲರಿಗೂ ಅನುಕೂಲ ವಾಗುವಂಥ ನಿರ್ಧಾರ ಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

Advertisement

ಅತ್ಯುತ್ತಮ ಕಲಾಪ
ಸದ್ಯ ನಡೆಯುತ್ತಿರುವ ಲೋಕಸಭಾ ಅಧಿವೇಶನ ಅತ್ಯಂತ ಫ‌ಲಪ್ರದವೆಂದು ಬಣ್ಣಿಸಿದ ನಡ್ಡಾ ಅವರು, ಹೆಚ್ಚಿನ ವಿಧೇಯಕಗಳು ಈ ಬಾರಿಯ ಅಧಿವೇಶನದಲ್ಲಿ ಅಂಗೀಕಾರವಾಗಿವೆ ಎಂದಿದ್ದಾರೆ.

100 ಲಕ್ಷ ಕೋಟಿ ಹೂಡಿಕೆ
2024-25ನೇ ವಿತ್ತೀಯ ವರ್ಷದ ವೇಳೆಗೆ ದೇಶದ ಅರ್ಥ ವ್ಯವಸ್ಥೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಏರಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯ ಕ್ಷೇತ್ರದಲ್ಲಿ 100 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದೆ. ಇದರಿಂದಾಗಿ ಉದ್ಯೋಗ ಸೃಷ್ಟಿಗೆ ಕೂಡ ಅನುಕೂಲವಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next