Advertisement

ಕೆಡಿಪಿ ಸಭೆ ಮಧ್ಯೆ ಬಂತು ಸಾವಿನ ಸುದ್ದಿ

01:04 PM Jul 28, 2017 | Team Udayavani |

ಕಲಬುರಗಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನಿಧನದ ಮಾಹಿತಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|ಶರಣಪ್ರಕಾಶ  ಪಾಟೀಲರಿಗೆ ಮೊದಲು ಬಂತು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ಹನ್ನೊಂದು ಗಂಟೆ ಹೊತ್ತಿಗೆ ಕೆಡಿಪಿ ಸಭೆ ಆರಂಭವಾಗಿತ್ತು. ಕಲಾಪ ಶುರುವಾಗಿ ಸರಿಯಾಗಿ 9 ನಿಮಿಷವಾಗಿತ್ತು. ಅಷ್ಟೊತ್ತಿಗೆ ಸಚಿವರಿಗೆ ಕರೆಯೊಂದು ಬಂದಿತ್ತು. ಅದು ಧರ್ಮಸಿಂಗ್‌ ಹಠಾತ್‌ ನಿಧನದ ಮಾಹಿತಿಯಾಗಿತ್ತು. ಇದೇ ಸಮಯಕ್ಕೆ ಪಕ್ಕದಲ್ಲಿದ್ದ ಮಹಾಪೌರ ಶರಣು ಮೋದಿ ಅವರಿಗೂ ಕರೆ ಬಂದಿತ್ತು. ಇದರಿಂದ ಗಾಬರಿಯಾದ ಸಚಿವರು, ಸದನದ ಗಮನಕ್ಕೆ ವಿಷಯ ತಂದು ಸಭೆ ಮುಂದೂಡಲಾಗಿದೆ ಎಂದು ಎರಡು ನಿಮಿಷಗಳ ಮೌನಾಚರಣೆಗೆ ಮುಂದಾದರು. ಧರ್ಮಸಿಂಗ್‌ ಅವರ ನಿಧನದಿಂದ ಹೈದ್ರಾಬಾದ ಕರ್ನಾಟಕವಲ್ಲದೇ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅನಾಥ ಪ್ರಜ್ಞೆ ಎದುರಾಗಿದೆ ಎಂದು ಸಚಿವ ಡಾ|ಪಾಟೀಲ, ಶಾಸಕರಾದ ಖಮರುಲ್‌ ಇಸ್ಲಾಂ, ಕೆ.ಬಿ. ಶಾಣಪ್ಪ ಅವರು ಕಂಬನಿ ಮಿಡಿದರು. ಇನ್ನೊಂದೆಡೆ ಸಚಿವ ಡಾ| ಪಾಟೀಲ ಅವರು ಬುಧವಾರವಷ್ಟೇ ಧರ್ಮಸಿಂಗ್‌ ಅವರಿಗೆ ದೂರವಾಣಿ ಕರೆ ಮಾಡಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next