Advertisement

ಎಂಟು ಮುಸ್ಲಿಂ ರಾಷ್ಟ್ರಗಳಿಗೆ ಹೊಸ ನಿರ್ಬಂಧ

03:50 AM Mar 22, 2017 | Team Udayavani |

ವಾಷಿಂಗ್ಟನ್‌: ಎಂಟು ಮುಸ್ಲಿಂ ರಾಷ್ಟ್ರಗಳನ್ನು ಗುರಿಯಾಗಿರಿಸಿ ಕೊಂಡು ಹೊಸ ವಲಸೆ ನೀತಿ ಘೋಷಣೆ ಮಾಡಿದ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ದುಬೈ ಮತ್ತಿತರ ರಾಷ್ಟ್ರಗಳಿಂದ ಅಮೆರಿಕಕ್ಕೆ ಬರುವ ವಿಮಾನದಲ್ಲಿ ಕ್ಯಾಮರಾ, ಲ್ಯಾಪ್‌ಟಾಪ್‌, ಐಪ್ಯಾಡ್‌, ಕಿಂಡಲ್‌  ಮತ್ತು ಇತರ ಇಲೆಕ್ಟ್ರಾನಿಕ್‌ ವಸ್ತುಗಳನ್ನು ತರುವುದರ ಮೇಲೆ ನಿಷೇಧ ಹೇರಿದೆ. ಯುಕೆ ಕೂಡ ಈ ನಿಷೇಧ ಹೇರಿದೆ. ರಾಷ್ಟ್ರಗಳಿಂದ ಬರುವ ಪ್ರಯಾಣಿಕರಲ್ಲಿ ಇಂಥ ವಸ್ತುಗಳು ಇವೆಯೇ ಎಂಬುದರ ಬಗ್ಗೆ ಕರಾರುವಾಕ್ಕಾಗಿ ಪರಿಶೀಲನೆ ಆಗಬೇಕೆಂಬ ಕಟ್ಟಾಜ್ಞೆ ಹೊರಡಿಸಲಾಗಿದೆ. ಈ ಆದೇಶದಿಂದಾಗಿ ದುಬೈ, ಇಸ್ತಾಂಬುಲ್‌ ಸೇರಿದಂತೆ 10 ಏರ್‌ಪೋರ್ಟ್‌ಗಳಿಂದ ಬರುವ 50ಕ್ಕೂ ಹೆಚ್ಚು ವಿಮಾನಗಳಿಗೆ ತೊಂದರೆಯಾಗಲಿದೆ. ಈ ಆದೇಶ ಜಾರಿಗೆ ತರಲು 96 ಗಂಟೆಗಳ ಅವಧಿ ನೀಡಲಾಗಿದೆ.

Advertisement

ಸುಲಭವಾಗಿ ಸಾಗಿಸುವ ಇಲೆಕ್ಟಾನಿಕ್‌ ವಸ್ತುಗಳ ಮೂಲಕ ಸ್ಫೋಟಕಗಳನ್ನು ತರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಈ ಕಠಿಣ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಅಮೆರಿಕದ ಗೃಹ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next