Advertisement

ಲಿಜ್‌ ಟ್ರಾಸ್‌ಗೆ ಬ್ರಿಟನ್‌ ಪಿಎಂ ಹುದ್ದೆ? ಮಾಜಿ ಸಚಿವ ರಿಷಿ ಸುನಕ್‌ಗೆ ಹಿನ್ನಡೆ

08:05 PM Sep 02, 2022 | Team Udayavani |

ಲಂಡನ್‌: ಬ್ರಿಟನ್‌ನ ಮುಂದಿನ ಪ್ರಧಾನಮಂತ್ರಿಯಾಗಿ ಮಾಜಿ ಸಚಿವೆ ಲಿಜ್‌ ಟ್ರಾಸ್‌ ಆಯ್ಕೆಯಾಗುವುದು ಬಹುತೇಕ ಖಚಿತ.

Advertisement

ಯು.ಕೆ.ಯಾದ್ಯಂತ ನಡೆಸಿರುವ ಪ್ರಯಾಣ, ಮೂರು ಟಿ.ವಿ.ಚರ್ಚೆಗಳು ಮತ್ತು ಸಮೀಕ್ಷೆಗಳಿಂದ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಮಾಜಿ ಸಚಿವ ರಿಷಿ ಸುನಕ್‌ ಅವರಿಗಿಂತ ಹೆಚ್ಚಿನ ಬೆಂಬಲ ಟ್ರಾಸ್‌ ಅವರಿಗೇ ವ್ಯಕ್ತವಾಗಿರುವ ಲಕ್ಷಣ ಗೋಚರಿಸಿದೆ. ಸೆ.5ರಂದು ಪ್ರಧಾನಮಂತ್ರಿ ಹುದ್ದೆಗೆ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಬಳಿಕ ಹಾಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ರಾಣಿ 2ನೇ ಎಲಿಜಬೆತ್‌ ಅವರಿಗೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ. ಕಳೆದ ತಿಂಗಳ ಆರಂಭದಿಂದಲೇ ಕನ್ಸರ್ವೇಟಿವ್‌ ಪಕ್ಷದ ಟೋರಿ ಸದಸ್ಯರು ಆನ್‌ಲೈನ್‌ ಮತ್ತು ಅಂಚೆ ಮೂಲಕ ಮತದಾನ ಮಾಡಲಾರಂಭಿಸಿದ್ದಾರೆ. 2 ಲಕ್ಷಕ್ಕೂ ಅಧಿಕ ಮಂದಿ ಸದಸ್ಯರು ಅದರಲ್ಲಿ ಭಾಗವಹಿಸುತ್ತಿದ್ದಾರೆ. ಲಿಜ್‌ ಟ್ರಾಸ್‌ ಅವರು ಸುನಕ್‌ ಅವರಿಗಿಂತ ಹೆಚ್ಚಿನ ಬೆಂಬಲ ಪಡೆದುಕೊಂಡಿದ್ದಾರೆ.

ಬೆಂಬಲ ಕುಗ್ಗಿದ್ದು ಹೇಗೆ?
ಜುಲೈ ಮಾಸಾಂತ್ಯದವರೆಗೆ ಸುನಕ್‌ ಅವರೇ ಪ್ರಧಾನಿ ರೇಸ್‌ನಲ್ಲಿ ಮೊದಲಿಗರಾಗಿದ್ದರು. ಆದರೆ, ಆಗಸ್ಟ್‌ ಮಧ್ಯಭಾಗದಿಂದ ಮಾಜಿ ಸಚಿವೆ ಟ್ರಾಸ್‌ ಅವರಿಗೆ ಬೆಂಬಲ ನಿಧಾನಕ್ಕೆ ಹೆಚ್ಚತೊಡಗಿತು. ಸುನಕ್‌ ಅವರಿಗಿಂತ ಲಿಸ್‌ ಟ್ರಾಸ್‌ ಅವರೇ ಉತ್ತಮ ರಾಜಕಾರಣಿ ಆಗಬಲ್ಲರು ಎನ್ನುವುದು ಕನ್ಸರ್ವೇಟಿವ್‌ ಸದಸ್ಯರ ಭಾವನೆಯಾಗಿರಬಹುದು ಎಂದು “ದ ಟೆಲಿಗ್ರಾಫ್’ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next