ಪಿರಿಯಾಪಟ್ಟಣ: ತಾಲೂಕಿನ ಕನಕ ಅಭಿವೃದ್ದಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದೊರೆಕೆರೆ ನಾಗೇಂದ್ರ ಉಪಾಧ್ಯಕ್ಷರಾಗಿ ಆಲನಹಳ್ಳಿ ಗಣೇಶ್ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಕನಕ ಸಮುದಾಯ ಭವನದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಿ.ಎ.ನಾಗೇಂದ್ರರನ್ನು ಮತ್ತು ಉಪಾಧ್ಯಕ್ಷ ರಾಗಿ ಗಣೇಶ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿಡಿಒ ಪ್ರಸಾದ್ ಘೋಷಣೆ ಮಾಡಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಡಿ.ಎ.ನಾಗೇಂದ್ರ ಚುನಾವಣೆ ಸ್ಪರ್ಧೆಗೆ ಮಾತ್ರ ನಂತರ ಎಲ್ಲರೂ ಸಂಘದ ಅಡಿಯಲ್ಲಿ ಸರ್ವ ಸಮಾನರು ಸಂಘ ಇನ್ನು ಬಾಲ್ಯಾವಸ್ಥೆಯಲ್ಲಿ ಇದ್ದು ಇದನ್ನು ಪ್ರೌಢಾವಸ್ಥೆಗೆ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಶೇರುದಾರರ ಹೆಚ್ಚಳ ಮಾಡುವುದರೊಂದಿಗೆ ಸಂಘದ ವತಿಯಿಂದ ಎಲ್ಲರಿಗೂ ಉತ್ತಮ ಅನುಕೂಲವಾಗುವಂತೆ ಕ್ರಮವಹಿಸುವುದಾಗಿ ಭರವಸೆ ನೀಡದರು.
ಸಿಡಿಒ ಪ್ರಸಾದ್ ಮಾತಾಡಿ ಒಟ್ಟು 11 ಮಂದಿ ನಿರ್ದೇಶಕರಲ್ಲಿ 10 ಮಂದಿ ಹಾಜರಿದ್ದು 1 ನಿರ್ದೇಶಕರು ಗೈರು ಹಾಜರಾಗಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೆ ಒಂದೇ ನಾಮಪತ್ರಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಇವರನ್ನೇ ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಣೇಶ್ ಮಾತನಾಡಿದರು ನಿರ್ದೇಶಕರಾದ ಆರ್.ಎಸ್.ಮಹಾದೇವ್, ಶಿವಣ್ಣ, ಚಿಕ್ಕೇಗೌಡ, ಎನ್.ಎಸ್.ಮಹದೇವ್, ಕೆ.ಟಿ.ಮಹದೇವ್, ಕೆ.ಎಂ.ಲಕ್ಷ್ಮಣ, ಶೀಲಾ, ಎಚ್.ಎನ್.ಲೋಹಿತ, ತಾಲೂಕು ಕುರುಬರ ಸಂಘದ ಅಧ್ಯಕ್ಷ ವಿ.ಜಿ.ಅಪ್ಪಾಜಿಗೌಡ, ಕಾರ್ಯದರ್ಶಿ ನೀಲಂಗಾಲ ಜಯಣ್ಣ, ಸಿಇಒ ನಂಜುಂಡೇಗೌಡ, ಸೇರಿದಂತೆ ಮತ್ತಿತರರು ಹಾಜರಿದ್ದರು.