Advertisement

ದಿವಾಳಿಯೆಂದು ಘೋಷಿಸಲು ಅರ್ಜಿ ಕೊಟ್ಟ ಭೂಪ!

06:50 AM Nov 14, 2017 | |

ಬಳ್ಳಾರಿ: ಹಲವರಿಂದ ಸಾಲ ಪಡೆದು ಐಷಾರಾಮಿ ಜೀವನ ನಡೆಸಿದ ಇಂಜಿನಿಯರ್‌ ಪದವೀಧರ ಈಗ ಸಾಲ ಮರುಪಾವತಿಸಲಾಗದೆ ದಿವಾಳಿ ಎಂದು ಘೋಷಿಸುವಂತೆ ನ್ಯಾಯಾಲಯದ ಮೆಟ್ಟಿಲು ಏರಿದ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ.

Advertisement

ನಗರದ ಇಂಜಿನಿಯರ್‌ ಪದವೀಧರ ರಕ್ಷಿತ್‌ (27) ಬಳ್ಳಾರಿ ಹಾಗೂ ಬೆಂಗಳೂರಿನ ವರ್ತಕರು, ಸಮಾಜದ ವಿವಿಧ ಸ್ಥರಗಳ ಜನರಿಂದ 54,57,72,527 (54.57 ಕೋಟಿ ರೂ.) ರೂ.ಸಾಲ ಪಡೆದು, ಅವರಿಗೆ ಹಣ ಮರುಪಾವತಿ ಮಾಡಲು ಸಾಧ್ಯವಿಲ್ಲ. ನನ್ನನ್ನು ದಿವಾಳಿಯಾದ ವ್ಯಕ್ತಿ ಎಂದು ಘೋಷಿಸಿ ಎಂದು ಬಳ್ಳಾರಿಯ 2ನೇ ಹೆಚ್ಚು ವರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ರಕ್ಷಿತ್‌ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಖೈಝೆನ್‌ ಹೆಸರಿನಲ್ಲಿ ಡಿಸೈನರ್‌ ಸಿದಟಛಿ ಉಡುಪುಗಳ ಶೋ ರೂಂ ತೆರೆದಿದ್ದ. ಜತೆಗೆ ಸಿದಟಛಿ ಉಡುಪು ತಯಾರಿಸುವ ಘಟಕವನ್ನೂ ಹೊಂದಿದ್ದ. ಹಲವಾರು ವರ್ತಕರಿಂದ ಉತ್ತಮ ಬಡ್ಡಿ ದರ ನೀಡುವುದಾಗಿ ಕೋಟ್ಯಂತರ ರೂ. ಪಡೆದಿದ್ದ. ಆದರೆ, ತಾನು ಪಡೆದ ಸಾಲವನ್ನು ಮರುಪಾವತಿಸಲಾಗುವುದಿಲ್ಲ, ನನ್ನನ್ನು ದಿವಾಳಿ ಕಾಯ್ದೆಯ (ಇನ್ಸಾಲ್ವೆನ್ಸಿ ಆಕ್ಟ್) ಸೆ.10, 11, 12 ಮತ್ತು 13ರ ಅಡಿ ದಿವಾಳಿಯಾದ ವ್ಯಕ್ತಿ ಎಂದು ಘೋಷಿಸಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಕಾರಣಗಳು: ರಕ್ಷಿತ್‌ ತಾನು ವಕೀಲರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, “2014ರಿಂದ ಉಡುಪು ಉದ್ಯಮದಲ್ಲಿ
ತೊಡಗಿಸಿಕೊಂಡಿದ್ದೆ. ಜೊತೆಗೆ, ಕಚ್ಚಾ ವಸ್ತುಗಳನ್ನು ಪೂರೈಸಲು ಮುಂಬೈ, ದೆಹಲಿ, ಚೆನ್ನೈ ನಗರಗಳ ವರ್ತಕರೊಡನೆ ವಹಿವಾಟು ಇರಿಸಿಕೊಂಡಿದ್ದೆ. ಆದರೆ, ಕಚ್ಚಾವಸ್ತುಗಳ ಸರಬರಾಜು ದಾರರು ಕಳಪೆ ಗುಣ ಮಟ್ಟದ ವಸ್ತುಗಳನ್ನು ಸರಬರಾಜು ಮಾಡಿದ್ದು, 2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯಿàಕರಣ ಘೋಷಿಸಿದ್ದು ಉದ್ಯಮದಲ್ಲಿ ನಷ್ಟ ಹೊಂದಲು ಕಾರಣವಾಗಿದೆ’ ಎಂದು ತಿಳಿಸಿದ್ದಾನೆ. 2017ರಲ್ಲಿ ಕೇಂದ್ರ ಜಿಎಸ್‌ಟಿ ಜಾರಿ ಮಾಡಿದ್ದೂ ತನ್ನ ಉದ್ಯಮ ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಲು ಕಾರಣವಾಯಿತು ಎಂದೂ ರಕ್ಷಿತ್‌ ತಿಳಿಸಿದ್ದಾನೆ.

ಎಲ್ಲೆಲ್ಲಿಂದ ಸಾಲ?: ರಕ್ಷಿತ್‌, ಐಷಾರಾಮಿ ಜೀವನ ಅಳವಡಿಸಿಕೊಂಡಿದ್ದು, ತನ್ನ ಮಾತುಗಾರಿಕೆಯಿಂ
ದ ಎಸ್‌ಬಿಐ ರಾಜಾಜಿನಗರ ಶಾಖೆ, ಎಲ್‌ ಆ್ಯಂಡ್‌ ಟಿ ಹೌಸಿಂಗ್‌ ಫೈನಾನ್ಸ್‌ ಲಿ., ಟಾಟಾ ಕ್ಯಾಪಿಟಲ್‌,
ಯೆಸ್‌ ಬ್ಯಾಂಕ್‌ನ ಜೆಪಿನಗರ ಶಾಖೆ, ರತ್ನಾಕರ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಬಿಎಂಡಬ್ಲೂ ಇಂಡಿಯಾ
ಫೈನಾನ್ಸ್‌, ದಿವಾನ್‌ ಹೌಸಿಂಗ್‌ ಫೈನಾನ್ಸ್‌, ಝೆನ್‌ಲೆμನ್‌ ಸೇರಿ 13 ಬ್ಯಾಂಕ್‌ ಹಾಗೂ ಫೈನಾನ್ಸ್‌ ಸಂಸ್ಥೆಗಳಿಂದ ಹಾಗೂ 56 ಜನ ಹೂಡಿಕೆ ದಾರರಿಂದ ಹಣ ಪಡೆದಿದ್ದಾನೆ.

Advertisement

ಬರಬೇಕಾದ ಬಾಕಿಗಳು: ರಕ್ಷಿತ್‌ ತನಗೆ ಬೆಂಗಳೂರಿನ ಕಡಬಂ ಮೆಂಟಲ್‌ ಹೆಲ್ತ್‌ ಕೇರ್‌ ಸೇರಿ ಗ್ರಾಹಕರು, ವಿವಿಧ ವ್ಯಕ್ತಿಗಳಿಂದ 1.14 ಕೋಟಿ ರೂ.ಗಳ ಬಾಕಿ ಬರಬೇಕಿದೆ ಎಂದೂ ತಿಳಿಸಿದ್ದಾನೆ.

ಅಸ್ತಿ-ಪಾಸ್ತಿಗಳ ವಿವರ: ರಕ್ಷಿತ್‌ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ 13 ನಿವೇಶನಗಳನ್ನು ಹೊಂದಿದ್ದು, ಅವೆಲ್ಲವೂ ಸಾಲ ಪಡೆಯಲು ಬ್ಯಾಂಕ್‌ ಸೇರಿ ವಿವಿಧ ವಿತ್ತೀಯ ಸಂಸ್ಥೆಗಳಿಗೆ ಅಡ ಇರಿಸಿದ್ದಾನೆ.

ತಾನು ಬ್ಯಾಂಕ್‌ಗಳಿದ ಸಾಲ ಪಡೆದು ಖರೀದಿಸಿದ ಐಷಾರಾಮಿ ಕಾರ್‌ಗಳನ್ನು ಕೆಲವು ಹೂಡಿಕೆದಾರರು ಬೆದರಿಸಿ, ಬಲವಂತ ದಿಂದ ವರ್ಗಾವಣೆ ಪತ್ರಕ್ಕೆ ಸಹಿ ಮಾಡಿಸಿಕೊಂಡು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ, ಮತ್ತೆ ಕೆಲವರು ತನ್ನ ಬಾಟಿಕ್‌ನಿಂದ ಸಿದಟಛಿ ಉಡುಪುಗಳನ್ನು ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಹೊತ್ತೂಯ್ದಿದ್ದಾರೆ ಎಂದೂ ರಕ್ಷಿತ್‌ ಆರೋಪಿಸಿದ್ದಾನೆ.

ಸಿಪಿಸಿ ಕಾಯ್ದೆ ಅಥವಾ ಯಾವುದೇ ಕಾಯ್ದೆಗಳ ಅನ್ವಯ ಸಾಲಗಾರರಿಗೆ ಪರಭಾರೆಯಾಗದ ಆಸ್ತಿಗಳನ್ನು ನನಗೆ ರಕ್ಷಿಸಬೇಕು ಎಂದು ರಕ್ಷಿತ್‌ ಕೋರಿದ್ದಾನೆ. ತನ್ನನ್ನು ದಿವಾಳಿ ವ್ಯಕ್ತಿ ಎಂದು ಘೋಷಿಸಬೇಕು. ಎಲ್ಲಾ ಋಣಭಾರದಿಂದ ಮುಕ್ತಗೊಳಿಸಬೇಕು. ಜತೆಗೆ ನ್ಯಾಯಾಲಯ ತನಗೆ ಅಗತ್ಯ ಎನಿಸಿದ ಪರಿಹಾರ ನೀಡಬೇಕು ಎಂದೂ ಪ್ರಾರ್ಥಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next