Advertisement
30 ಹಾಸಿಗೆಗಳ ಆಸ್ಪತ್ರೆಆರು ಹಾಸಿಗೆಗಳ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿತು. ದಿನಂಪ್ರತಿ ಸುಮಾರು 300ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಉಳಿದಂತೆ ಹೆಚ್ಚಿನ ಚಿಕಿತ್ಸೆಗೆ ಜನರು ಪುತ್ತೂರು ಮತ್ತು ಮಂಗಳೂರಿಗೆ ತೆರಳಬೇಕು. 2007ರಲ್ಲಿ ಸರಕಾರವು ದ.ಕ. ಜಿಲ್ಲೆಯ ಕಡಬ, ಧರ್ಮಸ್ಥಳ ಹಾಗೂ ಉಪ್ಪಿನಂಗಡಿ ಸೇರಿದಂತೆ ರಾಜ್ಯದ ಒಟ್ಟು 24 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಗತ್ಯ ಹೆಚ್ಚುವರಿ ಹುದ್ದೆಗಳ ಸಮೇತ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿತ್ತು.
ಸಣ್ಣ ಪುಟ್ಟ ಚಿಕಿತ್ಸಾಲಯಗಳನ್ನು ಬಿಟ್ಟರೆ ಇಲ್ಲಿ ದೊಡ್ಡಮಟ್ಟದ ಖಾಸಗಿ ಆಸ್ಪತ್ರೆಗಳೂ ಇಲ್ಲ. ಮರ್ದಾಳದಲ್ಲಿ ಖಾಸಗಿ ಟ್ರಸ್ಟ್ ವತಿಯಿಂದ 400 ಹಾಸಿಗೆಗಳ ಆಸ್ಪತ್ರೆಗೆ ಶಂಕುಸ್ಥಾಪನೆ ಕಳೆದ ತಿಂಗಳು ನೆರವೇರಿದೆ. ಹಾಗೆಯೇ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್‌ನ ಬಳಿ ಬೆಂಗಳೂರು ಮೂಲದ ಕೆಥೋಲಿಕ್ ಕ್ರೈಸ್ತ ಧರ್ಮಭಗಿನಿಯರ ನೇತೃತ್ವದ ಆಸ್ಪತ್ರೆ ಆರಂಭಿಸುವ ವಿಚಾರ ಪ್ರಾಥಮಿಕ ಹಂತದಲ್ಲಿದೆ. ಕಡಬ ತಾಲೂಕು ಕೇಂದ್ರವಾಗಿ ಅಭಿವೃದ್ಧಿಯಾದರೆ ವೈದ್ಯಕೀಯ ಸೇವೆಗಳೂ ಬೆಳೆಯಬಹುದು. ಪ್ರಸ್ತುತ ಇಲ್ಲಿ ತಜ್ಞ ದಂತ ವೈದ್ಯರನ್ನು ಹೊರ ತುಪಡಿಸಿದರೆ ಇನ್ನಿತರ ಯಾವುದೇ ವೈದ್ಯ ಕೀಯ ವಿಭಾಗದಲ್ಲಿ ಪರಿಣಿತ ವೈದ್ಯರು ಲಭ್ಯರಿಲ್ಲ ಎಂಬುದು ವಾಸ್ತವ.
Related Articles
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ – 8 ಗ್ರಾಮಗಳ ವ್ಯಾಪ್ತಿ ಈ ಆಸ್ಪತ್ರೆಯದ್ದು. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಪಂಜ, ಯೇನೆಕಲ್, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶ ದವರೂ ಇಲ್ಲಿಗೇ ಚಿಕಿತ್ಸೆಗೆ ಬರುತ್ತಿ ರುವುದರಿಂದ ವ್ಯಾಪ್ತಿ ಹೆಚ್ಚಾಗಿದೆ.
Advertisement
ಸವಲತ್ತು ನೀಡುವುದಕ್ಕೆ ಆದ್ಯತೆ ಕಡಬದಲ್ಲಿ ಸಮುದಾಯ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಹಾಗೂ ಅಗತ್ಯ ಸವಲತ್ತುಗಳನ್ನು ನೀಡುವುದು ನಮ್ಮ ಮೊದಲ ಗುರಿ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಇಲ್ಲಿ ಆರಂಭಗೊಳ್ಳಲಿವೆ. ಅದೇ ರೀತಿ ಆರೋಗ್ಯ ಇಲಾಖೆಯ ತಾಲೂಕುಮಟ್ಟದ ಸೌಲಭ್ಯಗಳು ಕೂಡ ಲಭಿಸಿಲು ಕಾಲಾವಕಾಶ ಅಗತ್ಯವಿದೆ. ಹಂತ ಹಂತವಾಗಿ ಕಡಬಕ್ಕೂ ಕೂಡ ತಾಲೂಕು ಆಸ್ಪತ್ರೆಯ ಮಾನ್ಯತೆ ಹಾಗೂ ಸವಲತ್ತುಗಳು ಸಿಗಲಿವೆ.
-ಡಾ| ರಾಮಕೃಷ್ಣ ರಾವ್,
ಜಿಲ್ಲಾ ಆರೋಗ್ಯಾಧಿಕಾರಿ – ನಾಗರಾಜ್ ಎನ್.ಕೆ. ಕಡಬ