Advertisement

ಪಿಡಿಎ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಕೋಡ್‌ ಹ್ಯಾಕಥಾನ್‌

09:32 AM Jul 30, 2019 | Suhan S |

ಕಲಬುರಗಿ: ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗ ಹಾಗೂ ಗಣಕತಂತ್ರ ವಿಜ್ಞಾನ ವಿಭಾಗದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಮಟ್ಟದ ‘ಕೋಡ್‌ ಹ್ಯಾಕಥಾನ್‌’ ಎಂಬ 36 ಗಂಟೆಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ತಿಳಿಸಿದರು.

Advertisement

ನಗರದ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ‘ಹ್ಯಾಕಾಥಾನ್‌’ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಡಗಿರುವ ‘ಕೋಡಿಂಗ್‌’ ಚಾಣಾಕ್ಷತೆಯನ್ನು ಜಾಗೃತಗೊಳಿಸುವುದೇ ‘ಹ್ಯಾಕಥಾನ್‌’ ಮೂಲ ಉದ್ದೇಶವಾಗಿದೆ ಎಂದರು.

ಟೆಕ್ಯೂಪ್‌-3ರ ಅಡಿಯಲ್ಲಿ ಮೂರು ಹಂತಗಳಲ್ಲಿ ಕಾರ್ಯಾಗಾರ ನಡೆಯಲಿದೆ. ಆ.16ಕ್ಕೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗುವುದು. ನಂತರ ಆ.24 ಮತ್ತು 25ರಂದು ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೊನೆಯ ಹಂತದಲ್ಲಿ ‘ಕೋಡಿಂಗ್‌’ ಸೆ.7 ಮತ್ತು 8ರಂದು ಜರುಗಲಿದೆ. ವಿವಿಧ ರಾಜ್ಯಗಳ ಸುಮಾರು 50 ತಾಂತ್ರಿಕ ಮಹಾವಿದ್ಯಾಲಯಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ವಿವರಿಸಿದರು.

ಕೋಡ್‌ ಹ್ಯಾಕಥಾನ್‌ ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಇಂಡಿಯಾ ಹ್ಯಾಕಾಥಾನ್‌’ನ ಗುಣಲಕ್ಷಣಗಳನ್ನು ಹೊಂದಿದೆ. ಇಲ್ಲಿ ಭಾಗವಹಿಸುವ ತಂಡಗಳು ಕೂಡ ಸಮಾಜಕ್ಕೆ ಒಳಿತಾಗುವಂತಹ ಸಾಫ್ಟ್‌ವೇರ್‌ ತಯಾರಿಸುವ ಗುರಿ ಹೊಂದಿರುತ್ತಾರೆ. ಜತೆಗೆ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುವ ಹ್ಯಾಕಥಾನ್‌ ಪ್ರತಿ 6 ಜನ ವಿದ್ಯಾರ್ಥಿಗಳ ಗುಂಪುಗಳಲ್ಲಿ ಒಬ್ಬ ಮಹಿಳಾ ವಿದ್ಯಾರ್ಥಿ ಇರುವುದು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ, ಕೇವಲ ಮಹಿಳಾ ವಿದ್ಯಾರ್ಥಿಗಳೇ ಇರುವ ಗುಂಪಿಗೆ ಪ್ರಾಶಸ್ತ್ಯ ಕೊಡಲಾಗುವುದು ಎಂದರು.

ಸಂಸ್ಥೆಯ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಜಂಟಿ ಕಾರ್ಯದರ್ಶಿ ಗಂಗಾಧರ ಎಲಿ, ಆಡಳಿತ ಮಂಡಳಿ ಸದಸ್ಯರಾದ ವಿಜುಕುಮಾರ ದೇಶಮುಖ, ಡಾ| ಸಂಪತಕುಮಾರ ಲೋಯಾ, ಅನುರಾಧಾ ದೇಸಾಯಿ, ಸತೀಶ ಹಡಗಲಿಮಠ, ಅನಿಲಕುಮಾರ ಮರಗೋಳ, ಡಾ| ವೀರಭದ್ರ ನಂದ್ಯಾಳ, ಆಡಳಿತಾಧಿಕಾರಿ ಪ್ರೊ| ಸಿ.ಆರ್‌.ಬಡಾ, ಪ್ರಿನ್ಸಿಪಾಲ್ ಡಾ| ಎಸ್‌.ಎಸ್‌.ಹೆಬ್ಟಾಳ್‌, ಟೆಕ್ಯೂಪ್‌ ಸಂಚಾಲಕ ಪ್ರೊ| ಶರಣ ಪಡಶೆಟ್ಟಿ, ಸಂಯೋಜಕರಾದ ಮಾಹಿತಿ ವಿಭಾಗದ ಮುಖ್ಯಸ್ಥೆ ಡಾ| ಭಾರತಿ ಹರಸೂರ್‌, ಗಣಕತಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಸುವರ್ಣ ನಂದ್ಯಾಳ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next