ಬೆಂಗಳೂರು: ದೇಶದ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವನ್ನು ಹೆಚ್ಚಿಸಲು ಹಾಗೂ ಜನರಲ್ಲಿನ ದೇಶ ಭಕ್ತಿಯನ್ನು ಇಮ್ಮಡಿಗೊಳಿಸಲು ಕೇಂದ್ರ ಸರಕಾರ ಆಗಸ್ಟ್ 11ರಿಂದ 17ರ ವರೆಗೆ ಹಮ್ಮಿಕೊಂಡಿರುವ ಪ್ರತಿ ಮನೆಯಲ್ಲೂ ತಿರಂಗಾ (ಹರ್ ಘರ್ ತಿರಂಗಾ) ಅಭಿಯಾನದಡಿ ರಾಜ್ಯದಲ್ಲೂ ಸಿದ್ಧತೆ ಆರಂಭಿಸಿದೆ.
ರಾಷ್ಟ್ರಧ್ವಜವನ್ನು ಪ್ರತಿ ಮನೆಗೂ ಪೂರೈಕೆ ಯಾಗುವಂತೆ ಮಾಡಲು ಪ್ರತಿ ಗ್ರಾಮದಲ್ಲೂ ರಾಷ್ಟ್ರಧ್ವಜ ವಿತರಣ ಕೇಂದ್ರವನ್ನು ಸ್ಥಾಪಿಸ ಲಾಗುತ್ತದೆ. ಅದರ ಜತೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ರಾಷ್ಟ್ರಧ್ವಜ ವಿತರಣೆ ಮತ್ತು ಮಾರಾಟ ಮಾಡಲಾಗುತ್ತದೆ.ಅಂಗನವಾಡಿ ಕೇಂದ್ರಗಳಲ್ಲೂ ಆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.
ಅರಿವು ಮೂಡಿಸಲು ಹಲವು ವಿಧಾನ :
ಅಭಿಯಾನದ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಪ್ರಮುಖ ಸ್ಥಳಗಳಲ್ಲಿ ಕರಪತ್ರ ವಿತರಣೆ, ಸ್ಟಾಂಡ್, ಬ್ಯಾನರ್‌ಗಳ ಅಳವಡಿಕೆ ಮಾಡಲಾಗುತ್ತದೆ. ಖಾಸಗಿ ಮತ್ತು ಸರಕಾರಿ ಬಸ್ ಹಾಗೂ ಸರಕಾರದ ಎಲ್ಲ ಇಲಾಖೆಗಳ ವೆಬ್‌ಸೈಟ್‌ನಲ್ಲೂ ಅಮೃತಮಹೋತ್ಸವ ವೆಬ್‌ಸೈಟ್‌ನ ಲಿಂಕ್ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.