Advertisement

ಆದಿವಾಸಿ ಹಾಕಿ ಆಟಗಾರ್ತಿಯರ ನಿಗೂಢ ಸಾವು

02:28 AM Aug 14, 2019 | sudhir |

ರಾಂಚಿ: ಝಾರ್ಖಂಡ್‌ನ‌ ಸಿಮ್ಡೇಗ ಜಿಲ್ಲೆಯಲ್ಲಿ ಸುನಂದಿನಿ ಬಾಗೆ (23) ಮತ್ತು ಶ್ರದ್ಧಾ ಸೊರೆಂಗ್‌ (18) ಎಂಬಿಬ್ಬರು ಆದಿವಾಸಿ ಹಾಕಿ ಆಟಗಾರ್ತಿಯರ ಶವಗಳು ಮರದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.

Advertisement

ಯುವತಿಯರ ಮನೆಯವರು ಇದು ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳ ಅಂತ್ಯಸಂಸ್ಕಾರ ಮಾಡಲಾಗಿದೆ.

ಶ್ರದ್ಧಾ ಸಿಮ್ಡೇಗ ಜಿಲ್ಲೆಯ ಪತ್ರಟೋಲಿಯವರಾಗಿದ್ದು ಒಡಿಶಾದ ಸುಂದರ್‌ಗ್ರಹ ಜಿಲ್ಲೆಯ ಬಿರ್ಮಿತ್ರಪುರ ಎಂಬಲ್ಲಿ ಕಲಿಯುತ್ತಿದ್ದರು. ಸುನಂದಿನಿ ಸುಂದರ್‌ಗ್ರಹದ ಗಿಪಿಟೋಲ ಲಾಚ್ರ ಎಂಬ ಹಳ್ಳಿಯವರಾಗಿದ್ದು, ರೂರ್ಕೆಲಾದ ಹಾಕಿ ತರಬೇತಿ ಕೇಂದ್ರದಲ್ಲಿ ಪರಿಚಿತರಾದ ಬಳಿಕ ಇವರಿಬ್ಬರು ಸ್ನೇಹಿತೆಯರಾಗಿದ್ದರು. ಆಗಾಗ ಅವರು ಪರಸ್ಪರರ ಮನೆಗಳಿಗೆ ಹೋಗುವುದಿತ್ತು. ಸಾವಿನ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next