Advertisement

ಮ್ಯೂಸಿಯಂ ಆಗಲಿದೆ ಮಾಜಿ ರಾಷ್ಟ್ರಪತಿ ಬಿ.ಡಿ. ಜತ್ತಿ ಪಾಳು ಮನೆ

05:48 PM Jun 17, 2023 | Team Udayavani |

ಬಾಗಲಕೋಟೆ: ಮಾಜಿ ರಾಷ್ಟ್ರಪತಿ, ಮಾಜಿ ಸಿಎಂ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲೂ ಉಪ ಮುಖ್ಯಮಂತ್ರಿಯಂತಹ ಅತ್ಯುನ್ನತ ಹುದ್ದೆ ಅಲಂಕರಿಸಿ ಗಮನ ಸೆಳೆದಿದ್ದ, ಜಿಲ್ಲೆಯ ಹಿರಿಯ ಮುತ್ಸದ್ಧಿ ರಾಜಕಾರಣಿಯೊಬ್ಬರ ಹೆಸರಿನಲ್ಲಿ 65 ವರ್ಷಗಳ ಬಳಿಕ ಫೌಂಡೇಶನ್‌ ಹುಟ್ಟಿಕೊಂಡಿದ್ದು, ಮುತ್ತಾತ ಕಂಡಿದ್ದ ಹಲವು ಕನಸು-ಆಶಯ ಸಾಕಾರಗೊಳಿಸಲು ಅವರ ಮರಿಮೊಮ್ಮಗ ಇದೀಗ ಮುಂದಾಗಿದ್ದಾರೆ.

Advertisement

ಹೌದು, ಜಿಲ್ಲೆಯ ಜಮಖಂಡಿ ಕ್ಷೇತ್ರದಿಂದ ನಾಲ್ಕು ಬಾರಿಗೂ ಹೆಚ್ಚು ಆಯ್ಕೆಯಾಗಿದ್ದ, ಹಂಗಾಮಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಸಿಎಂ ಕೂಡ ಆಗಿದ್ದ ದಿ.ಬಿ.ಡಿ. ಜತ್ತಿ ಅವರ ಮರಿಮೊಮ್ಮಗ, ದೃವ ಚನ್ನಬಸವ ಜತ್ತಿ, ಬಾಗಲಕೋಟೆ ಜಿಲ್ಲೆಯಲ್ಲಿ ತಮ್ಮ ತಾತನ ಹೆಸರಿನಲ್ಲಿ ಒಂದಷ್ಟು ಸಾಮಾಜಿಕ ಸೇವೆಗೆ ಇಳಿದಿದ್ದಾರೆ.

ಕೊರೊನಾ-ಪ್ರವಾಹ ವೇಳೆ ನೆರವು: ದಿ| ಬಿ.ಡಿ. ಜತ್ತಿ ಹೆಸರಿನಲ್ಲಿ ಕಳೆದ 2020ರಲ್ಲಿ ಆರಂಭಿಸಿದ ಜತ್ತಿ ಫೌಂಡೇಶನ್‌ ಮೂಲಕ ಕೊರೊನಾ ವೇಳೆ ಸುಮಾರು 2 ಸಾವಿರ ಜನರಿಗೆ ಔಷಧೋಪಚಾರ, ಪ್ರವಾಹ ವೇಳೆ ಸಂತ್ರಸ್ತರಿಗೆ ಆಹಾರದ ಕಿಟ್‌ ವಿತರಿಸಿ, ಗಮನ ಸೆಳೆದಿದ್ದ ಈ ಫೌಂಡೇಶನ್‌, ಮೂರು ವರ್ಷಗಳಿಂದ ಸದ್ದಿಲ್ಲದೇ ಹಲವು ಸೇವೆಯಲ್ಲಿ ತೊಡಗಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಒಂದಷ್ಟು ಬದಲಾವಣೆಯಾಗಬೇಕು. ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ದಿ.ಜತ್ತಿ ಅವರ
ಆಶಯವನ್ನೇ ಇದೀಗ ಅವರ ಮರಿ ಮೊಮ್ಮಗ ದೃವ ಜತ್ತಿ ಈಡೇರಿಸುವತ್ತ ಸಾಗಿದ್ದಾರೆ.

ವಿದೇಶಿ ವಿದ್ಯಾರ್ಥಿಗಳ ನೆರವು: ಜತ್ತಿ ಫೌಂಡೇಶನ್‌ ಮೂಲಕ ವಿಷನ್‌ ಬಾಗಲಕೋಟೆ-2040 ಎಂಬ ಪರಿಕಲ್ಪನೆ ಹೊಂದಿದ್ದು, ಇಲ್ಲಿನ ಯುವಕರಿಗೆ ಕೌಶಲ್ಯ ಅಭಿವೃದ್ಧಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಮೂಲ ಆಶಯ. ಇದಕ್ಕಾಗಿ ಜತ್ತಿ ಫೌಂಡೇಶನ್‌, ಫ್ರೆಂಚ್‌ನ ವಾಣಿಜ್ಯ ಕಾಲೇಜು, ಭಾರತೀಯ ವಿದ್ಯಾರ್ಥಿ ಕಮ್ಯೂನಿಟಿ (ಐಎಸ್‌ಸಿ)ಯ ಸಹಕಾರ ಪಡೆದಿದೆ. ಪ್ರಾನ್ಸನ ಅಡೆನ್ವಿಯಾ ಬಿಜಿನೆಸ್‌ ಸ್ಕೂಲ್‌ನಲ್ಲಿ ಸೂರಜ್‌ ಎಂಬ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದು, ಈತ ಜತ್ತಿ ಫೌಂಡೇಶನ್‌ ಮುಂದಾಳತ್ವ ವಹಿಸಿರುವ ದೃವ ಜತ್ತಿ ಅವರ ಸ್ನೇಹಿತ. ಈ ಕಾಲೇಜಿನಲ್ಲಿ ಸಮಾಜ ಸೇವೆ ಅಧ್ಯಯನ ಮಾಡುವವರು, ಬೇರೆ ಸ್ಥಳಕ್ಕೆ ಹೋಗಿ ಅಲ್ಲಿ ಮಾಡಿದ ಒಳ್ಳೆಯ ಕೆಲಸಕ್ಕೆ ಅಂಕಗಳನ್ನು ನೀಡಲಾಗುತ್ತದೆ. ಹೀಗಾಗಿ ಈ ಪ್ರಾನ್ಸನಲ್ಲಿ
ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ನೆರವನ್ನು ದೃವ ಜತ್ತಿ ಪಡೆದಿದ್ದಾರೆ.

Advertisement

ಸಭಾಧ್ಯಕ್ಷರ ಕರೆಸಲು ತೀರ್ಮಾನ
ಜತ್ತಿ ಫೌಂಡೇಶನ್‌ ನಡೆಸುತ್ತಿರುವ ಈ ವಿದ್ಯಾ ದೇಗುಲ ಪ್ರೊಜಕ್ಟ್ ಪೂರ್ಣಗೊಳ್ಳುವ ಹಂತದಲ್ಲಿದ್ದು, ಜು.1ರ ಬಳಿಕ, ಸಮಗ್ರ
ಅಭಿವೃದ್ಧಪಡಿಸಿದ ಶಾಲೆಗಳನ್ನು ಆಯಾ ಶಾಲೆಯ ಮುಖ್ಯಾಧ್ಯಾಪಕರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಿಧಾನಸಭೆಯ ಸಭಾಧ್ಯಕ್ಷé ಯು.ಟಿ. ಖಾದರ, ಇಳಕಲ್ಲದ ಗುರುಮಹಾಂತ ಶ್ರೀಗಳು, ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಉಸ್ತುವಾರಿ ಸಚಿವ ಆರ್‌ .ಬಿ. ತಿಮ್ಮಾಪುರ, ಜಿಲ್ಲಾಧಿಕಾರಿಗಳು,
ಬೆಂಗಳೂರಿನಲ್ಲಿರುವ ಫ್ರಾನ್ಸ್‌ ಕೌನ್ಸಿಲ್‌ ಜನರಲ್‌, ಡಿಡಿಪಿಐ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು
ಜತ್ತಿ ಫೌಂಡೇಶನ್‌ ಮುಖ್ಯಸ್ಥ ದೃವ ಜತ್ತಿ ಉದಯವಾಣಿಗೆ ತಿಳಿಸಿದರು.

ವಿದ್ಯಾ ದೇಗುಲ ಪ್ರಾಜೆಕ್ಟ್
ಜತ್ತಿ ಫೌಂಡೇಶನ್‌ ಮೂಲಕ ಪ್ರಾಜೆಕ್ಟ ವಿದ್ಯಾ ದೇಗುಲ ಎಂಬ  ಕಾರ್ಯಕ್ರಮ ಆಯೋಜಿಸಿ, ಅದರಲ್ಲಿ ಫ್ರಾನ್ಸ್‌ನ 12
ವಿದ್ಯಾರ್ಥಿಗಳು, ಫೌಂಡೇಶನ್‌ನ 3ಕ್ಕೂ ಹೆಚ್ಚು ಪ್ರತಿನಿಧಿಗಳು ಕೂಡಿ ಎರಡು ತಂಡ ಮಾಡಿಕೊಳ್ಳಲಾಗಿದೆ. ಈ ಎರಡು ತಂಡಗಳು, ಜಿಲ್ಲೆಯ ಕಾಲತಿಪ್ಪಿ ಮತ್ತು ಗೋಲಭಾವಿ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದೆ.ಈ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ಸ್ವಚ್ಛತೆ, ಶಾಲೆಯ ಕೊಠಡಿ ನವೀಕರಣ, ಶೌಚಾಲಯ ನಿರ್ಮಾಣ, ಮಕ್ಕಳಿಗೆ ಕೌಶಲ್ಯ
ತರಬೇತಿ, ಪರಿಸರದ ಅರಿವು, ಸಸಿ ನೆಡುವಿಕೆ, ಎರಡೂ ದೇಶಗಳ ಸಂಸ್ಕೃತಿ-ವಿನಿಮಯ ಮಾಡಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next