Advertisement

ನಗರದ ಸರ್ಕಲ್‌ಗ‌ಳಿಗೆ ಕಾಯಕಲ್ಪ  ನೀಡಲು ನಗರಸಭೆ ನಿರ್ಧಾರ

08:20 AM Jul 24, 2017 | Harsha Rao |

ನಗರ: ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ನಗರದ ಸರ್ಕಲ್‌ಗ‌ಳು ಸುಗಮ ಸಂಚಾರದ ದೃಷ್ಟಿಯಿಂದ ಸವಾಲಾಗಿವೆ ಎನ್ನುವುದು ಹಲವು ವರ್ಷಗಳ ಸಾರ್ವಜನಿಕರ ಕೂಗು. ಇದೀಗ ಈ ಸರ್ಕಲ್‌ನ್ನು ವೈಜ್ಞಾನಿಕವಾಗಿ ಸರಿಪಡಿಸುವ ನಿಟ್ಟಿನಲ್ಲಿ  ಸ್ಥಳೀಯಾಡಳಿತ, ಪುತ್ತೂರು ನಗರಾಭಿವೃದ್ಧಿ ಯೋಜನ ಪ್ರಾಧಿಕಾರ ಹಾಗೂ ಶಾಸಕರು ಗಮನಹರಿಸಿದ್ದಾರೆ. ಅಭಿವೃದ್ಧಿಯೊಂದಿಗೆ ಜಿಲ್ಲಾ ಕೇಂದ್ರವಾಗಿ ಗುರುತಿಸಿಕೊಳ್ಳುವತ್ತ ನಗರ ಬೆಳೆಯುತ್ತಿದೆ. ನಗರದ ರಸ್ತೆಗಳಲ್ಲಿ 10ಕ್ಕೂ ಹೆಚ್ಚು ಅವೈಜ್ಞಾನಿಕ ಸರ್ಕಲ್‌ಗ‌ಳು ಇವೆ. ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವನ್ನು ಮನಗಂಡು ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

Advertisement

ಪತ್ರಾವೋ ಸರ್ಕಲ್‌ ಆದ್ಯತೆ
ಪುತ್ತೂರು-ಸುಳ್ಯ ಹೆದ್ದಾರಿಯ ಸುಳ್ಯ ಕಡೆಯಿಂದ ಪುತ್ತೂರು ನಗರಕ್ಕೆ ಅಥವಾ ಬೈಪಾಸ್‌ ಮೂಲಕ ತೆರಳುವ ಪತ್ರಾವೋ ಸರ್ಕಲ್‌ನಲ್ಲಿ ವಾಹನ ಸಂಚಾರ ನಿಜಕ್ಕೂ ಅಪಾಯಕಾರಿ. ಬೈಪಾಸ್‌ ಮೂಲಕ ಸುಳ್ಯ ಕಡೆಗೆ ತೆರಳುವ ಘನ ವಾಹನಗಳು ಯಾವ ಕಡೆಯಿಂದ ಮುಖ್ಯ ರಸ್ತೆಗೆ ಪ್ರವೇಶಿಸುತ್ತಾರೆ ಎಂಬುದನ್ನು ಊಹಿ ಸುವುದೂ ಕಷ್ಟ. ಇಲ್ಲಿ ಯಾವುದೇ ಸೂಚನಾ ಫ‌ಲಕವಾಗಲೀ, ನಿಯಮ ಪಾಲಿಸಬೇಕೆಂಬ ಸೂಚನೆಯಾಗಲಿ ಇಲ್ಲ. ಸೂಚನೆಗಳಿಗಿಂತಲೂ ಡಿವೈಡರಿಗೆ ಸುತ್ತು ಬರಬೇಕೆಂಬ ನಿಯಮ ಯಾರೂ ಪಾಲನೆ   ಮಾಡುತ್ತಿಲ್ಲ. ಇದೀಗ ಈ ಸರ್ಕಲ್‌ನ್ನು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಶಾಸಕರು ಪುಡಾಕ್ಕೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಾಗೂ ಪುಡಾ ಅಧ್ಯಕ್ಷ  ಪ್ರಸಾದ್‌ ಕೌಶಲ್‌ ಶೆಟ್ಟಿ, ಸಹಾಯಕ ಆಯುಕ್ತರು, ಸಂಚಾರ ಪೊಲೀಸರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಸರ್ಕಲ್‌ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ರೂಪುರೇಷೆ ಸಿದ್ಧಪಡಿಸಲಿದ್ದು, ಪುಡಾದ ವತಿಯಿಂದ ಅಭಿವೃದ್ಧಿ ಕೆಲಸ ನಡೆಯಲಿದೆ.

ಹೀಗೆ ಮಾಡಬಹುದು
ಸರ್ಕಲ್‌ನಿಂದ ಕೆಲವು ಮೀ. ಅಂತರದವರೆಗೆ ಡಿವೈಡರ್‌ ನಿರ್ಮಿಸಬಹುದು, ಸಂಚಾರ ಪೊಲೀಸ್‌ ಸಿಬಂದಿ ಸರ್ಕಲ್‌ಗ‌ಳಲ್ಲಿ ನಿಯೋಜಿಸಿ ನಿಗಾ ಇಡುವುದು, ಸರ್ಕಲ್‌ಗ‌ಳಲ್ಲಿ ಸಿ.ಸಿ. ಕೆಮರಾ ಅಳವಡಿಸಿ ಸೂಕ್ತ ನಿಗಾ ಇಡುವುದು, ನಿಯಮ, ಮಾರ್ಗಸೂಚಿಗಳನ್ನು ಅಳವಡಿಸುವುದು, ವೈಜ್ಞಾನಿಕ ರೀತಿಯಲ್ಲಿ ಸರ್ಕಲ್‌ಗ‌ಳನ್ನು ಮಾರ್ಪಾಡುಗೊಳಿಸುವುದು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಸುದಿನ ವರದಿ
ಬೈಪಾಸ್‌ ಆರಂಭದ ಪತ್ರಾವೋ ಸರ್ಕಲ್‌ ಅವೈಜಾnನಿಕ ರೀತಿಯಲ್ಲಿರುವ ಹಾಗೂ ಇಲ್ಲಿ ಸಂಚಾರ ನಿಯಮ ಪಾಲನೆ ಯಾಗದ ಕುರಿತು ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಿ ಸಂಬಂಧ ಪಟ್ಟವರ ಗಮನ ಸೆಳೆಯಲಾಗಿತ್ತು. ಆಗಿನ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ ಎಚ್‌.ಇ. ನಾಗರಾಜ್‌ ಹಾಗೂ ಸಹಾ ಯಕ ಕಮಿಷನರ್‌ ಡಾ| ರಾಜೇಂದ್ರ ಕೆ.ವಿ. ಅವರು  ಇದು ಗಂಭೀರ ಸಮಸ್ಯೆ ಎಂಬು ದನ್ನು ಒಪ್ಪಿಕೊಂಡಿದ್ದರು. ಸಹಾಯಕ ಕಮಿಷನರ್‌ ಅವರು ಇದರ ಅಭಿವೃದ್ಧಿ ಗಾಗಿ ಸ್ಥಳೀಯಾಡಳಿತ ನಗರ ಸಭೆಗೆ ಸೂಚಿಸಿರುವುದನ್ನೂ ತಿಳಿಸಿದ್ದರು.

ನಾವೇ ಅಭಿವೃದ್ಧಿಪಡಿಸುತ್ತೇವೆ: ನಗರಸಭೆ ಅಧ್ಯಕ್ಷೆ
ಪ್ರಮುಖ ಜಂಕ್ಷನ್‌ಗಳಲ್ಲಿ  ವೃತ್ತ  ನಿರ್ಮಿಸಿ ಅಭಿವೃದ್ಧಿಪಡಿಸಲು ನಗರಸಭೆ ಅನುದಾನ ಮಂಜೂರು ಮಾಡಿದ್ದು, ಅಭಿವೃದ್ಧಿಪಡಿಸಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲಾ°ಡು ಅವರು ಪುಡಾ ಅಧ್ಯಕ್ಷರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ. ಬೈಪಾಸ್‌ ಬಳಿ ಪತ್ರಾವೋ ವೃತ್ತ ಹಾಗೂ ಈ ಭಾಗದ ರಸ್ತೆಗಳನ್ನು ಅಗಲೀಕರಿಸಿ ಹೊಸದಾಗಿ ವೃತ್ತ ಮತ್ತು ರಸ್ತೆ ವಿಭಾಜಕ ರಚನೆ, ದರ್ಬೆ ಜಂಕ್ಷನ್‌ನಲ್ಲಿ ಹೊಸದಾಗಿ ವೃತ್ತ ಹಾಗೂ ರಸ್ತೆ ವಿಭಾಜಕ ರಚನೆ, ಬೈಪಾಸ್‌ ಮಂಜಲ್ಪಡ್ಪು ಜಂಕ್ಷನ್‌ ನಮನ ಟವರ್‌ ಬಳಿ ರಸ್ತೆ ವಿಸ್ತರಣೆಗೆ ಹೊಸ ವೃತ್ತ ಹಾಗೂ ರಸ್ತೆ ವಿಭಾಜಕ ರಚನೆ, ದರ್ಬೆಯಿಂದ ಎ.ಸಿ. ವಸತಿಗೃಹಕ್ಕೆ ಹೋಗುವ ರಸ್ತೆ ತಿರುಗುವಲ್ಲಿ  ರಸ್ತೆ ಅಗಲೀಕರಿಸಿ ಹೊಸ ವೃತ್ತ ಹಾಗೂ ರಸ್ತೆ ವಿಭಾಜಕ ರಚನೆ, ಬೊಳುವಾರು ರಸ್ತೆ ಉಪ್ಪಿನಂಗಡಿಗೆ ತಿರುಗುವಲ್ಲಿ  ವೃತ್ತ ರಚನೆ, ಮುಕ್ರಂಪಾಡಿಯಿಂದ ಮೊಟ್ಟೆತ್ತಡ್ಕ  ಹೋಗುವ ರಸ್ತೆಯ ಮುಕ್ರಂಪಾಡಿ ಜಂಕ್ಷನ್‌ನಲ್ಲಿ ರಸ್ತೆ ವಿಸ್ತರಿಸಿ ವೃತ್ತ ಹಾಗೂ ವಿಭಾಜಕ ರಚನೆ, ಪುತ್ತೂರು ಸಿಟಿ ಆಸ್ಪತ್ರೆ ಎದುರಿನಿಂದ ಬಸ್‌ ನಿಲ್ದಾಣಕ್ಕೆ ಹೋಗುವ ರಸ್ತೆ ಅಭಿವೃದ್ಧಿಗಾಗಿ ನಗರಸಭೆಯ ಅನುದಾನದಲ್ಲಿ ಒಟ್ಟು  47 ಲಕ್ಷ ರೂ. ಮಂಜೂರು ಮಾಡಿದ್ದು, ಇದರ ಕ್ರಿಯಾಯೋಜನೆ ಅನುಮೋದನೆಯಾಗಿದೆ. ಈಗಾಗಲೇ ಈ ಜಂಕ್ಷನ್‌ ಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲು ಸರ್ವೇ ಕಾರ್ಯ  ನಡೆಯುತ್ತಿದ್ದು, ಕೂಡಲೇ ಟೆಂಡರ್‌ ಕರೆದು ಇದರ ಅಭಿವೃದ್ಧಿಗಾಗಿ ನಗರಸಭೆಯು ಕಾರ್ಯ ಯೋಜನೆ ಹಾಕಿಕೊಂಡಿರುವುದರಿಂದ ನಗರ ಯೋಜನಾ ಪ್ರಾಧಿಕಾರದ ಅನುದಾನದಿಂದ ಜಂಕ್ಷನ್‌ ಅಭಿವೃದ್ಧಿಯನ್ನು ಮಾಡುವ ಅಗತ್ಯ ಇರುವುದಿಲ್ಲ. ಯೋಜನ ಪ್ರಾಧಿಕಾರದ  ಅನುದಾನದಲ್ಲಿ ನಗರದ ಬೇರೆ ಆವಶ್ಯಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದು ಅಧ್ಯಕ್ಷರು ಪತ್ರದಲ್ಲಿ ತಿಳಿಸಿದ್ದಾರೆ.

Advertisement

- ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next