Advertisement

ನವಜಾತ ಹೆಣ್ಣು ಮಗು ಬಿಟ್ಟು ಹೋದ ತಾಯಿ!

07:19 PM Sep 10, 2021 | Shreeram Nayak |

ಮುದ್ದೇಬಿಹಾಳ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದ ಮೂಲೆಯೊಂದರಲ್ಲಿ 15-20 ದಿನಗಳ ಹೆಣ್ಣು ಕೂಸು ಬಿಟ್ಟು ಹೋದ
ಘಟನೆ ನಡೆದಿದೆ.

Advertisement

ಬಸ್‌ ನಿಲ್ದಾಣದ ಹೋಟೆಲ್‌ ಪಕ್ಕದಲ್ಲಿ ಶಿಲಾನ್ಯಾಸದ ಕಲ್ಲುಗಳ ಕೆಳಗೆ ನೀಲಿ ದುಪ್ಪಟ್ಟಾದಲ್ಲಿ ಮಗು ಆಡವಾಡುತ್ತಿತ್ತು. ಬಹಳ ಹೊತ್ತಾದರೂ
ಮಗುವಿನ ಬಳಿ ತಾಯಿಯಾಗಲಿ, ಪಾಲಕರಾಗಲಿ ಇಲ್ಲದಿರುವುದರಿಂದ ಸಂಶಯಗೊಂಡು ಪ್ರಯಾಣಿಕರು ಪಕ್ಕದಲ್ಲಿದ್ದ ಸಾಧುವೊಬ್ಬನನ್ನು
ವಿಚಾರಿಸಿದಾಗ ಇದು ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬಳು ಮಗುವಿನೊಂದಿಗೆ ಕುಳಿತಿದ್ದಳು. ಮೂತ್ರ ವಿಸರ್ಜಿಸಿ ಬರುತ್ತೇನೆ. ತಾನು ಬರುವವರೆಗೂ ಮಗು ನೋಡಿಕೊಳ್ಳುವಂತೆ ಹೇಳಿ
ಹೋಗಿದ್ದಾಳೆ. ಒಂದು ಗಂಟೆಯ ಮೇಲಾದರೂ ಬಂದಿಲ್ಲ ಎಂದಾಗ ಅಲ್ಲಿದ್ದ ಪ್ರಯಾಣಿಕರು ನಡೆದ ವಿಷಯ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸಲು ಮುಂದಾದರೂ ಮಗುವಿನ ತಾಯಿ, ಪಾಲಕರ ಪತ್ತೆ ಆಗಲಿಲ್ಲ. ಆಗ ನಾಲತವಾಡದ ಮಹಿಳೆಯೊಬ್ಬಳು ತನಗೆ ನಾಲ್ವರು ಗಂಡು ಮಕ್ಕಳಿದ್ದಾರೆ. ಆದರೆ ಹೆಣ್ಣು ಮಕ್ಕಳಿಲ್ಲ. ಈ ಮಗು ನನಗೆ ಕೊಟ್ಟಲ್ಲಿ ತಾನು ಸಾಕುವುದಾಗಿ ತಿಳಿಸಿದ್ದಾಳೆ. ಈಕೆಯ ಬೇಡಿಕೆಗೆ ಸ್ಥಳದಲ್ಲಿದ್ದ ತೃತೀಯ ಲಿಂಗಿಯೊಬ್ಬಳು ದನಿಗೂಡಿಸಿ ಸ್ಪಂದಿಸಿದ್ದಾಳೆ. ಹೆಚ್ಚಿನ ತನಿಖೆಗಾಗಿ ಪೊಲೀಸ್‌
ಠಾಣೆಗೆ ಮಗು ಕರೆದೊಯ್ಯಲಾಗಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಮಗುವಿನ ಪಾಲಕರು ಪತ್ತೆ ಆಗದಿದ್ದಲ್ಲಿ ನಿಯಮಗಳನ್ವಯ
ನಾಲತವಾಡದ ಮಹಿಳೆಗೆ ದತ್ತು ಕೊಡಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಜಗ್ಗೇಶ್ ಮನೆಯ ಗಣಪನಿಗಿದೆ 34 ವರ್ಷಗಳ ಇತಿಹಾಸ|ಈ ವಿನಾಯಕನ ವೈಶಿಷ್ಟ್ಯ ಏನು ಗೊತ್ತಾ ?  

Advertisement

ಸಿಸಿ ಕ್ಯಾಮೆರಾ ಇಲ್ಲ: ಬಸ್‌ ನಿಲ್ದಾಣದಲ್ಲಿ ಮಗು ಬಿಟ್ಟು ಹೋದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಹೀಗಾಗಿ ಮಗುವಿನ ಪಾಲಕರನ್ನು
ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ಬಸ್‌ ನಿಲ್ದಾಣದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದು ಹಲವಾರು ಅಕ್ರಮ, ಅನೈತಿಕ
ಚಟುವಟಿಕೆಗಳಿಗೆ ಅನುಕೂಲವಾಗಿದ್ದು, ಕೂಡಲೇ ಎಲ್ಲೆಡೆ ಸಿಸಿ ಕ್ಯಾಮೆರಾ, ವಿದ್ಯುತ್‌ ಸೌಕರ್ಯ ಒದಗಿಸುವಂತೆ ಅಂಗಡಿಕಾರರು, ಪ್ರಯಾಣಿಕರು
ಆಗ್ರಹಿಸಿದ್ದಾರೆ.

ಇದೊಂದು ಕರುಳು ಹಿಂಡುವ ಘಟನೆ. ಮಗು ಬಿಟ್ಟುಹೋದ ಮಹಾತಾಯಿಗೆ ಏನುಕಷ್ಟ ಇದೆಯೋ ಗೊತ್ತಿಲ್ಲ. ಅನಾಥವಾಗಿರುವ ಮಗು ಸಾಕುವ ಹೊಣೆ ಸರ್ಕಾರದ ಸಂಸ್ಥೆಗಳುವಹಿಸಿಕೊಳ್ಳಬೇಕು. ದತ್ತು ಪಡೆಯುವವರು ಮುಂದೆ ಬಂದಲ್ಲಿ ನಿಯಮಗಳನ್ವಯ ದತ್ತುಕೊಟ್ಟು ಹೆಣ್ಣು ಮಗುಕಾಪಾಡಲು ಮುಂದಾಗಬೇಕು.
-ಶಿವಾನಂದ ಕಿರಿಶ್ಯಾಳ, ಸಮಾಜ ಸೇವಕ, ಹಿರೇಮುರಾಳ

ಮಗುವನ್ನು ವಿಜಯಪುರದ ಸರ್ಕಾರಿ ಅನಾಥಾಲಯಕ್ಕೆಕರೆದೊಯ್ಯಲಾಗಿದೆ. ಮಗು ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ಸೂಕ್ತ ಚಿಕಿತ್ಸೆ ನೀಡಿ ಗುಣಮುಖವಾದ ನಂತರ ಸರ್ಕಾರಿ ನಿಯಮದಂತೆ ದತ್ತುಕೊಡಲಾಗುತ್ತದೆ.
-ಸಾವಿತ್ರಿ ಗುಗ್ಗರಿ,
ಶಿಶು ಅಭಿವೃದ್ಧಿ ಯೋಜನಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next