ನರಗುಂದ: ಹೆತ್ತ ತಾಯಿ ,ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಈ ಎರಡನ್ನು ಎದೆಯಿಲ್ಲಿಟ್ಟು ಕಾಪಾಡಬೇಕು. ಪರಕೀಯರಿಂದ ಕಾರ್ಗಿಲ್ ಪ್ರದೇಶವನ್ನು ಕಾಪಾಡಿ ವಿಜಯ ಸಾಧಿಸಿ 25 ವರ್ಷಗಳು ಪೂರ್ಣಗೊಂಡಿವೆ. ಕಾರ್ಗಿಲ್ ವಿಜಯ ನಮ್ಮ ದೇಶದ ಹೆಮ್ಮೆ ಎಂದು ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.
Advertisement
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಸ್ವಾತಂತ್ರ್ಯ ವೀರ ಬಾಬಾಸಾಹೇಬರ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಪೂಜ್ಯ ಶ್ರೀ ಲಿಂ. ದೊರೆಸ್ವಾಮಿಗಳ ಪುಣ್ಯ ಸ್ಮರಣೋತ್ಸವ (ನಮ್ಮೂರ ಜಾತ್ರೆ-2024) ನಿಮಿತ್ತ ಕಾರ್ಗಿಲ್ ವಿಜಯೋತ್ಸವ 25ನೇ ವರ್ಷಾಚರಣೆ ಪ್ರಯುಕ್ತ ಚೊಳಚಗುಡ್ಡದಿಂದ ಸಾಗಿಬಂದ ಕಾರ್ಗಿಲ್ ಜ್ಯೋತಿ ರಥಯಾತ್ರೆ ಸ್ವಾಗತ ಹಾಗೂ 25 ಕಾರ್ಗಿಲ್ ಕಲಿಗಳಿಗೆ ಸನ್ಮಾನ ಮತ್ತು ಕಾರ್ಗಿಲ್ ಕಲಿಗಳ ಯಶೋಗಾಥೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಯುವ ದುರೀಣ ವಿವೇಕ ಯಾವಗಲ್ಲ, ಧಾರವಾಡ ಕಾರ್ಗಿಲ್ ಸ್ತೂಪದ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ಬಸವರಾಜ ಮುಕ್ಕುಪ್ಪಿ, ಸಾವಿತ್ರಿ ಯಶವಂತ ಕೋಲಕಾರ,ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ವೆಂಕಪ್ಪ ಭಾವಿ, ವೀರನಗೌಡ ಪಾಟೀಲ, ಷಣ್ಮುಖಪ್ಪ ಹಳೆಹೊಳಿ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಪತ್ರಯ್ಯ ಹಿರೇಮಠ, ಗಂಗಯ್ಯ ವಸ್ತ್ರದ ಹಾಗೂ ಚೊಳಚಗುಡ್ಡ ಮತ್ತು ತಾಲೂಕಿನ ಎಲ್ಲ ಮಾಜಿ ಸೈನಿಕರು ಉಪಸ್ಥಿತರಿದ್ದರು.