Advertisement

ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ಕೀ ವರ್ಡ್‌!

02:01 PM Apr 27, 2020 | mahesh |

ತಂತ್ರಜ್ಞಾನ ಸಂಸ್ಥೆ ಗೂಗಲ್‌, ಇತ್ತೀಚಿಗಷ್ಟೆ 6,000 ಕೋಟಿಗೂ ಹೆಚ್ಚು ಹಣವನ್ನು ಕೋವಿಡ್‌-19 ಸಹಾಯ ಕಾರ್ಯ ಗಳಿಗೆ ದೇಣಿಗೆ ನೀಡಿತ್ತು. ಈ ನೆರವು ಹಣ, ಜಾಹೀರಾತು, ಕ್ಲೌಡ್‌ ಸೇವೆ ಮತ್ತಿತರ ಮೂಲಗಳ  ಮುಖಾಂತರ ಸಂದಾಯವಾಗಲಿದೆ. ಅವೆಲ್ಲಕ್ಕಿಂತಲೂ ಮುಖ್ಯವಾಗಿ, ಜಗತ್ತಿನಾದ್ಯಂತ ವೈರಸ್‌ ವಿರುದ್ಧ ಹೋರಾಡು ತ್ತಿರುವ ಜನರಲ್ಲಿ ನೈತಿಕ ಸ್ಥೈರ್ಯ ತುಂಬುವ ಪುಟ್ಟ
ವಿಡಿಯೋವೊಂದನ್ನು ಸಂಸ್ಥೆ ಬಿಡುಗಡೆಗೊಳಿಸಿದೆ. ಆ ವಿಡಿಯೋದ ಘೋಷ ವಾಕ್ಯ Where There’s Help, There’s Hope. ಎಲ್ಲಿ ಸಹಾಯ ಲಭಿಸುವುದೋ, ಅಲ್ಲಿ ಭರವಸೆ ಇರುತ್ತದೆ ಎಂಬುದು ಅದರ ಅರ್ಥ. ಅಪಾಯವನ್ನು ಲೆಕ್ಕಿಸದೆ ಸೇವೆಯಲ್ಲಿ ತೊಡಗಿರುವ ಆರೋಗ್ಯ ಸಂಸ್ಥೆಯ ಕಾರ್ಯಕರ್ತರು, ಜನಸಾಮಾನ್ಯರು ಮತ್ತು ಸ್ವಯಂಸೇವಕರಿಗೆ, ಗೂಗಲ್‌ ಈ ವಿಡಿಯೋವನ್ನು ಅರ್ಪಿಸಿದೆ. ಒಂದೂವರೆ ನಿಮಿಷದ ವಿಡಿಯೋದಲ್ಲಿ ಲಾಕ್‌ ಡೌನ್‌ ಇರುವ ಪ್ರದೇಶಗಳಲ್ಲಿ ಜನರು ಯಾವ ರೀತಿ ಕೋವಿಡ್‌ ವಿರುದ್ಧ ಸಮರ ಸಾರುತ್ತಿದ್ದಾರೆ ಎಂಬುದನ್ನು ಮನೋಜ್ಞವಾಗಿ ಸೆರೆ ಹಿಡಿದು, ಅವರಿಗೆ ಥ್ಯಾಂಕ್ಸ್ ಹೇಳಿದೆ. ಗೂಗಲ್‌ ಬಿಡುಗಡೆಗೊಳಿಸಿರುವ ಮಾಹಿತಿಯಂತೆ, ಗೂಗಲ್‌ ಸರ್ಚ್‌ ಜಾಲತಾಣದಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟಿರುವ ಕೀವರ್ಡ್‌ “ಸಹಾಯ ಮಾಡುವುದು ಹೇಗೆ?’ ಎಂಬುದು. ಜನರು ಈ ಸಂದರ್ಭದಲ್ಲಿ, ತಾವು ಯಾವ ರೀತಿ ಇತರರಿಗೆ ನೆರವಾಗಬಹುದು ಎಂದು ಚಿಂತಿಸುತ್ತಿರುವುದು ನಿಜಕ್ಕೂ ಆಶಾಭಾವದ ಸಂಕೇತ. ಈ ಹಿನ್ನೆಲೆಯಲ್ಲಿಯೇ, ಗೂಗಲ್‌ ಈ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ವಿಡಿಯೊ ಕೊಂಡಿ- tinyurl.com/yx6vh7xx

Advertisement
Advertisement

Udayavani is now on Telegram. Click here to join our channel and stay updated with the latest news.

Next