Advertisement

ಸಿಪಾಯಿಗಳ ರೋಚಕ ಸಾಹಸ

11:50 AM Feb 25, 2018 | |

ಬೆಂಗಳೂರು: ವೇಗವಾಗಿ ಓಡುತ್ತಿರುವ ಕುದುರೆಯನ್ನು ನಿಯಂತ್ರಿಸುವುದೇ ಒಂದು ಕಲೆ. ಇದನ್ನು ಕರಗತ ಮಾಡಿಕೊಂಡಿರುವ ಸೈನಿಕರು, ಕುದುರೆ ಮೇಲಿಂದ ಮಾಡುವ ಸಾಹಸ ನೋಡುವುದೇ ಕಣ್ಣಿಗೆ ಆನಂದ.

Advertisement

ಶನಿವಾರ ಸಂಜೆ ಹಳೇ ವಿಮಾನ ನಿಲ್ದಾಣ ರಸ್ತೆಯ ಎಎಸ್‌ಸಿ ಕಾಲೇಜು ಮತ್ತು ತರಬೇತಿ ಕೇಂದ್ರದ ಪೋಲೊ ಮೈದಾನದಲ್ಲಿ ಸೈನಿಕರು ಆಕರ್ಷಕ ಕುದುರೆ ಸಾಹಸ ಪ್ರದರ್ಶನ ನಡೆಸಿದರು. ಕುದುರೆಯನ್ನು ವೇಗವಾಗಿ ಓಡಿಸಿಕೊಂಡು ಬಂದು ಈಟಿ, ಖಡ್ಗದ ಮೂಲಕ ನೆಲದ ಮೇಲೆ ಜೋಡಿಸಿಟ್ಟ ವಸ್ತುವನ್ನು ಎತ್ತಿಕೊಂಡು ಹೋಗುವುದು, ಮೂರು ನಾಲ್ಕು ಕುದುರೆಗಳು ಒಟ್ಟೊಟ್ಟಿಗೆ ವೇಗವಾಗಿ ಬರುವುದು ಹೀಗೆ ಕುದುರೆ ಮೂಲಕ ಹಲವು ರೀತಿಯ ಸಾಹಸ ಮೆರೆದರು.

ಕರಾಟೆ ಪ್ರದರ್ಶನ, ಮಿಲಿಟರಿ ಬ್ಯಾಂಡ್‌ ವಾದನ, ದೇಹಧಾಡ್ಯ, ಕುದುರೆ ಮೂಲಕ ಬಾರ್‌ ಜಂಪ್‌ ಸ್ಪರ್ಧೆ, ಹೆಸರಗತ್ತೆ ಬಳಸಿಕೊಂಡು ಸಾಹಸ ಹೀಗೆ ಸೈನಿಕರ ವಿವಿಧ ರೀತಿಯ ಸಾಹಸ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.ರಾಜ್ಯಪಾಲ ವಿ.ಆರ್‌.ವಾಲಾ. ಮೇಜರ್‌ ಸಚಿನ್‌ ಕುಮಾರ್‌ ಸೇರಿದಂತೆ ಹಲವರು ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next