Advertisement
ಮಿಥಾಲಿ ರಾಜ್ ವಿರುದ್ಧ ಬಿಸಿಸಿಐಗೆ ಪತ್ರ ಬರೆದಿರುವ ಪೊವಾರ್ ಹಲವಾರು ಆರೋಪಗಳನ್ನು ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಪೊವಾರ್ ಸಿಡಿದಿದ್ದರು. ಇದೀಗ ಪೊವಾರ್ ಮಾತಿಗೆ ಪ್ರತಿಕ್ರಿಯಿಸಿರುವ ಮಿಥಾಲಿ ರಾಜ್ “ನನ್ನ ಇಷ್ಟು ವರ್ಷದ ಕ್ರಿಕೆಟ್ ಜೀವನದ ಅತ್ಯಂತ ಕರಾಳ ದಿನವಿದು, 20 ವರ್ಷಗಳಿಂದ ಕ್ರಿಕೆಟ್ ಆಡಿಕೊಂಡು ಬಂದಿದ್ದೇನೆ. ಕಠಿನ ಶ್ರಮ ಹಾಕಿದ್ದೇನೆ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಇಂದು ನನ್ನ ದೇಶಭಕ್ತಿ ಹಾಗೂ ಕೌಶಲವನ್ನೇ ಪ್ರಶ್ನೆ ಮಾಡಲಾಗುತ್ತಿದೆ. ದೇವರೇ ಮುಂದೆ ಶಕ್ತಿ ನೀಡಬೇಕಿದೆ’ ಎಂದು ಮಿಥಾಲಿ ರಾಜ್ ನೋವಿನಿಂದ ಹೇಳಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಿಂದ ಮಿಥಾಲಿ ರಾಜ್ ಅವರನ್ನು ಹೊರಗಿಡಲಾಗಿತ್ತು. ನಾಯಕಿ ಹರ್ಮನ್‌ಪ್ರೀತ್ ಈ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಇದರಿಂದ ಮಿಥಾಲಿ ಸಿಟ್ಟಾಗಿದ್ದರು. ತಮ್ಮನ್ನು ಹೊರಗಿಟ್ಟಿರುವುದರ ಹಿಂದೆ ಕೆಲವು ಶಕ್ತಿಗಳ ಕೈವಾಡವಿದೆ. ನನ್ನ ಕ್ರಿಕೆಟ್ ಭವಿಷ್ಯದನ್ನೇ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊವಾರ್, ಎಡುಲ್ಜಿ ಹಾಗೂ ಕೌರ್ ವಿರುದ್ಧ ಮಿಥಾಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪೊವಾರ್, “ಮಿಥಾಲಿ ಬ್ಲ್ಯಾಕ್‌ವೆುàಲ್ ಮಾಡುತ್ತಿದ್ದರು. ಕೋಚ್‌ಗೆ ಒತ್ತಡ ತರುವಂತಹ ಕೆಲಸಕ್ಕೆ ಕೈ ಹಾಕುತ್ತಿದ್ದರು. ಸ್ವಾರ್ಥ ಚಿಂತನೆ ಹೊಂದಿದ್ದರು. ಒಂಟಿಯಾಗಿರಲು ಬಯಸುತ್ತಿದ್ದರು. ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದರೆ ಸಿಟ್ಟಾಗುತ್ತಿದ್ದರು. ಪಂದ್ಯಾವಳಿಯ ನಡುವೆಯೇ ಮನೆಗೆ ವಾಪಸಾಗುವ ಬೆದರಿಕೆಯನ್ನೂ ಒಡ್ಡಿದ್ದರು’ ಎಂದು ಪೊವಾರ್ ಬಿಸಿಸಿಐಗೆ ನೀಡಿದ ವರದಿಯಲ್ಲಿ ಉಲ್ಲೇಖೀಸಿದ್ದಾರೆ.