ದೇವರಹಿಪ್ಪರಗಿ: ಭೈರವಾಡಗಿ ಸೇರಿದಂತೆ ಸಮಗ್ರ ಡೋಣಿ ತೀರವೇ 12ನೇ ಶತಮಾನದ ಬಸವಾದಿ ಶರಣರ ತಾಣವಾಗಿತ್ತು ಎಂದು ಕಡಕೋಳ ಮಹಾಲಿಂಗಯ್ಯ ಸ್ವಾಮೀಜಿ ಹೇಳಿದರು. ಭೈರವಾಡಗಿ ಗ್ರಾಮದಲ್ಲಿ ಅಖೀಲ ಕರ್ನಾಟಕ ಬಸವ ಸಾಹಿತ್ಯ ಪರಿಷತ್ ಹಮ್ಮಿಕೊಮಡಿದ್ದ ಕಬೀರನಾಥ ಜಯಂತ್ಯುತ್ಸವ ಹಾಗೂ ರಾಜ್ಯಮಟ್ಟದ ಕಬೀರನಾಥ ಸಾಧಕರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭೈರವಾಡಗಿ ಕೇವಲ ಕಬೀರನಾಥರ ಜನ್ಮ ಭೂಮಿಯಲ್ಲ ಇದು ಶರಣ ಚನ್ನಬಸವಣ್ಣ ಜನ್ಮಭೂಮಿ. ಈ ಕುರಿತು ಅಗತ್ಯ ಅಧ್ಯಯನ ಅಗತ್ಯವಾಗಿದೆ. ತಾಲೂಕಿನ ಶಿವಣಗಿ, ದೇವರಹಿಪ್ಪರಗಿ, ಸಾತಿಹಾಳ, ಯಾಳವಾರ ಗ್ರಾಮಗಳಲ್ಲಿ ಜನಿಸಿದ ಶರಣರ ಕುರಿತು ನಮಗೆ ತಿಳಿದಿದೆ. ಅಂತೆಯೇ ಇಡಿ ಡೋಣಿ ತೀರವೇ ಬಸವಾದಿ ಶರಣರ ಜನ್ಮಭೂಮಿ ಅಂದರೂ ತಪ್ಪಿಲ್ಲ ಎಂದರು.
ಸಿಂದಗಿಯ ಹಿರಿಯ ಉಪನ್ಯಾಸಕ ಬಿ.ಎನ್.ಪಾಟೀಲ ಮಾತನಾಡಿ, ಲೌಕಿಕ ಹಾಗೂ ಅಲೌಕಿಕಗಳ ನಡುವಿನ ವ್ಯತ್ಯಾಸ ಎಂಥದು ಎಂಬುದನ್ನು ಸಂತರು, ಶರಣರು ತಮ್ಮ ನಡೆ, ನುಡಿ, ಅನುಭವಗಳ ಮೂಲಕ ನಮಗೆ ತಿಳಿಸಿದ್ದಾರೆ. ಇಂಥ ವಿಚಾರಗಳ ಕುರಿತು ನಾವೆಲ್ಲ ಅರಿಯಬೇಕಾಗಿದೆ ಎಂದರು.ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ,ಭಾರತೀಯ ಸೇನೆ ಕ್ಯಾಪ್ಟನ್ ಸುದರ್ಶನ ಮಡ್ಡೆಪ್ಪಗೋಳ, ನಿವೃತ್ತ ಯೋಧ ವಿಜಯಕುಮಾರ ಕೋಟ್ಯಾಳ, ನಿವೃತ್ತ ಉಪನ್ಯಾಸಕ ಕೆ.ಎಚ್. ಸೋಮಾಪುರ ಮಾತನಾಡಿದರು.
ಈ ವೇಳೆ ರಾಜ್ಯಮಟ್ಟದ ಕಬೀರನಾಥ ಸಾಧಕರತ್ನ ಪ್ರಶಸ್ತಿ ಪುರಸ್ಕೃತರಾದ ಬಸಯ್ಯ ಹಿರೇಮಠ, ಬಿ.ಎನ್.ಪಾಟೀಲ (ಅಧ್ಯಾತ್ಮ), ರೇವಣಸಿದ್ದಯ್ಯ ಹಿರೇಮಠ (ಸಂಗೀತ), ಕಾಶೀನಾಥ ಸಾಲಕ್ಕಿ, ಚಿದಾನಂದ ಪೂಜಾರಿ(ದಾನಿಗಳು), ಶಿವಾನಂದ ಪಾಟೀಲ (ಸಮಾಜ ಸೇವೆ), ಪ್ರಭಾಕರ ಖೇಡದ (ಸಾಹಿತ್ಯ), ಎ.ಕೆ. ಹಿರೇಮಠ (ಪತ್ರಿಕಾ ಮಾಧ್ಯಮ), ಬಸವರಾಜ ಬಾಗೇವಾಡಿ (ಶಿಕ್ಷಕರು) ಹಾಗೂ ಎಸ್ಸೆಸ್ಸೆಲ್ಸಿ -ಪಿಯುಸಿ ಸಾಧಕರು, ಆರೋಗ್ಯ, ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಪ್ರವಚನಕಾರ ಮಡಿವಾಳಪ್ಪಗೌಡ ಹಿರೇಗೌಡರ ಯನ್ನು ವಹಿಸಿದ್ದರು. ಅಖೀಲ ಕರ್ನಾಟಕ ಬಸವ ಸಾಹಿತ್ಯ ಪರಿಷತ್ ಭೈರವಾಡಗಿ ಅಧ್ಯಕ್ಷ ಜಿ.ಎಸ್. ಬಿರಾದಾರ, ಶೇಖರ ಗೊಳಸಂಗಿ, ಅಬ್ದುಲ್ ಬಳಗಾನೂರ, ಬಂದಗಿಸಾಬ್ ಸಲಾದಳ್ಳಿ, ರಾಜುಗೌಡ ನಾಡಗೌಡ, ನಜೀರಸಾಬ್ ಪಾನಪರೋಷ್, ಐ.ಎಲ್. ಶಾಬಾದಿ, ಎಸ್.ಬಿ. ಹೊಕ್ಕುಂಡಿ, ಸಿ.ಕೆ. ಕಿರಣಗಿ, ಅಪ್ಪು ಪಟೇದ, ಶರಣು ಕಾಟಕರ, ಸೋಮು ತಳವಾರ, ಎಸ್.ಜಿ. ತಾವರಖೇಡ, ರಾಘವೇಂದ್ರ ಉಮ್ಮರಗಿ, ಅಶೋಕ
ಬಿರಾದಾರ, ಶಿವಾನಂದ ನಾಗೂರ, ಮಲ್ಲೇಶಪ್ಪ ಔರಾದಿ, ಮೈನುದ್ಧೀನ್ ಹಡಗಲಿ, ಪಾವಡೆಪ್ಪ ಕುಮಟಗಿ, ಬುಡ್ಡೇಸಾಬ್ ಇನಾಮದಾರ ಇದ್ದರು.