ಬೆಂಗಳೂರು: ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯ ಸುಗುಣ ಹಾಸ್ಪಿಟಲ್‌ನಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಜುರಿಯನ್ ಸಿ7 ಸರಣಿಯ ಹೃದಯ ಕ್ಯಾಥೆಟರೈಸೇಷನ್ ಕ್ಯಾಥ್‌ಲ್ಯಾಬ್ ಅನ್ನು ಜಯದೇವ ಹೃದಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಈ ಕಾಥ್ಯಲ್ಯಾಬ್ ಹೃದ್ರೋಗ ಆಸ್ಪತ್ರೆಯ ಬಹಳ ಮುಖ್ಯ ಉಪಕರಣ. ಹೃದ್ರೋಗ ವೈದ್ಯರ ಪಾಲಿಗೆ ಇದು “ವರ್ಕ್ ಹಾರ್ಸ್’ ಇದ್ದಂತೆ. ಇದನ್ನು ಬಳಸಿ ಆಂಜಿಯೋಗ್ರಾಂ, ಆ್ಯಂಜಿಯೋಪ್ಲಾಸ್ಟಿ, ಸ್ಟೆಂಟಿಂಗ್ ಮತ್ತು ಫೇಸ್‌ಮೇಕರ್ ಮಾಡಲಾಗುತ್ತದೆ ಎಂದರು.
ಭಾರತದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಮಂದಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೆಚ್ಚಾಗಿ ಮಕ್ಕಳಲ್ಲಿ ಹೃದ್ರೋಗ ಮತ್ತು ಮಿದುಳು ರೋಗ (ಬ್ರೈನ್ ಅಟಾಕ್) ಹೆಚ್ಚಾಗುತ್ತಿದೆ. ಅಂಕಿ ಅಂಶದ ಪ್ರಕಾರ 40 ವರ್ಷದೊಳಗಿನವರಲ್ಲಿ ಶೇ.25 ರಷ್ಟು ಸಾವುಗಳು ಹಾಗೂ ಶೇ.25 ರಷ್ಟು ಹೃದಯಾಘಾತಗಳು ಸಂಭವಿಸುತ್ತಿವೆ.
3-5 ಕಿ.ಮೀ.ಗೆ ಒಂದು ಆಸ್ಪತ್ರೆ: ಹೃದಯಾಘಾತ ಸಂಭವಿಸಿದ ನಾಲ್ಕರಿಂದ ಆರು ಗಂಟೆಯೊಳಗೆ ಹಾಗೂ ಬ್ರೈನ್‌ಸ್ಟ್ರೋಕ್ ಆದ 4 ಗಂಟೆಯೊಳಗೆ ಚಿಕಿತ್ಸೆ ನೀಡುವ ಅಗತ್ಯವಾಗಿದ್ದು, ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರತಿ 3ರಿಂದ 5 ಕಿ.ಮೀ. ಅಂತರದಲ್ಲಿ ಕ್ಯಾಥ್‌ಲ್ಯಾಬ್ ಒಳಗೊಂಡ ಒಂದು ಸುಸಜ್ಜಿತ ಹೃದ್ರೋಗ ಆಸ್ಪತ್ರೆ ಇರಬೇಕು. ಬೆಂಗಳೂರು ಪಶ್ಚಿಮ ಭಾಗದ ಸುಗುಣ ಆಸ್ಪತ್ರೆಯಲ್ಲಿ ಅತ್ಯುತ್ತಮ ಕಾರ್ಡಿಯಾಕ್ ಕ್ಯಾಥ್‌ಲ್ಯಾಬ್ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.
ಶಾಸಕ ಸುರೇಶ್‌ಕುಮಾರ್ ಮಾತನಾಡಿ, ನಮ್ಮ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ವಿಶ್ವ ಮಟ್ಟದ ಕಾರ್ಡಿಯಾಕ್ ಕ್ಯಾಥ್‌ಲ್ಯಾಬ್ ಆಗಿರುವುದು ಪಶ್ಚಿಮ ಭಾಗದ ಜನರಿಗೆ ಅನುಕೂಲವಾಗಲಿದೆ. ರಾಜಕುಮಾರ್ ರಸ್ತೆಯಲ್ಲಿ ಉತ್ತಮ ಆಸ್ಪತ್ರೆಗಳಾಗಿರುವುದರಿಂದ ಇದನ್ನು ಆರೋಗ್ಯ ರಸ್ತೆ ಎಂತಲೂ ಕರೆಯಬಹುದು ಎಂದರು.
ಸುಗುಣ ಹಾರ್ಟ್ ಸೆಂಟರ್ ಆಡಳಿತ ನಿರ್ದೇಶಕ ಡಾ. ರವೀಂದ್ರ, ಈ ಭಾಗದಲ್ಲಿ ಕ್ಯಾಥ್‌ಲ್ಯಾಬ್ ಹೊಂದಿದ ಮೊಟ್ಟ ಮೊದಲ ಆಸ್ಪತ್ರೆ ಸುಗುಣ ಆಗಿದೆ ಎಂದರು. ಸುಗುಣ ಹಾರ್ಟ್‌ಸೆಂಟರ್ ಪ್ರೈ.ಲಿ., ಚೇರ¾ನ್ ಸುಗುಣ ರಾಮಯ್ಯ, ಡಾ. ನಾಗೇಂದ್ರಕುಮಾರ್, ಕಣ್ವ ಡಯಾಗ್ನೊàಸ್ಟಿಕ್ ಡಾ.ವೆಂಕಟಪ್ಪ, ಡಾ.ಸಂದೀಪ್ ಶಂಕರ್ ಇತರರು ಭಾಗವಹಿಸಿದ್ದರು.